ಗುಂಡಿಗೆಯ ಬಿಸಿರಕ್ತ

Author : ಕೇಶವ ಮಳಗಿ

Pages 280

₹ 280.00
Year of Publication: 2021
Published by: ದೀಪಂಕರ ಪುಸ್ತಕ
Address: ಸುರೇಶ ನಾಗಲಮಡಿಕೆ s/o ನಾಗರಾಜಪ್ಪ, ನಾಗಲಮಡಿಕೆ, ಪಾವಗಡ ಗ್ರಾಮೀಣ ತಾಲೂಕು, ತುಮಕೂರು ಜಿಲ್ಲೆ- 561202
Phone: 9886279441

Synopsys

‘ಗುಂಡಿಗೆಯ ಬಿಸಿರಕ್ತ: ಆಫ್ರಿಕನ್ ಸಂಕಥನ’ ಸಂಸ್ಕೃತಿ, ಸಮಾಜ, ರಾಜಕೀಯ ಮತ್ತು ಮೌಖಿಕ ದಾರ್ಶನಿಕತೆಯ ಪ್ರಬಂಧಗಳನ್ನು ಲೇಖಕ ಕೇಶವ ಮಳಗಿ ಅವರು ಕನ್ನಡೀಕರಿಸಿದ್ದಾರೆ. ಇದೊಂದು ಸಾಂಸ್ಕೃತಿಕ ಸಂಕಥನ. ಭಾಷೆ, ಸಾಹಿತ್ಯ, ಸಮಾಜ, ರಾಜಕಾರಣ, ಜೀವಪರಿಸರ, ಸಾಮುದಾಯಿಕ ದಾರ್ಶನಿಕತೆ, ಲಿಂಗ-ಸಂವೇದನೆ ಹಾಗೂ ಸಿದ್ಧಾಂತಗಳು ಹೇಗೆ ಬಹುತ್ವದ ಸಂಸ್ಕೃತಿಗಳನ್ನು ಕಟ್ಟುತ್ತವೆ ಎಂಬುದನ್ನು ಶೋಧಿಸುವ ಕೃತಿ. ಆಧುನಿಕತೆ ಮತ್ತು ಶಿಷ್ಟ ಪರಂಪರೆ ಮಾತ್ರ ಜ್ಞಾನವನ್ನು ಸೃಷ್ಟಿಸುವ ಆಕರಗಳು ಎಂಬ ಹುಸಿ ನಂಬಿಕೆಯನ್ನು ವಿಸರ್ಜಿಸಿ ಮೌಖಿಕ ಪರಂಪರೆಯ ದಾರ್ಶನಿಕತೆಯನ್ನು ನಮ್ಮದಾಗಿಸಿಕೊಳ್ಳುವ ಮುಕ್ತತೆಯನ್ನು ತೋರಬೇಕು. ಮೌಖಿಕ ಪರಂಪರೆಯ ಬಹು ಬಗೆಯ ಹೊರಸುರಿಗಳನ್ನು ಸಾಮುದಾಯಿಕ ಕಲಾಪ್ರಜ್ಞೆ ರೂಪಿಸಿದ ದಾರ್ಶನಿಕತೆಯೆಂದು ಒಪ್ಪಿಕೊಳ್ಳಬೇಕು ಎಂಬ ಪ್ರಸ್ತಾವನೆಗಳನ್ನು ಈ ಕೃತಿಯಲ್ಲಿ ಕಾಣುತ್ತೇವೆ. ಮೌಖಿಕ ಪರಂಪರೆಯ ಪ್ರಕಾರಗಳಿಂದ ಹೇಗೆ ಜಾನಪದ ಮೀಮಾಂಸೆಯನ್ನು ಕಟ್ಟುವುದು ಎಂಬುದನ್ನು ಎತ್ತಿ ತೋರಿಸುವ ಬರಹಗಳು ಇಲ್ಲಿವೆ.

About the Author

ಕೇಶವ ಮಳಗಿ

ಸದ್ಯ ಬೆಂಗಳೂರಿನ ಸೃಷ್ಟಿ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಆ್ಯಂಡ್ ಟೆಕ್ನಾಲಜಿಯಲ್ಲಿ ಬೋಧಕರಾಗಿರಾಗಿರುವ ಕೇಶವ ಮಳಗಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರಾಗಿರುವ ಮಳಗಿ ಅವರು 80ರ ದಶಕದಲ್ಲಿ ತಮ್ಮ ಬರವಣಿಗೆ ಆರಂಭಿಸಿದರು. ತಮ್ಮ ವಿಶಿಷ್ಟ ನುಡಿಗಟ್ಟು, ಶೈಲಿ, ದನಿ ಬನಿಯ ಕತೆಗಳಿಂದ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ಮಳಗಿ ಅವರು ಜನಸಾಮಾನ್ಯರು ಬದುಕನ್ನು ಘನತೆ, ಪ್ರೀತಿಯಿಂದ ಜೀವಿಸುವ ರೀತಿಯನ್ನು ಕತೆಗಳಲ್ಲಿ ಚಿತ್ರಿಸುತ್ತಾರೆ. ಆಪ್ತವಾಗಿ ಕತೆ ಹೇಳುವಂತೆ ಬರೆಯುವ ಮಳಗಿ ಅವರ 'ಕಡಲ ತೆರೆಗೆ ದಂಡೆ', 'ಮಾಗಿ ಮೂವತ್ತೈದು', 'ವೆನ್ನೆಲ ದೊರೆಸಾನಿ', 'ಹೊಳೆ ...

READ MORE

Related Books