ನನ್ನ ನೆನಪಿನಂಗಳದ ಛಾಪುಗಳು

Author : ಡಿ.ಕೆ. ಶ್ಯಾಮಸುಂದರ ರಾವ್

Pages 534

₹ 750.00




Year of Publication: 2019
Published by: ಕಾಮಧೇನು ಪುಸ್ತಕ ಭವನ
Address: ನಾಗಪ್ಪ ಬೀದಿ, ನೆಹರು ನಗರ, ಶೇಷಾದ್ರಿಪುರಂ, ಬೆಂಗಳೂರು-560020
Phone: 094494 46328

Synopsys

ಭಾರತ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಬಿ. ಗಜೇಂದ್ರ ಗಡ್ಕರ್ (ಪ್ರಹ್ಲಾದ್ ಬಾಳಾಚಾರ್ಯ ಗಜೇಂದ್ರ ಗಡ್ಕರ್, 16 ಮಾರ್ಚ್ 1901 ಮಹಾರಾಷ್ಟ್ರದ ಸಾತಾರದಲ್ಲಿ ಜನನ ಹಾಗೂ 12 ಜೂನ್ 1981 ರಂದು ಮುಂಬೈನಲ್ಲಿ ಮರಣ) ಅವರ ಇಂಗ್ಲಿಷಿನಲ್ಲಿರುವ ಆತ್ಮಕಥನವನ್ನು ಲೇಖಕ ಡಿ.ಕೆ. ಶ್ಯಾಮಸುಂದರ ರಾವ್ ಅವರು ‘ನನ್ನ ನೆನಪಿನಂಗಳದ ಛಾಪುಗಳು’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಕರ್ನಾಟಕದಲ್ಲಿಯ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದವರು. ಭಾರತದ ಸುಪ್ರೀಂಕೋರ್ಟ್ ನ 7ನೇ ( 1964ರ ಫೆಬ್ರವರಿಯಿಂದ 1966ರ ಮಾರ್ಚ್ ವರೆಗೆ ) .ಮುಖ್ಯ ನ್ಯಾಯಮೂರ್ತಿಗಳಾಗಿದ್ದರು. ‘ಓಪನ್ ಲೈಬ್ರರಿ’ಎಂಬ ಶೀರ್ಷಿಕೆಯಡಿ ಕೃತಿ ರಚಿಸಿದ್ದರು. 1972ರಲ್ಲಿ ಭಾರತ ಸರ್ಕಾರ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.

About the Author

ಡಿ.ಕೆ. ಶ್ಯಾಮಸುಂದರ ರಾವ್

ಲೇಖಕ-ಪ್ರಕಾಶಕ ಡಿ.ಕೆ. ಶ್ಯಾಮಸುಂದ ರಾವ್ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ನಿವೃತ್ತರಾಗಿದ್ದರು. ಕಾಮಧೇನು ಪ್ರಕಾಶನ ಸಂಸ್ಥೆ ಸ್ಥಾಪಿಸಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿಯೂ , ಕರ್ನಾಟಕ ಪ್ರಕಾಶಕರ ಸಂಘದ ಉಪಾಧ್ಯಕ್ಷರೂ ಆಗಿದ್ದರು. ವಯೋಸಹಜ ಕಾಯಿಲೆಯಿಂದ ಅವರು ಚಿಕಿತ್ಸೆ ಫಲಿಸದೇ 2022ರ ಫೆಬ್ರವರಿ 6 ರಂದು ನಿಧನರಾದರು.  ಕೃತಿಗಳು: ನನ್ನ ನೆನಪಿನಂಗಳದ ಛಾಪುಗಳು ನ್ಯಾ.ಪಿ. ಬಿ. ಗಜೇಂದ್ರಗಡ್ಕರ್ ಅವರ ಆತ್ಮಕಥನ-ಅನುವಾದ), ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ (ಅನುವಾದಿತ ಕೃತಿ),  ...

READ MORE

Related Books