ಕವಿಗಳು ಕಂಡ ಬಿ.ಎಂ.ಶ್ರೀ

Author : ಹೊ.ರಾ. ಸತ್ಯನಾರಾಯಣರಾವ್‌

Pages 100

₹ 80.00




Year of Publication: 2012
Published by: ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ
Address: ಎಂ.ವಿ.ಸೀ-ಸಂಶೋಧನ ಕೇಂದ್ರ, 3ನೇ ಮುಖ್ಯರಸ್ತೆ, ನರಸಿಂಹರಾಜ ಕಾಲೋನಿ, ಬೆಂಗಳೂರು- 560 019
Phone: 26676773

Synopsys

‘ಕವಿಗಳು ಕಂಡ ಬಿ.ಎಂ.ಶ್ರೀ’ ಕೃತಿಯನ್ನು ಲೇಖಕ ಹೊ.ರಾ. ಸತ್ಯನಾರಾಯಣರಾವ್ ಸಂಪಾದಿಸಿದ್ದಾರೆ. ಈ ಕೃತಿಗೆ ಪ್ರೊ. ಡಿ. ಲಿಂಗಯ್ಯ ಬೆನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ತಿಳಿಸುತ್ತಾ.. ‘ಕನ್ನಡ ನಾಡು ನುಡಿ ಸಾಹಿತ್ಯ ಸಂಸ್ಕೃತಿ ಸಂದರ್ಭದಲ್ಲಿ ಕನ್ನಡ ಕಣ್ವ, ಆಚಾರ್ಯ ಬಿ.ಎಂ. ಶ್ರೀಕಂಠಯ್ಯ ಅವರು ನವ ಚೈತನ್ಯ ನೀಡಿದ ಪ್ರಾಂಜಲ ಪ್ರಭಾವಳಿ. ಅವರ ಬದುಕು ಬರಹ ಅನುಪಮ ಆದರ್ಶ. ಅವರ ಬರಹದಲ್ಲಿ ಹೊಸ ಹೊಳಹು ಮೂಡಿತು. ಅವರ ಕನ್ನಡ ನಾಡು, ಕನ್ನಡತನ, ಕನ್ನಡಿಗರ ಚಿಂತನದಲ್ಲಿ ನವೀನ ಸ್ಫೂರ್ತಿ ಚಿಮ್ಮಿತು.

ಆ ಪ್ರಾತಃಸ್ಮರಣೀಯರ ಬಗೆಗೆ ಅವರ ಸಮಕಾಲೀನರು, ಅನಂತರದವರು, ಹಿರಿಯರು, ಕಿರಿಯರು ಕಾವ್ಯನಮನ ಸಲ್ಲಿಸಿ ಶ್ರೀಯವರ ಮೇರುಸದೃಶ ವ್ಯಕ್ತಿತ್ವವನ್ನು ಚಿರಸ್ಥಾಯಿಯಾಗಿಸಿದ್ದಾರೆ. ಅಂಥಹ ಮಹನೀಯರನ್ನು ಕುರಿತು ರಚಿಸಿದ ವಿವಿಧ ಕವಿಗಳ ವಿಶಿಷ್ಟ ಕವನ ಪುಷ್ಪಮಾಲೆ. ಈ ಅಪೂರ್ಣ ಸಂಕಲನ ಕವಿಗಳು ಕಂಡ ಬಿ.ಎಂ.ಶ್ರೀ ’ ಇದು ಕನ್ನಡ ಸಹೃದಯರ ಪ್ರೀತಿ ವಿಶ್ವಾಸವನ್ನು ಗಳಿಸಬಹುದೆಂಬ ಸದುದ್ದೇಶದಿಂದ ಪ್ರಕಟಿಸಲಾಗಿದೆ ಎಂದಿದ್ದಾರೆ.

About the Author

ಹೊ.ರಾ. ಸತ್ಯನಾರಾಯಣರಾವ್‌
(28 February 1930)

ಬರಹಗಾರ ಹೊ.ರಾ. ಸತ್ಯನಾರಾಯಣರಾವ್‌ ಅವರು 1930 ಫೆಬ್ರುವರಿ 28ರಂದು ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಜನಿಸಿದರು. ತಾಯಿ ಜಾನಕೀಬಾಯಿ. ತಂದೆ ಎಚ್.ಸಿ. ರಾಮರಾವ್. ಬೆಂಗಳೂರಿನಲ್ಲಿ ಬಿ.ಎ. ಪದವೀಧರರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವೀಧರರು. ಭಾರತೀಯ ದೂರವಾಣಿ ಕಾರ್ಖಾನೆಯಲ್ಲಿ ವೃತ್ತಿಯಲ್ಲಿದ್ದರು. ಭ್ರಮರ, ಮೂರು ಹೆಣ್ಣು ನೂರು ತೆರ, ಗಾಜಿನ ಮೆನ, ಅಪರಾಜಿತೆ, ಸಾವಿತ್ರಿ, ಪ್ರೇಮ ನಕ್ಷತ್ರ, ವಸಂತ ಚಂದ್ರ ಇತ್ಯಾದಿ ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಿದ ಕಾದಂಬರಿಗಳು. ವೀರೇಶಲಿಂಗಂ ಪಂತುಲು, ಪೋತನ, ಮೇಡಂ ಕ್ಯೂರಿ, ಚಂದ್ರಶೇಖರ ಆಜಾದ್‌, ಎಣ.ಆರ್‌. ಶ್ರೀ, ಜೀವನ ಮತ್ತು ಕಾರ್ಯ-ಜೀವನ ಚರಿತ್ರೆಗಳು, ಕನ್ನಡ ತಾಯಿಗೆ ನುಡಿನಮನಗಳು -ಇವು ಪ್ರಮುಖ ಕೃತಿಗಳು. ...

READ MORE

Related Books