ಬೆಳುದಿಂಗಳಲ್ಲಿ ಅರಳಿದ ಮೊಲ್ಲೆ

Author : ಬಿ.ಜಿ.ಎಲ್. ಸ್ವಾಮಿ

Pages 240

₹ 120.00




Year of Publication: 2002
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 080 2661 7100

Synopsys

ಕಲಾನಿಧಿ ಡಾ. ಸ್ವಾಮಿನಾಥ ಅಯ್ಯರ್ ಅವರ ಪ್ರಬಂಧಗಳ ಸಂಕಲನವನ್ನುಮೂಲ ತಮಿಳು ಭಾಷೆಯಿಂದ ಖ್ಯಾತ ಕಥೆಗಾರ ಡಾ. ಬಿ.ಜಿ.ಎಲ್. ಸ್ವಾಮಿ ಅವರು ‘ಬೆಳದಿಂಗಳಲ್ಲಿ ಅರಳಿದ ಮೊಲ್ಲೆ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಡಾ. ಸ್ವಾಮಿನಾಥ ಅಯ್ಯರ್ ಅವರು 40 ವರ್ಷಗಳಿಗೆ ಮೇಲ್ಪಟ್ಟು ಸೇವೆ ಸಲ್ಲಿಸಿದ ಉಪಾಧ್ಯಾಯರು. ಸಂಶೋಧನೆ, ಪಾಂಡಿತ್ಯ, ಸತತಾಭ್ಯಾಸಗಳಿಂದ ಹೆಸರುವಾಸಿ. ಬಿ.ಜಿ.ಎಲ್. ಸ್ವಾಮಿಯವರು ಅಯ್ಯರ್ ಅವರ ಸಾಹಿತ್ಯದ ಸೊಬಗನ್ನು ಇಲ್ಲಿ ನೀಡಿದ್ದಾರೆ. ಅವರ ಪ್ರಬಂಧಗಳಲ್ಲಿ ಕೆಲವನ್ನು ಆಯ್ದು, ಕನ್ನಡಿಸಿದ್ದಾರೆ. ಬೆಳುದಿಂಗಳಲ್ಲಿ ಅರಳಿದ ಮೊಲ್ಲೆ ಮತ್ತು ಇತರ ಪ್ರಬಂಧಗಳ ಈ ಸಂಕಲನದಲ್ಲಿ ಗ್ರಂಥಸಂಪಾದನೆ, ಕವಿಕವಿತೆ, ಕಥಾನಕ, ಸಂಗೀತಕ್ಕೆ ಸಂಬಂಧಿಸಿದ ಅರಳಿದ ಮೊಗ್ಗುಗಳಿವೆ.

About the Author

ಬಿ.ಜಿ.ಎಲ್. ಸ್ವಾಮಿ
(05 February 1916 - 02 November 1980)

ಬಿ. ಜಿ. ಎಲ್. ಸ್ವಾಮಿ ಅಂತರ್‌ರಾಷ್ಟ್ರೀಯ ಮಟ್ಟದ ಸಸ್ಯವಿಜ್ಞಾನಿ, ಹಿರಿಯ ವಿದ್ವಾಂಸ, ಸಾಹಿತಿ, ಚಿಂತನಶೀಲ ಬರಹಗಾರ ಡಾ. ಬಿ.ಜಿ.ಎಲ್‌. ಸ್ವಾಮಿ.  `ಶ್ರೇಷ್ಠ ವಿಜ್ಞಾನಿ' ಎಂದು ಹೆಸರಾಗಿದ್ದ ಖ್ಯಾತ ಸಂಶೋಧಕ ಸ್ವಾಮಿ ಅವರ ಪೂರ್ಣ ಹೆಸರು ’ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣಸ್ವಾಮಿ’. ಕನ್ನಡದ ಹಿರಿಯ ಸಾಹಿತಿ ಡಿವಿಜಿಯವರ ಪುತ್ರ. 1916ರ ಫೆಬ್ರುವರಿ ಐದರಂದು ಜನಿಸಿದ ಅವರು ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡರು. ತಂದೆಯ ಗುಂಡಪ್ಪ ಹಾಗೂ ಅವರ ಗ್ರಂಥ ಭಂಡಾರದಿಂದ ಪ್ರತಿಭಾನ್ವಿತರಾದ ವ್ಯಕ್ತಿ. ಪ್ರಾಥಮಿಕದಿಂದ ಪದವಿಯವರೆಗೆ ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿದ ಅವರು ಸೆಂಟ್ರಲ್ ಕಾಲೇಜಿನಲ್ಲಿ ಸಸ್ಯಶಾಸ್ತ್ರದ ವಿದ್ಯಾರ್ಥಿ ಆಗಿರುವಾಗ ಕರ್ನಾಟಕ ಸಂಘದ ಕಾರೈದರ್ಶಿ ...

READ MORE

Related Books