ವಿವೇಚನೆಯ ಅಂಚಿನೆಡೆಗೆ

Author : ಉಮಾ ವೆಂಕಟೇಶ್

Pages 400

₹ 390.00




Year of Publication: 2021
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರ ಪಾರ್ಕ್ (ಪೂರ್ವ), ಬೆಂಗಳೂರು-560001,
Phone: 0802216 1900

Synopsys

ವಿವೇಚನೆಯ ಅಂಚಿನೆಡೆಗೆ- ಅಮೆರಿಕಾದಲ್ಲಿ ವಿಜ್ಞಾನ ಪತ್ರಕರ್ತರಾದ ಅನಿಲ್ ಅನಂತಸ್ವಾಮಿ ಅವರು ಇಂಗ್ಲಿಷಿನಲ್ಲಿ ಬರೆದ ಮೂಲ ಕೃತಿಯನ್ನು ಅಮೆರಿಕಾದ ಪೆನ್ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಸಂಶೋಧಕಿ ಹಾಗೂ ಲೇಖಕಿ ಉಮಾ ವೆಂಕಟೇಶ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕಾಸ್ಮಾಲಜಿಯ ಮಹತ್ವದ ಸವಾಲುಗಳನ್ನುಪರಿಚಯಿಸಲಾಗಿದೆ. ಅತ್ಯಾಧುನಿಕ ದೂರದರ್ಶಕಗಳು ಮತ್ತು ಪತ್ತೇದಾರಿಯ ಸಾಹಸವನ್ನು ಪರಿಣಾಮಕಾರಿಯಾಗಿ ವಿವರಿಸುವ ಕೃತಿ ಲಂಡನ್ ನಲ್ಲಿ ಫಿಜಿಕ್ಸ್ ವರ್ಲ್ಡ್ -2010ರಲ್ಲಿ ವರ್ಷದ ಪುಸ್ತಕ ಎಂಬ ಖ್ಯಾತಿ ಪಡೆದ ಈ ಕೃತಿ ‘ದಿ ಎಡ್ಜ್ ಆಫ್ ಫಿಜಿಕ್ಸ್ ; ಶೀರ್ಷಿಕೆಯಡಿ ತದನಂತರ ಭಾರತದಲ್ಲಿ ‘ದಿ ಎಜ್ಡ್ ಆಫ್ ರೀಜನ್’ ಶೀಷೀಕೆಯೊಂದಿಗೆ ಪ್ರಕಟವಾಗಿತ್ತು. ಸೌಂದರ್ಯವರ್ಧನೆಗೆ ಸಂಬಂಧಿಸಿದ ಸವಾಲು ಹಾಗೂ ಪರಿಹಾರಗಳ ಸ್ಪಷ್ಟ ಚಿತ್ರಣ ನೀಡುವ ಈ ಕೃತಿಯಲ್ಲಿ ಭಾವನಾತ್ಮಕ, ಆಕರ್ಷಕ ಹಾಗೂ ವಿವರಣಾತ್ಮಕ ನಿರೂಪಣೆ ಇದೆ. ಆದ್ದರಿಂದ, ಕಾಸ್ಮಾಲಜಿಯ ವಿಸ್ಮಯಲೋಕದ ಯಾನ ಎಂದೇ ಈ ಕೃತಿಯು ಉಪಶೀರ್ಷಿಕೆಯನ್ನು ಹೊಂದಿದೆ.

ಪಾದ್ರಿಗಳೂ ಖಗೋಳ ವೀಕ್ಷಕರೂ, ಅಗೋಚರ ದ್ರವ್ಯದ ಜಾಡನ್ನು ಹಿಡಿದು, ಕಿರಿಯ ತಟಸ್ಥ ಕಣಗಳು, ವಾನರಲ್ ಚತುರ್ಮುಖ ಬೆಳಕು, ಅಗ್ನಿ, ಶಿಲೆ ಮತ್ತು ಹಿಮಗಡ್ಡೆ, ಕಾರೂ ಮರುಭೂಮಿಯ ಮೂರು ಸಾವಿರ ಕಣ್ಣುಗಳು, ಅಂಟಾರ್ಕ್ಟಕಾದಲ್ಲಿಂದ ಪ್ರತಿದ್ರವ್ಯಾನ್ವೇಷಣೆ, ದಕ್ಷಿಣ ಧ್ರುವದಲ್ಲಿ ಕ್ವಾಂಟಮ್ ಭೌತವಿಜ್ಞಾನದೊಂದಿಗೆ ಐನ್ ಸ್ಟೇನ್ ಸಮಾಗಮ, ಭೌತ ವಸ್ತುವಿನ ಮರ್ಮ, ಅನ್ಯವಿಶ್ವಗಳ ಪಿಸುಧ್ವನಿ ಹೀಗೆ ಹಲವು ಅಧ್ಯಾಯಗಳನ್ನು ಈ ಕೃತಿಯು ಒಳಗೊಂಡಿದ್ದು, ಕುತೂಹಲ ಮೂಡಿಸುತ್ತವೆ.  

About the Author

ಉಮಾ ವೆಂಕಟೇಶ್

ಲೇಖಕಿ ಡಾ. ಉಮಾ ವೆಂಕಟೇಶ್ ಅವರ ಬಾಲ್ಯ ಕಳೆದಿದ್ದು ಹಾಗೂ ವಿದ್ಯಾಭ್ಯಾಸ ಮಾಡಿದ್ದೆಲ್ಲವೂ ಮೈಸೂರಿನಲ್ಲಿ. ಕರ್ನಾಟಕ ವಿಶ್ವವಿದ್ಯಾಲಯದಿಂದ ಸಸ್ಯಶಾಸ್ತ್ರದಲ್ಲಿ ಡಾಕ್ಟರೇಟ್ ಪದವೀಧರರು. ಎಂಟು ವರ್ಷ ಕಾಲ ಉಪನ್ಯಾಸಕಿಯಾಗಿ ಕೆಲಸ ನಿರ್ವಹಣೆ ನಂತರ 1996ರಿಂದ ಪತಿ ಹಾಗೂ ಮಕ್ಕಳೊಂದಿಗೆ ಯೂನೈಟೆಡ್ ಕಿಂಗ್ ಡಮ್ ನಲ್ಲಿಯ ಕಾರ್ಡಿಫ್ ನಗರದಲ್ಲಿ ವಾಸವಿದ್ದಾರೆ. ಅಮೆರಿಕೆಯ ಪೆನ್ ಸ್ಟೇಟ್ ವಿಶ್ವವಿದ್ಯಾಲಯದ ಸಸ್ಯತಳಿಶಾಸ್ತ್ರ ವಿಭಾಗದಲ್ಲಿ ಸಂಶೋಧಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯು.ಕೆ. ಕನ್ನಡ ಬಳಗದ ಸಾಹಿತ್ಯ ವೇದಿಕೆ ‘ಆದಿವಾಸಿ’ ಜಾಲಜಗುಲಿಯ ಸ್ಥಾಪನೆ ಹಾಗೂ ವೇದಿಕೆಯ ಕಾರ್ಯಚಟುವಟಿಕೆಗಳಲ್ಲಿ ನಿರತರು. ವಿಜ್ಞಾನದ ಹಲವಾರು ಲೇಖನಗಳನ್ನು ಬರೆಯುತ್ತಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತ, ...

READ MORE

Related Books