ಕಲೆಯ ಅತಿರೇಕದ ಮಿತಿಗಳನ್ನು ವಿಸ್ತರಿಸಿದ ಕ್ರಿಸ್ ಬರ್ಡನ್

Date: 22-11-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಅಮೆರಿಕ ಮೂಲದ ಇಪರ್ಫಾರ್ಮೆನ್ಸ್ ಆರ್ಟ್, ಇನ್ಸ್ಟಾಲೇಷನ್ ಆರ್ಟ್, ಮತ್ತು ಸ್ಕಲ್ಪ್ಚರ್ ಕಲಾವಿದ ಕ್ರಿಸ್ಟೋಪರ್ ಲೀ ಬರ್ಡನ್ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ಕ್ರಿಸ್ಟೋಪರ್ ಲೀ ಬರ್ಡನ್ (Christoper Lee Burden)
ಜನನ: 11 ಎಪ್ರಿಲ್, 1946
ನಿಧನ: 10 ಮೇ, 2015
ಶಿಕ್ಷಣ: ಕ್ಯಾಲಿಫೋರ್ನಿಯಾ ವಿವಿ, ಇರ್ವಿನ್
ವಾಸ: ಕ್ಯಾಲಿಫೋರ್ನಿಯಾ, ಅಮೆರಿಕ
ಕವಲು: ಪರ್ಫಾರ್ಮೆನ್ಸ್ ಆರ್ಟ್
ವ್ಯವಸಾಯ: ಪರ್ಫಾರ್ಮೆನ್ಸ್ ಆರ್ಟ್, ಇನ್ಸ್ಟಾಲೇಷನ್ ಆರ್ಟ್, ಸ್ಕಲ್ಪ್ಚರ್

ಕ್ರಿಸ್ ಬರ್ಡನ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

“Limits” is a relative term. Like beauty, it is often in the eye of the beholder.
—Chris Burden

70ರ ದಶಕದಲ್ಲಿ ಅಮೆರಿಕವು ವಿಯೆಟ್ನಾಮ್ ಮೇಲೆ ದಾಳಿ ಮಾಡಿದ ಕಾಲದಲ್ಲಿ ಅಮೆರಿಕನ್ ಟೆಲಿವಿಷನ್ ಮಾಧ್ಯಮ ತೋರಿಸುತ್ತಿದ್ದ ಹಿಂಸೆಯ ದೃಶ್ಯಗಳು, ಮೃತ ಅಮೆರಿಕನ್ ಸೈನಿಕರ ದೇಹಗಳು ಮತ್ತು ಮಾಧ್ಯಮಗಳಲ್ಲಿ ಹಿಂಸೆ ಪಡೆಯುತ್ತಿದ್ದ ಆದ್ಯತೆಗಳ ಕಾರಣದಿಂದಾಗಿ ಜನರಲ್ಲಿ ಹಿಂಸೆಯ ಬಗೆಗಿನ ಸೂಕ್ಷ್ಮ ಸಂವೇದನೆಗಳೇ ಕಳೆದುಹೋಗಿರುವ ಸ್ಥಿತಿ ಇತ್ತು. ಇಂತಹ ಸನ್ನಿವೇಶದಲ್ಲಿ ಕಲೆ ಹೇಗೆ ಸ್ಪಂದಿಸ ಬೇಕು? ಕಲೆ ಎಂದರೆ ಕೇವಲ ಉಳ್ಳವರ, ಬೆಲೆಬಾಳುವ, ಬದುಕಿನಿಂದ ದೂರ ಇರುವ ಸಂಗತಿಯೆ? ಎಂಬೆಲ್ಲ ಪ್ರಶ್ನೆಗಳನ್ನು ಕೇಳಿಕೊಂಡ ಕ್ರಿಸ್ ಬರ್ಡನ್ ಆಯ್ಕೆ ಮಾಡಿಕೊಂಡದ್ದು, “ನೋವು” ಹೇಗಿರುತ್ತದೆ ಎಂಬುದನ್ನು ತನ್ನ ವೀಕ್ಷಕರಿಗೆ ತೋರಿಸಿ ಕೊಡುವ ಕಠಿಣ ಹಾದಿಯನ್ನು.

ಅತಿರೇಕದ ಸನ್ನಿವೇಶಗಳನ್ನು ಸೃಷ್ಟಿಸಿಕೊಂಡು ತನಗೆ ತಾನೇ ನೋವು ಮಾಡಿಕೊಳ್ಳುವುದಕ್ಕೂ ಹೇಸದ ಕ್ರಿಸ್ ಬರ್ಡನ್ ಅವರ ಒಂದು ಕಲಾಕೃತಿಯಲ್ಲಿ, (ಶೂಟ್ 1971) ಅವರು ತನ್ನ ಸಹಾಯಕರೊಬ್ಬರಿಗೆ .22 ರೈಫಲ್ ಕೊಟ್ಟು ಐದು ಮೀಟರ್ ದೂರದಿಂದ ತನ್ನ ಎಡಗೈಗೆ ಗುಂಡು ಹಾರಿಸಲು ಹೇಳುತ್ತಾರೆ! ಗಾಯಗೊಳ್ಳುತ್ತಾರೆ!! ಜನ ಬೆಚ್ಚಿಬೀಳಬಲ್ಲ ಇಂತಹ ಪರ್ಫಾರ್ಮೆನ್ಸ್‌ಗಳನ್ನು ಕಟ್ಟಿಕೊಟ್ಟಿರುವ ಕ್ರಿಸ್ ಬರ್ಡನ್ ಇವನ್ನೆಲ್ಲ ಬಹಳ ಉದ್ದೇಶಪೂರ್ವಕವಾಗಿಯೇ ಮಾಡಿಕೊಳ್ಳುತ್ತಿದ್ದರು. ತಾತ್ವಿಕವಾಗಿ, ಇಂತಹ ಪರ್ಫಾರ್ಮೆನ್ಸ್‌ಗಳಲ್ಲಿ ವೀಕ್ಷಕರಾಗಿ ಪಾಲ್ಗೊಳ್ಳುವವರು ಈ ರೀತಿಯ ಪರ್ಫಾರ್ಮೆನ್ಸ್‌ಗಳನ್ನು ತಡೆಯಲು ಅವಕಾಶ ಇತ್ತು. ಆದರೆ, ಅಮೆರಿಕದ ಅಂದಿನ ಹಿಂಸಾ ಮನೋಸ್ಥಿತಿ ಈ ಪರ್ಫಾರ್ಮೆನ್ಸ್‌ಗಳನ್ನು ತಡೆಯಲಿಲ್ಲ ಎಂಬುದು ಕ್ರಿಸ್ ಬರ್ಡನ್ ಅವರ ಕಲಾ ಚಿಂತನೆ (ಹಿಂಸೆಯ ಬಗೆಗೆ ಸೂಕ್ಷ್ಮ ಸಂವೇದನೆಗಳನ್ನು ಮೂಡಿಸುವುದು) ಎಷ್ಟು ಪ್ರಸ್ತುತವಾಗಿತ್ತು ಎಂಬುದನ್ನೇ ಸೂಚಿಸುತ್ತದೆ.

ಎಂಜಿನಿಯರ್-ಬಯಾಲಜಿಸ್ಟ್ ದಂಪತಿಯ ಮಗನಾಗಿ ಜನಿಸಿದ ಬರ್ಡನ್, ಬಾಲ್ಯ ಕಳೆದದ್ದು ಫ್ರಾನ್ಸ್ ಮತ್ತು ಇಟಲಿಗಳಲ್ಲಿ. ಹನ್ನೆರರ್ಡರ ಪ್ರಾಯದಲ್ಲೇ ದ್ವಿಚಕ್ರ ವಾಹನ ಅಪಘಾತವೊಂದರಲ್ಲಿ ಗಾಯಗೊಂಡ ಬರ್ಡನ್‌ಗೆ ಅರಿವಳಿಕೆ ನೀಡದೆ ಶಸ್ತ್ರಕ್ರಿಯೆ ನಡೆಸಬೇಕಾಗಿ ಬಂದಿತ್ತಂತೆ. ಈ ಹಿಂಸೆ ಮುಂದೆ ಅವರು ಹಿಂಸಾತ್ಮಕವಾದ ಹಲವು ಪರ್ಫಾರ್ಮೆನ್ಸ್‌ಗಳಲ್ಲಿ ಪಾಲ್ಗೊಳ್ಳಲು ಕಾರಣ ಆಗಿರಬಹುದೆಂದು ವಿಮರ್ಶಕರು ಅಭಿಪ್ರಾಯಪಡುತ್ತಾರೆ. ಅಮೆರಿಕಕ್ಕೆ ಹಿಂದಿರುಗಿ ಶಿಕ್ಷಣ ಪಡೆದ ಕ್ರಿಸ್ ಬರ್ಡನ್, ಕ್ಯಾಲಿಫೋರ್ನಿಯಾ ವಿವಿಯ ಕಲಾ ಪದವೀಧರರು. ಬಳಿಕ ಅಲ್ಲೇ ಅವರು ಶಿಕ್ಷಕರಾಗಿಯೂ ಕೆಲಸ ಮಾಡಿದ್ದರು.

ತನ್ನ ಸ್ನಾತಕ ಪದವಿಯ ಥಿಸೀಸ್ ಆಗಿ ಆತ ಆಯ್ಕೆಮಾಡಿಕೊಂಡದ್ದೇ ಹಿಂಸಾತ್ಮಕವಾದ ಪರ್ಫಾರ್ಮೆನ್ಸ್ ಒಂದನ್ನು. ತನ್ನ ತಲೆಯ ಮೇಲೊಂದು ಐದು ಗ್ಯಾಲನ್ ನೀರಿನ ಕುಡಿಕೆ, ತನ್ನ ಕೆಳಗೊಂದು ಐದು ಗ್ಯಾಲನ್ ಕಶ್ಮಲ ಸಂಗ್ರಹ ಕುಡಿಕೆ ಇರಿಸಿಕೊಂಡು ಇಕ್ಕಟ್ಟಾದ ಲಾಕರ್ ಒಂದರೊಳಗೆ ಐದು ದಿನಗಳನ್ನು ಕಳೆಯುವ ಪರ್ಫಾರ್ಮೆನ್ಸ್ ಅದು! ಇಲ್ಲಿಂದ ಆರಂಭಗೊಂಡ ಅವರ ಈ ರೀತಿಯ ಹಿಂಸ್ರ ಪ್ರದರ್ಶನಗಳು ಅವರ ಬದುಕಿನ ಅರ್ಧ ಹಾದಿಯ ತನಕವೂ ಸಾಕಷ್ಟು ನಡೆದು, ಅವರಿಗೆ ಪ್ರಸಿದ್ಧಿ ತಂದವು. ಜನ ಅವರನ್ನು “ಕಲಾಜಗತ್ತಿನ ಎಲೆಲ್ ನೀವಲ್” ಎಂದೇ ಗುರುತಿಸುತ್ತಿದ್ದರು. (ಎವೆಲ್ ನೀವಲ್ ಅಮೆರಿಕದ ಪ್ರಸಿದ್ಧ ಕಾರ್ ಜಂಪ್ ಸ್ಟಂಟ್ ಕಲಾವಿದ). ತನ್ನ ಸಮಕಾಲೀನ ಬೇರೆ ಪರ್ಫಾರ್ಮೆನ್ಸ್ ಕಲಾವಿದರಂತೆ “ಕ್ಷಣಿಕ” ಪ್ರದರ್ಶನಗಳನ್ನು ನೀಡುವ ಬದಲು ತನ್ನ ಕಲಾ ಪ್ರದರ್ಶನಗಳ ವಿಡಿಯೊ ದಾಖಲೀಕರಣ ಮಾಡಿಸಿಕೊಳ್ಳುತ್ತಿದ್ದ ಕ್ರಿಸ್ ಬರ್ಡನ್, 20 ನೇ ಶತಮಾನದ ಅಮೆರಿಕನ್ ಕಲೆಗೆ ಹಲವು ಶಾಕಿಂಗ್ ಕಲಾಕೃತಿಗಳನ್ನು ನೀಡಿದ್ದಾರೆ. ವೋಕ್ಸ್ ವ್ಯಾಗನ್ ಕಾರಿಗೆ ತನ್ನ ಕೈಗಳನ್ನು ಶಿಲುಬೆಗೇರಿದಂತೆ ಮೊಳೆಗಳನ್ನು ಜಡಿದು ಬಂಧಿಸಿಕೊಂಡು ಮಲಗಿದ ಅವರ Trans-Fixed (1974) ಕೂಡ ಪ್ರಸಿದ್ಧ ಕಲಾಕೃತಿ. ಅದೇ ವರ್ಷ ನ್ಯೂಯಾರ್ಕಿನ ರೊನಾಲ್ಡ್ ಫೆಲ್ಡ್‌ಮನ್ ಗ್ಯಾಲರಿಯಲ್ಲಿ ಅವರು 22ದಿನಗಳ ಕಾಲ ಒಂದೇ ಜಾಗದಲ್ಲಿ ಮಲಗಿರುವ ಪರ್ಫಾರ್ಮೆನ್ಸ್ White Light/White Heat ನೀಡಿದರು. TV Hijack (1972) ಪರ್ಫಾರ್ಮೆನ್ಸ್ ವೇಳೆ ಅವರು, ತಮ್ಮದೇ ಕ್ಯಾಮರಾ ಕ್ರೂ ಜೊತೆ ಬಂದು ಟೆಲಿವಿಷನ್ ಸ್ಟುಡಿಯೋದಲ್ಲಿ ಸಂದರ್ಶಕಿಯ ಕತ್ತಿಗೆ ಚೂರಿ ಹಿರಿದು, ತನ್ನ ಸಂದರ್ಶನದ ಲೈವ್ ಪ್ರಸಾರ ನಿಲ್ಲಿಸದಂತೆ ಮಾಡಿದ್ದರು!

ಎಪ್ಪತ್ತರ ದಶಕದ ಕೊನೆಗೆ ಇಂತಹ ಅಪಾಯಕಾರಿ ಪರ್ಫಾರ್ಮೆನ್ಸ್‌ಗಳಿಂದ ಹಿಂದೆ ಸರಿದ ಕ್ರಿಸ್ ಬರ್ಡನ್, ಹಲವು ಶಿಲ್ಪ ಇನ್ಸ್ಟಾಲೇಷನ್‌ಗಳನ್ನು ರಚಿಸಿದರು. B-Car (1975), DIECIMILA (1977), The Speed of Light Machine (1983), C.B.T.V. (1977) ಅಂತಹ ಕಲಾಕೃತಿಗಳು.

ಮುಂದೆ ಅವರು 1978ರಿಂದ ಕ್ಯಾಲಿಫೋರ್ನಿಯಾ ವಿವಿಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದರು. ಆ ಸಂದರ್ಭದಲ್ಲಿ, ತನ್ನ ವಿದ್ಯಾರ್ಥಿಯೊಬ್ಬ ಲೋಡ್ ಆದ ಬಂದೂಕನ್ನು ತನ್ನ ಕಾಲೇಜಿಗೆ ತಂದು ಪರ್ಫಾರ್ಮೆನ್ಸ್ ನಡೆಸಲು ಪ್ರಯತ್ನಿಸಿದಾಗ, ಅದನ್ನು ತಡೆದದ್ದಕ್ಕಾಗಿ ಕ್ರಿಸ್ ಬರ್ಡನ್ ಅವರಿಗೆ ತಾನು ಮಾಡಿದ್ದನ್ನು ತನ್ನ ವಿದ್ಯಾರ್ಥಿಗೆ ಮಾಡಲು ಅವಕಾಶ ಕೊಡದ “ಹಿಪೊಕ್ರೆಟ್” ಎಂಬ ಅಪವಾದ ಕೇಳಬೇಕಾಗಿ ಬಂತು ಮತ್ತು ಈ ಘಟನೆಯ ಕಾರಣಕ್ಕಾಗಿ 2005ರಲ್ಲಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. All the Submarines of the United States of America (1987) , Hell Gate (1998), Nomadic Folly (2001) , urban light (2008), Metropolis (2011), Porsche With Meteorite (2013) ಅವರ ಪ್ರಮುಖ ಇನ್ಸ್ಟಾಲೇಷನ್ ಕಲಾಕೃತಿಗಳಲ್ಲಿ ಸೇರಿವೆ.

ಮಲ್ಟಿ ಮೀಡಿಯಾ ಕಲಾವಿದೆ ನ್ಯಾನ್ಸಿ ರೂಬಿನ್ಸ್ ಅವರನ್ನು ಮದುವೆಯಾದ ಕ್ರಿಸ್ ಬರ್ಡನ್, ಮುಂದೆ ಬಾರ್ಬರಾ ಬರ್ಡನ್ ಅವರ ಜೊತೆ ಮದುವೆಯಾದರು. ತನ್ನ 69ನೇ ವಯಸ್ಸಿನಲ್ಲಿ ಅವರು ಕ್ಯಾನ್ಸರಿಗೆ ಬಲಿ ಆದರು. ಗಗೋಷಿಯನ್ ಗ್ಯಾಲರಿ ಅವರನ್ನು ಪ್ರತಿನಿಧಿಸುತ್ತಿತ್ತು. ಅವರ One Ton, One Kilo ಕಲಾಕೃತಿಯನ್ನು 30 ಲಕ್ಷ ಅಮೆರಿಕನ್ ಡಾಲರ್ ನೀಡಿ ಖರೀದಿಸಿತ್ತು. ಆದರೆ ಮುಂದೆ ಆ ಕಲಾಕೃತಿಯಲ್ಲಿ ಬಳಸಲಾದ ಚಿನ್ನ, ಅಮೆರಿಕದ ಅತಿದೊಡ್ಡ “ಪಾಂಜಿ ಸ್ಕೀಮ್” (700 ಲಕ್ಷ ಕೋಟಿ ಡಾಲರ್ ವಂಚನೆ) ನಡೆಸಿದ ಕಾರಣಕ್ಕೆ ನೂರ ಹತ್ತು ವರ್ಷಗಳ ಸೆರೆವಾಸ ಅನುಭವಿಸುತ್ತಿರುವ ಅಲನ್ ಸ್ಟಾನ್‌ಫರ್ಡ್‌ಗೆ ಸೇರಿದ್ದೆಂದು ಸಾಬೀತಾಗಿ, ಸರ್ಕಾರ ಆ ಚಿನ್ನವನ್ನು ತಡೆಹಿಡಿದಿರಿಸಿದೆ. ಪ್ರಕರಣ ಪೂರ್ಣಗೊಳ್ಳದೇ ಗ್ಯಾಲರಿಗೆ ಈ ಚಿನ್ನ ಸಿಗದು.

ಕ್ರಿಸ್ ಬರ್ಡನ್ ಅವರ ಜೊತೆ ಕಲಾ ಚರಿತ್ರಜ್ಞ ಡಾ| ಥಾಮಸ್ ಕ್ರೊ ಮಾತುಕತೆ:

ಕ್ರಿಸ್ ಬರ್ಡನ್ ಅವರ ದಾಖಲಿಸಲಾಗಿರುವ ಕೆಲವು ಪರ್ಫಾರ್ಮೆನ್ಸ್‌ಗಳು:

Chris Burden Documented Projects 71 - 74 from angelo on Vimeo.

ಚಿತ್ರ ಶೀರ್ಷಿಕೆಗಳು:
ಕ್ರಿಸ್ ಬರ್ಡನ್ ಅವರ 1 Ton Crane Truck (2009)

ಕ್ರಿಸ್ ಬರ್ಡನ್ ಅವರ All the Submarines of the United States of America, (1987) Courtesy New Museum

ಕ್ರಿಸ್ ಬರ್ಡನ್ ಅವರ artist performing Trans-Fixed (1972).

ಕ್ರಿಸ್ ಬರ್ಡನ್ ಅವರ Big Wheel (1979)

ಕ್ರಿಸ್ ಬರ್ಡನ್ ಅವರ Chris-Burden-after-Shoot, (1971)

ಕ್ರಿಸ್ ಬರ್ಡನ್ ಅವರ Metropolis II, (2012)

ಕ್ರಿಸ್ ಬರ್ಡನ್ ಅವರ Porsche with Meteorite (2013).

ಕ್ರಿಸ್ ಬರ್ಡನ್ ಅವರ Reason for the Neutron Bomb (1988)

ಕ್ರಿಸ್ ಬರ್ಡನ್ ಅವರ Uniforms and America’s Darker Moments (1994)

ಕ್ರಿಸ್ ಬರ್ಡನ್ ಅವರ Urban Light (2008)

ಕ್ರಿಸ್ ಬರ್ಡನ್ ಅವರ What My Dad Gave Me (2008)

ಈ ಅಂಕಣದ ಹಿಂದಿನ ಬರೆಹಗಳು:
"ದಾ ಷಾನ್ ಝಿ” ಯ “ಕ್ಸಿಂಗ್‌ವೇಯಿ ಈಷು” ಮುಂಗೋಳಿ - ಝಾಂಗ್ ಹುವಾನ್
ಕಟ್ಟಕಡೆಯ ಸರ್ರಿಯಲಿಸ್ಟ್ – ಲಿಯೊನೊರಾ ಕೇರಿಂಗ್ಟನ್

ಸ್ಟ್ರೀಟ್ ಟು ಗ್ಯಾಲರಿ – ಕೀತ್ ಹೆರಿಂಗ್:
ನಾನು ಮ್ಯಾಟರಿಸ್ಟ್: ಕಾರ್ಲ್ ಆಂದ್ರೆ:
ಫೊಟೋಗ್ರಫಿಯನ್ನು ಸಮಕಾಲೀನ ಆರ್ಟ್ ಮಾಡಿದ ವಿಕ್ ಮ್ಯೂನಿಸ್
ನನ್ನದೇ ಸಂಗತಿಗಳಿವು: ಆದರೆ ಕೇವಲ ನನ್ನವಲ್ಲ– ಶಿರಿನ್ ನೆಹಶಾತ್
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
ಸದಭಿರುಚಿ ಎಂಬುದು ಆಧುನಿಕ ಬದುಕಿನ ಶಾಪ – ಗಿಲ್ಬರ್ಟ್ ಮತ್ತು ಜಾರ್ಜ್
ಆನೆಲದ್ದಿ ಮತ್ತು ಕ್ರಿಸ್ ಒಫಿಲಿ
ನಿಸರ್ಗ ನನ್ನ ಸಹಶಿಲ್ಪಿ – ಆಂಡಿ ಗೋಲ್ಡ್ಸ್‌ವರ್ದಿ
ಫಿಗರೇಟಿವ್ ಚಿತ್ರಗಳು ಕೂಡಾ ಇಂದು ಪ್ರಸ್ತುತ – ಪೀಟರ್ ಡಾಯ್
ಕಾನ್ಸೆಪ್ಚುವಲ್ ಆರ್ಟ್‌ನ ಜನಕ – ಸೊಲ್ ಲೆವಿಟ್
ಮನುಷ್ಯ ಆಗಿರೋದು ಅಂದ್ರೆ ಏನು?- ವಿಲಿಯಂ ಕೆಂಟ್ರಿಜ್
“ಸೂಪರ್ ಫ್ಲ್ಯಾಟ್” ಐ ಕ್ಯಾಂಡಿಗಳ ತಕಾಷಿ ಮುರಾಕಾಮಿ
ಅಲ್ಲಿರುವುದು ನನ್ನಮನೆ – ದೊ ಹೊ ಸುಹ್
ದಿ ಲೈಫ್ ಆಫ್ CB: ಅರ್ಥಾತ್, ಕ್ರಿಷ್ಚಿಯನ್ ಬೋಲ್ತನಸ್ಕಿ
ಅಸೆಂಬ್ಲಿಗಳಲ್ಲಿ “ಬಾಕತನ” ತೋರಿಸಿದ ಅರ್ಮಾನ್
ಪ್ರಾಮಾಣಿಕತೆಯೇ ಸೌಂದರ್ಯ- ಜೊರ್ಗ್ ಇಮ್ಮೆಂದ್ರಾಫ್
ನಾಗರೀಕತೆಯ ಒಡಕಿಗೆ ಕನ್ನಡಿ ಹಿಡಿದ ಡೊರಿಸ್ ಸಾಲ್ಸೆದೊ
ಕಾನ್ಸೆಪ್ಚುವಲ್ ಆರ್ಟ್‌ಗೆ ತಳಪಾಯ –ರಾಬರ್ಟ್ ರಾಷನ್‌ಬರ್ಗ್
ಡಿಜಿಟಲ್ ಜಗತ್ತಿನಲ್ಲಿ ಒರಿಜಿನಲ್‌ನ ಹುಡುಕಾಟ – ಥಾಮಸ್ ರಫ್
ಕಲೆ ಜಗತ್ತನ್ನು ಬದಲಾಯಿಸಲೇ ಬೇಕೆಂದಿಲ್ಲ- ಫಿಯೊನಾ ಹಾಲ್
ಜಾಗತೀಕರಣದ ಆಟಗಳ ಬೆನ್ನಟ್ಟಿರುವ ಇಂಕಾ ಶೋನಿಬೇರ್
ಅರ್ಥವಂತಿಕೆಗಾಗಿ ಅರ್ಥ ಕಳೆದುಕೊಳ್ಳಬೇಕೆಂಬ- ಗು ವೆಂಡಾ
ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು- ನಿಯೊ ಆವ್
ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್
‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್
ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್
ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್
ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್
ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್
“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್
ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್
ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’
ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಒಳಗಣ ಅನಂತ ಮತ್ತು ಹೊರಗಣ ಅನಂತ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

 

MORE NEWS

ಶಬ್ದದೊಳಗಿನ ನಿಶ್ಯಬ್ದವನ್ನು ಸ್ಫೋಟ...

02-12-2021 ಬೆಂಗಳೂರು

‘ವೈದೇಹಿಯವರ ಕತೆಗಳು ಮಾತು-ಮೌನಗಳ ಮಧ್ಯೆ ಜೀಕಾಡುತ್ತ, ನೆರಳು-ಬೆಳಕಿನ ಆಟವಾಡುತ್ತ ಅನುಭವದ ಸಂಕೀರ್ಣತೆಯನ್ನು ನಿರ...

ಹಿರಿಯರ ವಿಮರ್ಶಾತ್ಮಕ ಪತ್ರಗಳಿಂದ ಓ...

02-12-2021 ಬೆಂಗಳೂರು

‘ಹಿರಿಕಿರಿಯರ ಅನೇಕ ವಿಮರ್ಶಾತ್ಮಕ ಪತ್ರಗಳಿಂದ ನನಗೆ ಓದುಗರ ಅಪೇಕ್ಷೆ, ರಸಾನುಭೂತಿ ಮತ್ತು ರಸಾನುಭವದ ಮಟ್ಟ ತಿಳಿಯ...

ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ...

30-11-2021 ಬೆಂಗಳೂರು

‘ಕರ್ನಾಟಕದ ಸಂದರ್ಭದಲ್ಲಿ ಉತ್ತರ ದಕ್ಷಿಣದ ತಾರತಮ್ಯ ಅಧಿಕ.‌ ಬಲಾಢ್ಯ ದಕ್ಷಿಣವು ಉತ್ತರವನ್ನು ಎಲ್ಲ ಬಗೆಯಲ್...