ನೆನಪಿನ ಸಾಲು ದೀಪಗಳು

Author : ಎಸ್. ವಿದ್ಯಾಶಂಕರ

Pages 416

₹ 200.00




Year of Publication: 2012
Published by: ಕೆ.ಎಲ್. ನಂಜಪ್ಪ ಪ್ರತಿಷ್ಠಾನ
Address: ಕಾಸಿಯಾ, #109, ಮಾಗಡಿ ಕಾರ್ಡ್ ರಸ್ತೆ, ವಿಜಯನಗರ ಬೆಂಗಳೂರು-40

Synopsys

‘ನೆನಪಿನ ಸಾಲು ದೀಪಗಳು’ ಕೃತಿಯು ಸಣ್ಣ ಕೈಗಾರಿಕೆಗಳಿಗೆ ವಿಶ್ವಮಟ್ಟದ ಮರ್ಯಾದೆ ತಂದ ಪದ್ಮಶ್ರೀ ಕೆ. ಎಲ್. ನಂಜಪ್ಪ ಅವರ ಕೃತಿಯಾಗಿದೆ. ಈ ಕೃತಿಯು ಇಂಗ್ಲಿಷ್ ಮೂಲದಿಂದ  ಪರಿಷ್ಕೃತ ಕನ್ನಡ ರೂಪವಾಗಿಸಿದವರು ಎಸ್. ವಿದ್ಯಾಶಂಕರ. ಈ ಆತ್ಮಕಥೆ ಐದು ಭಾಗಗಳಾಗಿ ವಿಂಗಡಣೆಗೊಂಡಿದೆ. ಮೊದಲನೆಯದು ಬಾಲ್ಯದ ವಿವರಗಳು, ಎರಡನೆಯದು, ಉನ್ನತ ಶಿಕ್ಷಣ ಪಡೆಯಲು ಜಪಾನಿಗೆ ಹೋಗಿ ಅಲ್ಲಿ ಐದು ವರ್ಷವಿದ್ದು ಎಂ.ಕಾಂ. ಪದವಿ ಪಡೆದು ಜಪಾನಿನ ಮಿಟ್ಟುಬಿಷಿಯಲ್ಲಿ ತರಬೇತಿ ಪಡೆದ ವಿವರಗಳು, ಮೂರನೆಯದು, ಕರ್ನಾಟಕ ರಾಜ್ಯ ಸರಕಾರದಲ್ಲಿನ ಸೇವಾ ಏವರಗಳು, ನಾಲ್ಕನೆಯದು, ಕೇಂದ್ರ ಸರಕಾರದಲ್ಲಿನ ಸೇವಾ ವಿವರಗಳು, ಐದನೆಯದು, ವಿಯನ್ನಾದ ಯುಎನ್ ಡಿಪಿಯಲ್ಲಿನ ಸೇವಾ ವಿವರಗಳು ಆತ್ಮಕಥೆಯಲ್ಲಿ ದಾಖಲಾಗಿವೆ. ಕೆ. ಎಲ್. ನಂಜಪ್ಪನವರ ಪೂರ್ವಿಕರು  ಜಿಲ್ಲೆಯ ನಾರಾಯಣಪುರದಿಂದ ಬೆಂಗಳೂರಿನ ಅರಳೆಪೇಟೆಗೆ ಹತ್ತಿ ಪ್ಯಾಪಾರಕ್ಕಾಗಿ ವಲಸೆ ಬಂದವರು ಇಲ್ಲಿಯೇ ನೆಲೆಸಿದರು. ಗಂಡನನ್ನು ಕಳೆದುಕೊಂಡ ಅವರ ತಾಯಿ ತಿಪ್ಪಮ್ಮ ಗಟ್ಟಿ ಹೆಂಗಸು.

ಸಿಹಿ, ಕಾರದ ತಿ೦ಡಿ ಮಾಡಿ ಅವನ್ನು ಮಾರಿ ಮಕ್ಕಳನ್ನು ಕಷ್ಟದಿಂದ ಬೆಳೆಸಿದರು. ಅವರು ಮಕ್ಕಳಿಗೆ ಮೇಲಿಂದ ಮೇಲೆ ಹೇಳುತ್ತಿದ್ದುದೆ೦ದರೆ, ಯಾವುದೇ ಸಂದರ್ಭದಲ್ಲೂ ನಿಮ್ಮ ಸ್ವಾಭಿಮಾನ ಕಳೆದುಕೊಳ್ಳಬೇಡಿ ಎಂದು. ಚೆನ್ನಾಗಿ ಓದಿ ಒಳ್ಳೆಯ ಕೆಲಸ ಪಡೆಯಿರಿ. ಅಲ್ಲಿಯವರೆಗೆ ಯಾವ ಬಂಧು-ಬಳಗದವರ ಮನೆಗೂ ಹೋಗಬೇಡಿ ಎಂದು ಎಚ್ಚರಿಸುತ್ತಿದ್ದರು. ತಮ್ಮ ವ್ಯತ್ವವನ್ನು ರೂಪಿಸಿದವರು, ತಮ್ಮ ಅಭಿವೃದ್ಧಿಗೆ ಕಾರಣರಾದವರು ತಮ್ಮ ತಾಯಿ ಎನ್ನುವ ಮಾತನ್ನು ಕೆ. ಎಲ್. ನಂಜಪ್ಪನವರು ಅಭಿಮಾನದಿಂದ ಹೇಳ ಕೊಂಡಿರುವರು. ಕೆ. ಎಲ್. ನಂಜಪ್ಪನವರ ವ್ಯಕ್ತಿತ್ವದಲ್ಲಿನ ಪ್ರಧಾನ ಗುಣ ಸಂಘಟನಾ ಶಕ್ತಿ, ತಾವು ಓದಿದ ಶಾಲೆಯಲ್ಲಿ ಗಣಪತಿ ಮೂರ್ತಿಯನ್ನು ಸ್ಥಳಾಂತರಿಸಿದ ಕಾರಣಕ್ಕಾಗಿ ಅವರು ವಿದ್ಯಾರ್ಥಿಗಳನ್ನು ಹಾಗೂ ಜನತೆಯನ್ನು ಸಂಘಟಿಸಿ ಹೋರಾಟ ನಡೆಸಿ, ಸತ್ಯಾಗ್ರಹ ಮಾಡಿ ಜೈಲಿಗೆ ಹೋದ ಘಟನೆಯಾಗಲಿ, ಜಪಾನ್‌ನಲ್ಲಿ ವಿದ್ಯಾರ್ಥಿದೆಸೆಯಲ್ಲಿ ಅವರು ಭಾರತೀಯ ಸಂಘವನ್ನು ಸ್ಥಾಪಿಸಿದ ಘಟನೆಯಾಗಲೀ ಅವರ ಕರ್ತವ್ಯ ಶಕ್ತಿಗೆ ಒಳ್ಳೆಯ ಉದಾಹರಣೆಗಳಾಗಿವೆ.

About the Author

ಎಸ್. ವಿದ್ಯಾಶಂಕರ

ಎಸ್. ವಿದ್ಯಾಶಂಕರ ಅವರು ಚಾಮರಾಜ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿಯಲ್ಲಿ ಜನಿಸಿದರು. ತಂದೆ ವಿದ್ವಾನ್' ಸ.ಸ. ಶಿವಶಂಕರಪ್ಪ ತಾಯಿ ವಿಶಾಲಾಕ್ಷಮ್ಮ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು ೧೯೬೬ರಲ್ಲಿ ಧಾರವಾಡದ ಕರ್ನಾಟಕ ವಿ.ವಿ.ಯಲ್ಲಿ ಎಂ.ಎ. ಪದವಿ ಗಳಿಸಿ ೧೯೭೧ರಲ್ಲಿ ಬೆಂಗಳೂರು ವಿ.ವಿ. ಪಿಎಚ್.ಡಿ. ಪದವಿ ಗಳಿಸಿದರು. ಬೆಂಗಳೂರು ವಿ.ವಿ. ಕನ್ನಡ ವಿಭಾಗದ ಸ್ನಾತಕೋತ್ತರ ಸಂಶೋಧನ ಸಹಾಯಕರಾಗಿ ಸೇವೆ ಸಲ್ಲಿಸಿ ೧೯೭೦ ರಿಂದ ೮೫ರರಿಗೆ ಕನ್ನಡ ಅಧ್ಯಯನ ಕೇಂದ್ರದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ನಂತರ ನಿರ್ದೇಶಕರಾಗಿ ಸೇವೆ ಸಲ್ಲಿಸಿ ೨೦೦೧ರಲ್ಲಿ ವೃತ್ತಿಯಿಂದ ವಿಶ್ರಾಂತಿ ಪಡೆದರು. ೧೯೯೫೪-೯೭ರಲ್ಲಿ ಹಂಪಿಯ ಕನ್ನಡ ...

READ MORE

Related Books