ಅರೆಶತಮಾನದ ಮೌನ

Author : ಅರುಣ್ ಬೆನಕ

Pages 260

₹ 190.00




Year of Publication: 2017
Published by: ಛಂದ ಪುಸ್ತಕ
Address: ಐ-004, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು - 560076
Phone: 9844422782

Synopsys

ಯಾನ್ ರಫ್-ಓ ಹರ್ನ್ ಯುದ್ಧ ಮತ್ತು ಸಶಸ್ತ್ರ ಸಂಘರ್ಷದ ಸಂದರ್ಭಗಳಲ್ಲಿ ಸದಾ ತೊಂದರೆಗೊಳಗಾಗುವ ಮುಗ್ಧ ಮಹಿಳೆಯರ ರಕ್ಷಣೆಗಾಗಿ ದನಿಯೆತ್ತಿದವಳು. 

ಜಪಾನೀಯರು 1942 ರಲ್ಲಿ ದಾಳಿ ಮಾಡಿ ಜಾವಾ ದ್ವೀಪವನ್ನು ವಶಪಡಿಸಿಕೊಂಡಾಗ ಇಂಡೋನೇಷ್ಯಾದಲ್ಲಿನ ಡಚ್ ವಸಾಹತಿನಲ್ಲಿ ಅರಳಿದ್ದ ಯಾನ್ ರಫ್ ಓ ಹರ್ನ್ಳ ಬಾಲ್ಯದ ಕನಸುಗಳು ಅಪಾರ ಘಾಸಿಗೊಳಿಸಿದವು. ಅವಳ ಕುಟುಂಬದ ಸಮೇತ ಸೆರೆಮನೆಯಲ್ಲಿ ಬಂಧಿಸಿ, ಬಲಾತ್ಕಾರವಾಗಿ ಕರೆದೊಯ್ದು ಜಪಾನ್ ಸೈನ್ಯಕ್ಕೆಂದೇ ಮೀಸಲಾಗಿದ್ದ ವೇಶ್ಯಾ ಗೃಹದಲ್ಲಿ ಲೈಂಗಿಕ ಗುಲಾಮಗಿರಿಗೆ ತಳ್ಳಲಾಯಿತು. ಈ ಹಿನ್ನೆಲೆಯಲ್ಲಿ ತಾನು ಅನುಭವಿಸಿದ ಸಂಕಟ, ನೋವು, ಅವಮಾನ, ನಾಚಿಕೆಗೇಡಿನ ಸಂಗತಿಗಳೆಲ್ಲವನ್ನೂ ತನ್ನ ಆತ್ಮಚರಿತ್ರೆ ’50 ಇಯರ್ಸ್ ಆಫ್ ಸೈಲೆನ್ಸ್’ ಕೃತಿಯಲ್ಲಿ ಹಂಚಿಕೊಂಡಿದ್ದಾರೆ. 

ಇದರ ಕನ್ನಡಾನುವಾದವನ್ನು  ಲೇಖಕ ಅರುಣ್ ’ಅರೆಶತಮಾನದ ಮೌನ’ ಎಂಬ ಶೀರ್ಷಿಕೆಯಡಿಯಲ್ಲಿ ಹೊರತಂದಿದ್ದಾರೆ. 

About the Author

ಅರುಣ್ ಬೆನಕ

ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಆರಂಭದ ವಿದ್ಯಾಭ್ಯಾಸ ಪಡೆದರು.  ನಂತರ ಸಾಗರದಲ್ಲಿನ ಲಾಲ್ ಬಹದೂರ್ ವಿಜ್ಞಾನ, ಕಲಾ ಮತ್ತು ಸೊಲಬಣ್ಣ ಶೆಟ್ಟಿ ವಾಣಿಜ್ಯ ಕಾಲೇಜಿನಲ್ಲಿ ವಿಜ್ಞಾನ ಪದವಿ. ಕೆಲವು ಕಾಲ ರೈಲ್ವೇಯಲ್ಲಿ ಸಹಾಯಕ ಸ್ಟೇಷನ್ ಮಾಸ್ಟರ್ ಕೆಲಸ ಮಾಡಿದರು. ಮನಸ್ಸಿಗೆ ಒಗ್ಗದ ಆ ಕೆಲಸ ಬಿಟ್ಟು ಪತ್ರಿಕೋದ್ಯಮದತ್ತ ಹೊರಳಿದರು. ತೀರ್ಥಹಳ್ಳಿಯ 'ಛಲಗಾರ' ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿಟ್ಟರು.  ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಯಲ್ಲಿ ಶಿವಮೊಗ್ಗ ಜಿಲ್ಲಾ ವರದಿಗಾರನಾಗಿ 1980ರಲ್ಲಿ ಸೇರಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಅದೇ ಪತ್ರಿಕೆಯ ಕರ್ನಾಟಕ ಸ್ಥಾನಿಕ ಸಂಪಾದಕನಾಗಿ ಕೆಲಸ ಮಾಡಿ 2012ರಲ್ಲಿ ನಿವೃತ್ತರಾಗಿ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ. ಕರ್ನಾಟಕದ ವಿವಿಧ ...

READ MORE

Related Books