ಟರ್ನಿಂಗ್ ಪಾಯಿಂಟ್ಸ್

Author : ಗೋಪಾಲಕೃಷ್ಣ ಮಧ್ಯಸ್ಥ (ಜಿ.ಕೆ.ಮಧ್ಯಸ್ಥ)

Pages 208

₹ 170.00




Year of Publication: 2012
Published by: ವಸಂತ ಪ್ರಕಾಶನ
Address: ನಂ 360, 10ನೇ ಬಿ- ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಜಯನಗರ, ಬೆಂಗಳೂರು-11

Synopsys

‘ಟರ್ನಿಂಗ್ ಪಾಯಿಂಟ್ಸ್’ ಎಪಿಜೆ ಅಬ್ದುಲ್ ಕಲಾಂ ಅವರ ಕೃತಿಯನ್ನು ಲೇಖಕ ಜಿ.ಕೆ. ಮಧ್ಯಸ್ಥ ಕನ್ನಡಕ್ಕೆ ಅನುವಾದಿಸಿದ್ದಾರೆ. ತಮ್ಮ ಬದುಕಿನ ಪ್ರತೀ ಹಂತದಲ್ಲೂ ಬದ್ಧತೆಯನ್ನು ಕಾಯ್ದುಕೊಂಡ ಸಾಮಾನ್ಯ ಹುಡುಗನೊಬ್ಬ ದೇಶದ ಅತ್ಯುನ್ನತ ಹುದ್ದೆಗೇರಿದ ರೋಚಕ ಕತೆಯನ್ನು ಅವರದೇ ಮಾತುಗಳಲ್ಲಿ ಈ ಕೃತಿ ಹಿಡಿದಿಟ್ಟಿದೆ. ಅಬ್ದುಲ್ ಕಲಾಂ ಅವರು ಬರೆದ ಅವರ ಆತ್ಮಕಥನವನ್ನು ಅಷ್ಟೇ ಸೂಕ್ಷ್ಮವಾಗಿ ಪತ್ರಕರ್ತ, ಲೇಖಕ ಜಿ.ಕೆ. ಮಧ್ಯಸ್ಥ ಅವರು ಕನ್ನಡೀಕರಿಸಿದ್ದಾರೆ.

About the Author

ಗೋಪಾಲಕೃಷ್ಣ ಮಧ್ಯಸ್ಥ (ಜಿ.ಕೆ.ಮಧ್ಯಸ್ಥ)
(16 August 1945)

ಸಾಹಿತ್ಯ ಮತ್ತು ಪತ್ರಿಕೋದ್ಯಮ ಎರಡರಲ್ಲೂ ಸಮಾನ ಆಸಕ್ತಿ ಇರುವ ಗೋಪಾಲ ಕೃಷ್ಣ ಮಧ್ಯಸ್ಥ (ಜಿ.ಕೆ. ಮಧ್ಯಸ್ಥ) ಅವರು ಪ್ರಜಾವಾಣಿ, ವಿಜಯ ಕರ್ನಾಟಕ ಸೇರಿದಂತೆ ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ಪತ್ರಿಕೆಗಳ ಭಾಷೆಯ ಬಳಕೆ ಮತ್ತು ಬದಲಾವಣೆಯನ್ನು ವಿಶ್ಲೇಷಣೆ ಮಾಡುತ್ತಾರೆ. ನಿವೃತ್ತಿಯ ನಂತರ ಉಡುಪಿಯಲ್ಲಿ ನೆಲೆಸಿರುವ ಅವರು ‘ದುಡ್ಡು ಕಾಸು', 'ಪದೋನ್ನತಿ' ಎಂಬ ಎರಡು ಅಂಕಣ ಬರಹಗಳನ್ನು ಪುಸ್ತಕಗಳಾಗಿ ಪ್ರಕಟಿಸಿದ್ದಾರೆ. ಗೋಪಾಲಕೃಷ್ಣ ಮಧ್ಯಸ್ಥ ಜನಿಸಿದ್ದು ಕಾಸರಗೋಡು ಸಮೀಪದ ಕುಂಜ್ಯಾರುವಿನಲ್ಲಿ. ...

READ MORE

Related Books