ದ್ರೌಪದಿ ದೇವಿಯ ಕರಗ ಪುರಾಣ

Author : ವೇಣುಗೋಪಾಲ ವಹ್ನಿ

Pages 332

₹ 350.00




Year of Publication: 2021
Published by: ದೇಸಿ ಪ್ರಕಾಶನ
Address: ನಂ.121, 13ನೇ ಮುಖ್ಯರಸ್ತೆ, ಎಂ.ಸಿ.ಲೇಔಟ್, ವಿಜಯನಗರ, ಬೆಂಗಳೂರು-40

Synopsys

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವೇಣುಗೋಪಾಲ ವಹ್ನಿ ಅವರ ’ದ್ರೌಪದಿ ದೇವಿಯ ಕರಗ ಪುರಾಣ’ ಕೃತಿಯು ಪುರಾಣ ಸಂಬಂಧಿತ ಅಧ್ಯಯನ ಗ್ರಂಥವಾಗಿದೆ. ಈ ಕೃತಿಯ ಕೇಂದ್ರ ಬಿಂದು ಶಿಷ್ಟ ಭಾರತದಲ್ಲಿ ಬರುವ ದ್ರೌಪದೀ ದೇವಿ. ದ್ರೌಪದೀ ದೇವಿಯು ಅಪ್ರಾಕೃತಿಕವಾಗಿ ಯಜ್ಞಕುಂಡಲದಲ್ಲಿ ಅವತರಿಸಿದರೂ, ಸಾಮಾನ್ಯ ಸ್ತ್ರೀಯಂತೆ ಒಬ್ಬ ಮಗಳಾಗಿ, ಪಾಂಡವರ ಪತ್ನಿಯಾಗಿ, ಗೃಹಿಣಿಯಾಗಿ, ಉಪಪಾಂಡವರ ತಾಯಾಗಿ ನಡೆದುಕೊಳ್ಳುತ್ತಾಳೆ. ದುಶ್ಯಾಸನ, ದುಯೋರ್ಧನ, ಜಯಪ್ರದ, ಕೀಚಕ, ಶಕುನಿ, ಕರ್ಣರಿಂದ ಅಪಮಾನಿತಳಾಗುತ್ತಾ , ಆಕೆಯ ಜೀವನದ ವಿಚಾರಗಳನ್ನು ಇಲ್ಲಿ ಭಿನ್ನವಾಗಿ ಲೇಖಕ ಕಟ್ಟಿಕೊಡುತ್ತಾ ಹೋಗುತ್ತಾನೆ. ದ್ರೌಪದಿ ದೇವಿ ಎಲ್ಲಿಯೂ ದೈಹಿಕ, ಶಕ್ತಿಯನ್ನಾಗಲೀ, ಮಾನವಾತೀತ ಶಕ್ತಿಯನ್ನಾಗಲೀ ತೋರುವುದಿಲ್ಲ. ಮೌಖಿಕ ಭಾರತದ ದ್ರೌಪದೀ ದೇವಿಯು ಸರ್ವಶಕ್ತಳಾದ ಆದಿ ಮಾತೆಯಾಗಿದ್ದು ಆಕೆಯನ್ನು ಕಂಡುಕೊಳ್ಳುವ ಪ್ರಯತ್ನ ಈ ಕೃತಿಯಾಗಿದೆ.

ಕೃತಿಗೆ ಬೆನ್ನುಡಿ ಬರೆದಿರುವ ವಿ. ಚಂದ್ರಶೇಖರ ನಂಗಲಿ ಅವರು, ದ್ರೌಪದಿಯನ್ನು ಒಂದು ಮಹಾ ನದಿಗೆ ಹೋಲಿಸಿರುವ ಲೇಖಕರು ಈ ಜೀವನದಿಗೆ ಸೇರಿಕೊಳ್ಳುವ ಕಿರುತೊರೆಗಳ, ಉಪನದಿಗಳ ಬಹು ದೊಡ್ಡ ನೆಟ್ ವರ್ಕ್ ಅನ್ನು ಜೇಡನಂತೆ ಒಡಲ ನೂಲಿನಿಂದ ನೇಯುತ್ತಾ, ಗದ್ಯ ಕಥನವನ್ನು ಕಟ್ಟಿಕೊಟ್ಟಿದ್ದಾರೆ. ಇಲ್ಲಿ ಪ್ರಕೃತಿ ತತ್ವಿ, ಆದಿಶಕ್ತಿ, ಲಕ್ಷ್ಮಿ, ಸರಸ್ವತಿ ಪಾರ್ವತಿ, ಇಂದ್ರಾಣಿ, ಶಬೀದೇವಿ, ಸೃಷ್ಠಿದೇವತೆ, ಇಂದ್ರಸೇನಿ, ನಳಾಯಿನಿ, ಯೋಗಮಾಯಿ, ದುರ್ಗೆ, ಕಾಳಿಮಾತೆ, ಹೀಗೆ ದಶಾವತಾರಗಳ ಸೃಷ್ಟಿ ಸ್ವರೂಪಿಣಿಯಾಗಿ ’ ದ್ರೌಪದಿ ಅಮ್ಮನ್’ ಆರಾಧ್ಯ ದೈವವನ್ನು ಮೌಖಿಕ ನಂಬಿಕೆಗಳ ಆಧರಿಸಿ, ಮಹಾಭಾರತದ ‘ಮೆಯ್’ ಕೆಡದಂತೆ ಕತಾ ನಿರೂಪಣೆಯನ್ನು ಮಾಡಿದ್ಧಾರೆ. ಆರಾಧ್ಯ ದೈವ, ಕುಲದೇವತೆಗೆ ಸಂಬಂಧಪಟ್ಟ ಅಘಟಿತ ಘಟನಾ ಚಾತುರ್ಯ, ಅದ್ಭುತ ಕಲ್ಪನಾ ರಮ್ಯತೆ, ದೇವ ದಾನವ ಮಾನುಷ ತಿರ್ಯಕ್ ಜೀವಿಗಳ ಜಡೆ ಕೋಲಾದಂತೆ ಹೆಣೆದುಕೊಳ್ಳುವ ಕಥನ ಕಲೆಯ ಸಂಯೋಜನಾ ಶಕ್ತಿಯನ್ನು ಓದುಗರಿಗೆ ನೀಡುತ್ತದೆ’ ಎಂದು ಪ್ರಶಂಸಿಸಿದ್ದಾರೆ.

About the Author

ವೇಣುಗೋಪಾಲ ವಹ್ನಿ
(22 September 1949)

ವೇಣುಗೋಪಾಲ ವಹ್ನಿ ಅವರು ಮೂಲತಃ ಕೋಲಾರ ಜಿಲ್ಲೆಯ ಮಾಲೂರಿನವರು. ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕೃತರಾಗಿದ್ದಾರೆ. ಓದು, ಬರಹ, ಸಂಗೀತ, ಕ್ರೀಡೆಗಳ ವೀಕ್ಷಣೆ ಅವರ ಹವ್ಯಾಸಗಳಾಗಿವೆ. ಪ್ರಕಟಿತ ಕೃತಿಗಳು: ಪಳಯನ್ನರು ಮತ್ತು ದ್ರೌಪದಿ( ಸಂಶೋಧನೆ), ಸೆಲೆ ಬತ್ತಿದಾ ಜಲದ ಕಣ್ಣು, ಉಸಿರು ನೇಯುವ ದಾರ (ಕವನ ಸಂಕಲನ), ಧ್ವನಿ ಸಾಂದ್ರಿಕೆಗಳು: ಮಾಲೂರ ಮಹಮಾತೆ, ಮಾಲಿಕಾಪುರೀಶ್ವರಿ, ಕರಗ ಮಹಾಶಕ್ತಿಯ, ಕರಗ ಪರಮೇಶ್ವರಿ, ಯೋಗ ಮಾಯೆ, ನೆನಪುಗಳು, ಅಯ್ಯಪ್ಪನಾ ಭಜಿಸಿ, ಹರಿಹರಕುವರ ...

READ MORE

Related Books