ಕಂದುಕೂರಿ ವೀರೇಶಲಿಂಗಂ

Author : ಸ. ರಘುನಾಥ

Pages 104

₹ 100.00




Year of Publication: 2007
Published by: ದ್ರಾವಿಡ ವಿಶ್ವವಿದ್ಯಾಲಯ
Address: ಶ್ರೀನಿವಾಸವನಂ, ಕುಪ್ಪಂ-517425

Synopsys

'ಕಂದುಕೂರಿ ವೀರೇಶಲಿಂಗಂ' ಸಂಕ್ಷಿಪ್ತ ಆತ್ಮಕಥೆಯನ್ನು ಸ. ರಘುನಾಥ ಅವರು ಕನ್ನಡೀಕರಿಸಿದ್ದಾರೆ. 19 ನೇ ಶತಮಾನ ಭಾರತೀಯ ಸಾಮಾಜಿಕ ಮತ್ತು ರಾಜಕೀಯ ಇತಿಹಾಸದಲ್ಲಿ ತುಂಬಾ ಮಹತ್ವದ ಕಾಲ,.ಪುನರುತ್ಥಾನಯುಗ, ಈ ಯುಗವನ್ನು ರೂಪಿಸಿದ, ನಡೆಸಿದ ಪ್ರತಿಭಾ ಮೂರ್ತಿಗಳು ಹಲವು ಜನ. ಒಂದು ಪ್ರಾಂತ್ಯದಿಂದಲ್ಲ, ಭಾರತದ ಹಲವಾರು ಪ್ರಾಂತ್ಯಗಳಿಂದ ಇಂಥಾ ತ್ರಿವಿಕ್ರಮ ಮೂರ್ತಿಗಳು ಉದ್ಭವಿಸಿದರು. ಸಾಮಾಜಿಕ ಜೀವನ, ರಾಜಕೀಯರಂಗ, ಸಾಹಿತ್ಯ ಕಲೆ ಹೀಗೆ ಹಲವಾರು ರಂಗಗಳಲ್ಲಿ ಹೊಸ ಚೈತನ್ಯ ಮೂಡಿಸಿದರು. ತಮ್ಮ ವೈಯಕ್ತಿಕ ಜೀವನದ ಕಡೆಗೆ ಲಕ್ಷ್ಯಕೊಡದೆ ತಾವು ಹಿಡಿದ ಕಾರ್ಯಕ್ಷೇತ್ರದಲ್ಲಿ ದುಡಿಯುತ್ತಲೇ ರಾಷ್ಟ್ರೀಯತೆಯ ಭಾವವನ್ನು ಮೂಡಿಸಿದರು. ಇಂಥ ಪ್ರಾತಃಸ್ಮರಣೀಯರಲ್ಲಿ ಶ್ರೀ ಕಂದುಕೂರಿ ವೀರೇಶಲಿಂಗಂ ಪಂತುಲು ಅವರದ್ದು ಎದ್ದುಕಾಣುವ ಅನನ್ಯ ಪ್ರತಿಭೆ. ಅವರ ಬದುಕಿನ ಕುರಿತಾದ ಸಂಕ್ಷಿಪ್ತ ಪರಿಚಯ ಈ ಕೃತಿಯಲ್ಲಿದೆ.

About the Author

ಸ. ರಘುನಾಥ
(13 August 1954)

ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ  ಸ.ರಘುನಾಥ,ಕಥೆ, ಕಾವ್ಯ, ವಿಮರ್ಶೆ, ಅಂಕಣಬರಹ, ಅನುವಾದ, ಜಾನಪದ ಸಾಹಿತ್ಯ ಸಂಗ್ರಹ,ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು. ಸುಮಾರು 40ಕ್ಕೂ ಹೆಚ್ಚಿನ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಸ. ರಘುನಾಥ ಅವರು ಸಮಾಜಸೇವೆಯಲ್ಲಿಯೂ ಹೆಚ್ಚಾಗಿ ತೊಡಗಿಸಿಕೊಂಡವರು. 1995 ರಿಂದ ’ನಮ್ಮ ಮಕ್ಕಳು’ ಎಂಬ ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯ: ಭಿಕ್ಷುಕ, ಅನಾಥ, ವೃದ್ಧರಿಗೆ, ಅಂಗವಿಕಲರಿಗೆ ಶೈಕ್ಷಣಿಕ ಹಾಗು ಉಚಿತ ವೈದ್ಯಕೀಯ ನೆರವು. 1994 ರಿಂದ 2014 ರವರೆಗೆ ಗಾಯಗೊಂಡ ಪ್ರಾಣಿ  - ಪಕ್ಷಿಗಳ ಆರೈಕೆ. 2005ರಿಂದ ನಾಟಿ ಔಷಧ ತಯಾರಿಕೆ, ಉಚಿತ ...

READ MORE

Related Books