ನಿಮ್ಮ ಸುಪ್ತಪ್ರಜ್ಞಾ ಮನಸ್ಸಿನ ಶಕ್ತಿ

Author : ಶಿವಾನಂದ ಬೇಕಲ್

Pages 316

₹ 199.00




Year of Publication: 2014
Published by: ಮಂಜುಳಾ ಪಬ್ಲಿಷಿಂಗ್
Address: ಕೇರಳ

Synopsys

‘ನಿಮ್ಮ ಸುಪ್ತಪ್ರಜ್ಞಾ ಮನಸ್ಸಿನ ಶಕ್ತಿ’ ಜೋಸೆಫ್ ಮರ್ಫಿ ಅವರ ಮೂಲ ಕೃತಿಯಾಗಿದ್ದು, ಶಿವಾನಂದ ಬೇಕಲ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಪುಸ್ತಕವು ಒಟ್ಟು 21 ಅಧ್ಯಾಯಗಳನ್ನು ಒಳಗೊಂಡಿದೆ. ಪ್ರತಿ ಅಧ್ಯಾಯವು ಚಮತ್ಕಾರಿ ಹಾಗೂ ನಮ್ಮ ಬದುಕಿನ ಬದಲಾವಣೆಗೆ ಅವಶ್ಯಕವಾದ ವಿಷಯಗಳನ್ನೇ ಹೇಳುತ್ತವೆ. ಮನಸ್ಸಿನಲ್ಲೂ ಎರಡು ವಿಧಗಳಿವೆ. ಒಂದು ಪ್ರಜ್ಞಾ ಮನಸ್ಸು ಇನ್ನೊಂದು ಸುಪ್ತಪ್ರಜ್ಞಾ ಮನಸ್ಸು. ಇವೆರಡರ ಕಾರ್ಯವೈಖರಿಯನ್ನು ಪುಸ್ತಕದುದ್ದಕ್ಕೂ ಹೇಳಲಾಗಿದೆ. ನಮ್ಮೊಳಗಿರುವ ಅಧಮ್ಯ ಶಕ್ತಿಯನ್ನು ಪುಟಿದೇಳಿಸುವ ಕಾರ್ಯವನ್ನು ನಮ್ಮ ಸುಪ್ತಶಕ್ತಿ ಮಾಡುತ್ತದೆ. ನಾವು ನಂಬಿರುವ ನಂಬಿಕೆಯೇ ನಮ್ಮೊಡನಿರುವ ಸುಪ್ತಶಕ್ತಿ. ನಮ್ಮ ಮನಸ್ಸಿನ ಮೂಲಕ ಏನನ್ನು ಹೇಳುತ್ತೆವೆಯೋ ಅದೇ ನಡೆಯುತ್ತದೆ. ಸಕಾರಾತ್ಮಕ ಅಂಶಗಳನ್ನು ಸುಪ್ತಮನಸ್ಸು ಹೇಗೆಲ್ಲ ಫಲಕಾರಿಯಾಗಿಸುತ್ತದೆ ಎಂಬುದನ್ನು ಪರಿಚಯಿಸಲಾಗಿದೆ. ಸುಪ್ತಪ್ರಜ್ಞಾ ಮನಸ್ಸು ಪ್ರತಿಯೊಬ್ಬ ಮನುಷ್ಯನಲ್ಲೂ ಇರುವ ಬಹುದೊಡ್ಡ ಮ್ಯಾಜಿಕ್ ಯಂತ್ರವಿದ್ದಂತೆ. ಅದರ ಸಮರ್ಪಕ ಬಳಕೆಯಿಂದ ಅದೆಷ್ಟೋ ಜನರು ವಿಜ್ಞಾನಿಗಳಾಗಿದ್ದಾರೆ, ಬಹುದೊಡ್ಡ ಸಂಗೀತಗಾರರಾಗಿದ್ದಾರೆ, ಒಬ್ಬ ಒಳ್ಳೆಯ ಉದ್ಯಮಿಯಾಗಿದ್ದಾರೆ, ಒಳ್ಳೆಯ ಲಾಯರ್ ಆಗಿದ್ದಾರೆ. ಹೀಗೆ ಅವರವರ ಮನದಾಸೆಯಂತೆ ಅವರು ಬಯಸಿದ ಬಯಕೆಗಳನ್ನು ಈಡೇರಿಸಿಕೊಂಡು ಸುಖಮಯವಾಗಿಯೂ ಇದ್ದಾರೆ ಎನ್ನುತ್ತದೆ ಈ ಕೃತಿ.

About the Author

ಶಿವಾನಂದ ಬೇಕಲ್
(21 February 1951)

ಡಾ. ಶಿವಾನಂದ ಬೇಕಲ್ ಅವರು ಹುಟ್ಟಿದ್ದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಐತಿಹಾಸಿಕ ಸ್ಥಳ ಬೇಕಲ್ ನಲ್ಲಿ. ತಂದೆ- ಬೇಕಲ್  ಸಾಂತನಾಯಕರು, ತಾಯಿ- ಲಲಿತಾಬಾಯಿ. ಪ್ರಾಥಮಿಕದಿಂದ ಹೈಸ್ಕೂಲುವರೆಗೆ ವಿದ್ಯಾಭ್ಯಾಸ ನಡೆದದ್ದು ಬೇಕಲ್‌ನಲ್ಲಿ . ಕಾಸರಗೋಡಿನಲ್ಲಿ ಬಿ.ಎಸ್ಸಿ, ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಡ್, ಕರ್ನಾಟಕ ವಿಶ್ವ ವಿದ್ಯಾಲಯದಿಂದ ಎಂ.ಎ. ಮತ್ತು ಗುಲಬರ್ಗಾ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪಡೆದರು. 16ನೇ ವಯಸ್ಸಿನಲ್ಲಿ ಬರೆದ ‘ಕೇದಗೆಯ ಹಾವು’ ಮೊದಲ ಕಥೆಗೆ 1968ರಲ್ಲಿ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಬಹುಮಾನ ಗಳಿಸಿತು. ಇವರ ಲೇಖನ ಕೃಷಿ ಮಂಗಳೂರಿನ ನವಭಾರತ, ಕಿನ್ನಗೋಳಿಯ ಯುಗಪುರುಷ ನಂತರ  ಸುಧಾ, ತರಂಗ, ಪ್ರಜಾವಾಣಿ, ...

READ MORE

Related Books