ಹಿರಿಯ ಲೇಖಕ ಪ್ರೊ.ಕೆ.ಎಸ್. ನಾರಾಯಾಣಚಾರ್ಯ ಅವರ ಕೃತಿ- ’ಯಯಾತಿ’. ಮಹಾಭಾರತ ಕಥಾನಕಗಳನ್ನು ಒಳಗೊಂಡ ಕಾದಂಬರಿಯಾಗಿದೆ. ’ಶ್ರೀ ಮಹಾಭಾರತ ಕಥಾ ಪೂರ್ವಕಾಂಡ’ ಎಂಬ ಆದಿಪರ್ವದ ಭಾಗಗಳು ತುಂಬಾ ಮಾರ್ಮಿಕವಾದವು. ಇದರ ಕಥಾರೂಪದ ಭಾಗವೇ ಯಯಾತಿ ಕೃತಿ. 34 ಶೀರ್ಷಿಕೆಗಳನ್ನು ಒಳಗೊಂಡಿದ್ದು, ಶ್ರೀ ಸೂತ ಉವಾಚ, ದೇವಯಾನೀ ಹಿನ್ನೆಲೆ, ಕಚ, ವಂಚನೆ, ಪರೀಕ್ಷೆಗಳು, ಸಂಕೀರ್ಣ, ಆಪತ್ತುಗಳು, ಅಸುರ ಪ್ರಯತ್ನಗಳು, ಮೃತಸಂಜೀವಿನಿ-ಪ್ರಥಮ ಪ್ರಯೋಗ, ಶುಕ್ರನ ಅಸಮಾಧಾನ, ವಿದ್ಯಾವ್ಯಾಪ್ತಿ-ಅನರ್ಥ, ಶಾಪ, ಪತ್ರಿಶಾಪ, ಶರ್ಮಿಷ್ಠೆ- ದೇವಯಾನೀ ಕೈ ಹಿಡಿದ ಯಯಾತಿ, ವಿಧಿ ವಿಕೋಪ, ಶರ್ಮಿಷ್ಠೆಯ ಸೇಡು, ಅನರ್ಥ ಪರಂಪರೆ, ಶರ್ಮಿಷ್ಠೆ ಹಠಸಿದ್ಧಿ, ಕಾಲದ ಪ್ರಕೋಪ, ಕಾಲದ ನಿರ್ಣಯ, ಪರೀಕ್ಷೆಗಳು, ಮುಂದುವರೆದುದು, ಶುಕ್ರ ಶಾಪ, ಪರಿಣಾಮ, ವಿಭಜನೆ, ಪುರುವಿನ ಚಿಂತನೆಗಳು, ಸಂತತಿ-ವಿವರ, ಪಶ್ಚಾತ್ತಾಪ, ಯಯಾತಿ ಗೀತೆ, ಯಾಗ-ಯೋಗ, ಪತನ, ಪತನಾನಂತರ, ಸಂವಾದ, ಅಷ್ಟಕಾದಿಗಳ ಸ್ವರ್ಗಗಮನ, ನಕಾಶೆಯ ಬಗ್ಗೆ ಇಲ್ಲಿ ವಿವರಣೆಗಳಿವೆ
©2022 Book Brahma Private Limited.