ಕಪ್ಪು ಹಕ್ಕಿಯ ಬೆಳಕಿನ ಹಾಡು

Author : ಎಂ.ಆರ್. ಕಮಲಾ

Pages 192

₹ 75.00
Year of Publication: 2008
Published by: ಕಥನ ಪ್ರಕಾಶನ
Address: ನಂ.405, 19th ಜಿ ಮುಖ್ಯರಸ್ತೆ, 1ನೇ ಬ್ಲಾಕ್ ರಾಜಾಜಿನಗರ, ಬೆಂಗಳೂರು- 560010
Phone: 09739277750

Synopsys

ಗುಲಾಮ ಪದ್ಧತಿಯ ವಿರುದ್ಧ ಸೆಣಸಿದ ಕಪ್ಪು ಮಹಿಳೆಯರ ಆತ್ಮಕಥೆಗಳ ಸಂಕಲನವೇ ‘ಕಪ್ಪು ಹಕ್ಕಿಯ ಬೆಳಕಿನ ಹಾಡು‘ ಪುಸ್ತಕ. ಇಲ್ಲಿನ ಆತ್ಮಕಥೆಗಳನ್ನು ಲೇಖಕಿ ಎಂ.ಆರ್. ಕಮಲ ಕನ್ನಡಕ್ಕೆ ಅನುವಾದಿಸಿದ್ದಾರೆ. ಗುಲಾಮಗಿರಿಯ ಇತಿಹಾಸ, ಅಂದಿನ ರಾಜಕೀಯ ಸನ್ನಿವೇಶ, ಗುಲಾಮರ ಆತ್ಮಕಥೆಗಳನ್ನು ಒಳಗೊಂಡಿರುವ ಪುಸ್ತಕವೊಂದು ಕನ್ನಡದಲ್ಲಿ ಪ್ರಕಟವಾಗುತ್ತಿರುವುದು ಇದೇ ಮೊದಲು.  ಇಲ್ಲಿ ಅನುವಾದಿಸಲಾದ ಎಲ್ಲ ಆತ್ಮಕಥೆಗಳು ಹೆಣ್ಣುಮಕ್ಕಳದು ಅನ್ನುವುದು ಈ ಪುಸ್ತಕದ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿದೆ. ಇಲ್ಲಿ ನಾಲ್ಕು ಆತ್ಮಕಥೆ ಮತ್ತು ಒಂದು ಆತ್ಮಚರಿತ್ರೆಯನ್ನು ಆಯ್ದು, ಸಂಗ್ರಹಿಸಿ ಅನುವಾದಿಸಲಾಗಿದೆ. ಹಾಗೆ ಕಥೆಗಳನ್ನು ಆರಿಸುವಾಗ ಐತಿಹಾಸಿಕ ಮಹತ್ವದೊಂದಿಗೆ ವೈವಿಧ್ಯವನ್ನು ಮಾನದಂಡವಾಗಿ ಬಳಸಲಾಗಿದೆ. ಈ ಎಲ್ಲ ಮಹಿಳೆಯರು ಬಿಡುಗಡೆಗಾಗಿ ಹೋರಾಡಿ, ಸ್ವಾತಂತ್ರ್ಯ ಪಡೆದು ತಾವು ಬದುಕಿರುವಾಗಲೇ ತಮ್ಮ ಸಾಧನೆ-ಸೇವೆಗಳ ಮೂಲಕ ಜನಾನುರಾಗಿಗಳಾದವರು. ಮೊದಲ ಆತ್ಮಕಥೆಯ ನಾಯಕಿ ಎಲಿಜಬೆತ್, ಲಿಂಕನ್ ಕುಟುಂಬಕ್ಕೆ ತುಂಬ ಹತ್ತಿರವಾಗಿದ್ದವಳು. ಲಿಂಕನ್ ರ ಪತ್ನಿ ಮೇರಿಯ ಆತ್ಮಸಖಿಯಾಗಿದ್ದವಳು. ಆದರೆ, ಈ ಎಲ್ಲವನ್ನೂ ಅವಳು ಪಡೆದದ್ದು ತನ್ನ ಪ್ರತಿಭೆಯ ಮೂಲಕ ಎನ್ನುವುದು ಗಮನಾರ್ಹ ವಿಷಯವಾಗಿದೆ. ಇನ್ನುಳಿದ ನಾಲ್ವರು ಕೂಡ ಬೇರೆ ಬೇರೆ ಕಾರಣಗಳಿಗೆ ಮುಖ್ಯರಾದವರೇ. ಹೀಗೆ ಕಪ್ಪು ಜನಾಂಗದ ನೋವುಗಳನ್ನು ಒಳಗೊಂಡ ಈ ಪುಸ್ತಕ ಗುಲಾಮ ಇತಿಹಾಸದ ಬಗ್ಗೆ ತಿಳಿಯದವರಿಗೆ ಮಹತ್ವದ ಮಾಹಿತಿಯನ್ನೂ ಒಳಗೊಂಡಿದೆ.

About the Author

ಎಂ.ಆರ್. ಕಮಲಾ
(27 March 1959)

ಕವಿ-ಅನುವಾದಕಿಯಾಗಿ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತ ಎಂ.ಆರ್. ಕಮಲಾ ಅವರು ಹಾಸನ ಜಿಲ್ಲೆಯ ಅರಸಿಕೆರೆ ತಾಲ್ಲೂಕಿನ ಮೇಟಿಕುರ್ಕೆಯವರು. 1959ರ ಮಾರ್ಚ್‌ 27ರಂದು ಜನಿಸಿದರು. ತಂದೆ ಎಂ.ಎಚ್. ರಾಮಸ್ವಾಮಿ, ತಾಯಿ ವಿಶಾಲಾಕ್ಷಿ. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಮತ್ತು ಎಲ್.ಎಲ್.ಬಿ. ಪದವಿ, ಸ್ನಾತಕೋತ್ತರ ಪರೀಕ್ಷೆಯಲ್ಲಿ ಪಾಶ್ಚಿಮಾತ್ಯ ಸಾಹಿತ್ಯ ಅಧ್ಯಯನಕ್ಕಾಗಿ ಬಿಎಂಶ್ರೀ ಚಿನ್ನದ ಪದಕ ವಿಜೇತರು.  ಫ್ರೆಂಚ್ ಭಾಷೆಯಲ್ಲಿ ಪದವೀಧರರು. ಶಕುಂತಲೋಪಾಖ್ಯಾನ (1988), ಜಾಣೆ ಮತ್ತು ಇತರ ಕವಿತೆಗಳು (1992), ಹೂವು ಚೆಲ್ಲಿದ ಹಾದಿ (2007), ಮಾರಿಬಿಡಿ (2017) ಕವನ ಸಂಕಲನಗಳು. ಆಫ್ರಿಕನ್-ಅಮೆರಿಕನ್ ಮತ್ತು ಅರಬ್ ಮಹಿಳಾ ಕಾವ್ಯದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. ’ಕತ್ತಲ ಹೂವಿನ ಹಾಡು (1989) ...

READ MORE

Related Books