ಸಂಪನ್ಮೂಲಗಳಿಗಾಗಿ ಸಮುದ್ರ ಮಥನ

Author : ಟಿ. ಆರ್. ಅನಂತರಾಮು

Pages 104

₹ 60.00




Year of Publication: 2012
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸೆ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು- 560 001
Phone: 08022161913

Synopsys

ಹಿಂದೆಂದೂ ಬಿಟ್ಟುಕೊಡದಷ್ಟು ರಹಸ್ಯಗಳನ್ನು ಸಾಗರಗಳು ಇಂದು ಬಿಟ್ಟುಕೊಡುತ್ತಿವೆ. ಅಮೂಲ್ಯ ಲೋಹಗಳು, ಬಹುಲೋಹಯುಕ್ತ ಗಂತಿಗಳ ಭಂಡಾರವೇ ಸಾಗರದಾಳದಲ್ಲಿ ಗುಪ್ತನಿಧಿಯಾಗಿ ಅಡಗಿ ಕುಳಿತು ಬಳಕೆಗಾಗಿ ಕಾದಿವೆ. ಲವಣದಿಂದ ಚಿನ್ನದವರೆಗೆ, ಪೆಟ್ರೋಲಿಯಂನಿಂದ ಯುರೇನಿಯಂವರೆಗೆ ತುಂಬಿ ಸಾಗರದ ಅಕ್ಷಯ ಪಾತ್ರೆ ತುಳುಕುತ್ತಿವೆ. ಇವೇ ನಾಳಿನ ಖನಿಜದ ಗಣಿಗಳು. ಅತ್ಯಾಕರ್ಷಕ ಹಾಗೂ ಸಮೃದ್ಧ ಚಿತ್ರಗಳನ್ನು ಒಳಗೊಂಡಿರುವ ಈ ಪುಸ್ತಕವನ್ನು ವಿಶೇಷವಾಗಿ ಜನಸಾಮಾನ್ಯರಿಗಾಗಿಯೇ ಬರೆಯಲಾಗಿದ್ದು, ಸಾಗರಗಳ ಕಾಲಾತೀತ ರಹಸ್ಯವನ್ನು ತೆರೆದಿಡುತ್ತದೆ. ಸಾಗರ ಉದಾರವಾಗಿ ನಮಗೆ ನೀಡುವ ನಿಕ್ಷೇಪಗಳ ವಿವರಗಳನ್ನು ಸುಂದರವಾಗಿ ಚಿತ್ರಿಸಲಾಗಿದೆ. ಸಾಗರ ಸಂಪನ್ಮೂಲವನ್ನು ಹೇಗೆ ಪರಿಗಣಿಸಬಹುದೆಂಬ ಮಾನವ ಪ್ರಯತ್ನಗಳ ಬಗ್ಗೆ ಹೆಚ್ಚು ಒತ್ತು ನೀಡಲಾಗಿದೆ. ಮೂಲ ಇಂಗ್ಲಿಷ್ ಕೃತಿಯನ್ನು ಕನ್ನಡದ ಸೊಗಡು ಮೂಡುವಂತೆ ಟಿ.ಆರ್. ಅನಂತರಾಮು ಅನುವಾದಿಸಿದ್ದಾರೆ.

About the Author

ಟಿ. ಆರ್. ಅನಂತರಾಮು
(03 August 1949)

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ...

READ MORE

Related Books