ಕೃಷ್ಣ ಹತೀಸಿಂಗ್ ಅವರ ಆತ್ಮಚರಿತ್ರೆ -ನೆನಪು ಕಹಿಯಲ್ಲ. ಈ ಕೃತಿಗೆ ಮುನ್ನುಡಿ ಬರೆದ ಸರೋಜಿನಿ ನಾಯ್ಡು ‘ದೇಶದ ಸ್ವಾತಂತ್ಯ್ರಕ್ಕಾಗಿ ಕುಟುಂಬದ ಸದಸ್ಯರೆಲ್ಲರೂ ಜೈಲಿಗೆ ಹೋದಾಗ ಬರೆದ ಕೃತಿ ಇದಾಗಿದೆ ಎಂದು ಕೃಷ್ಣ ಹತೀಸಿಂಗ್ ಹೇಳಿದ್ದು, ಅವಳ ಸಣ್ಣಂದಿನಿಂದಲೂ ತಾನು ಬಲ್ಲವಳಾದ್ದರಿಂದ ಮುನ್ನುಡಿಗೆ ಒಪ್ಪಿಕೊಳ್ಳಬೇಕಾಯಿತು ಎಂದಿದ್ದಾರೆ ಮಾತ್ರವಲ್ಲ; ಈ ಆತ್ಮಚರಿತ್ರೆಯಲ್ಲಿ ನೆಹರೂ ಕುಟುಂಬದ ಚರಿತ್ರೆ ಹಾಸುಹೊಕ್ಕಾಗಿದೆ. ನೆಹರೂ ಕುಟುಂಬದ ಕಾಲು ಶತನಮಾನದ ಚರಿತ್ರೆ ಹಾಗೂ ಭರತ ಖಂಡದ ಸ್ವಾತಂತ್ಯ್ರ ಸಂಗ್ರಾಮದ ಇತಿಹಾಸ, ಮೋತಿಲಾಲ ನೆಹರೂ, ಜವಾಹರಲಾಲರ ಪತ್ನಿ ಕಮಲಾ, ಸಹೋದರಿ ವಿಜಯಲಕ್ಷ್ಮಿ, ಮಹಾತ್ಮ ಗಾಂಧೀಜಿ ಹೀಗೆ ಚಾರಿತ್ರಿಕವಾಗಿ ದಾಖಲು ಮಾಡುವ ಉತ್ತಮ ಸಂಗತಿಗಳ ಮೊತ್ತವಾಗಿದೆ’ ಎಂದು ಪ್ರಶಂಸಿಸಿದ್ದಾರೆ. ಈ ಕೃತಿಯನ್ನು ದೇಜಗೌ (ದೇ. ಜವರೇಗೌಡ) ಅನುವಾದಿಸಿದ್ದಾರೆ.
©2022 Book Brahma Private Limited.