ಚಿರಂಜೀವಿ ರೋಡಕರ್ ಅವರ ಕವನ ಸಂಕಲನ ಚಿರ ಕ್ರಾಂತಿ. ಚಿರಂಜೀವಿ ರೋಡಕರ್ ಅವರು ಈಗಿನ ಸಂಕೀರ್ಣ ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಅಧ:ಪತನದ ಈ ಕಾಲಘಟ್ಟದಲ್ಲಿ ಹೊರ ತರುತ್ತಿರುವ ಅವರ ಪ್ರಥಮ ಕವನ ಸಂಕಲನ “ಚಿರ ಕ್ರಾಂತಿ ” .ನಿಜವಾಗಿಯೂ ಹೆಸರಿಗೆ ತಕ್ಕಂತೆ ಕ್ರಾಂತಿಯ ಕವನಗಳೇ ಆಗಿವೆ. ಸಂಕ್ರಾಂತಿ ಕವಿತೆ ಹೊಸ ಬೆಳೆಗೆ ಸರಗ ಚೆಲ್ಲುವುದು ಗ್ರಾಮೀಣ ಭಾಗದ ರೈತರ ಜೀವನಾಡಿ ಹಬ್ಬವಾಗಿ ಮೂಡಿ ಬಂದಿದೆ. ಕವಿ ಕರೆಯುವ ಮಳೆರಾಯನ ಕರೆ ಸೊಗಸಾಗಿ ಮೂಡಿ ಮಳೆ ಬೆಳೆ ಇಲ್ಲದ ರೈತನ ಗೋಳು ದುಡಿಯುವ ಜನರಿಗೆ ಮಾತ್ರ ಗೊತ್ತು, ರೈತ ವಿರೋಧಿಗಳಿಗೆ ಏನು ಗೊತ್ತು? ಎಂದು ಪ್ರಶ್ನಿಸುತ್ತಾನೆ. ಮುಂದೆ ಸಾಗಿ ಸತ್ಯ ಮಿತ್ಯದ ಜೊತೆಗೆ ವೈಜ್ಞಾನಿಕ - ವೈಚಾರಿಕತೆಗೆ ಪೂರಕವಾಗಿ ಮೂಢನಂಬಿಕೆಗಳ ವಿರುದ್ಧ ಸಿಡಿದಿದ್ದು ಮಿತ್ಯಕ್ಕೆ ಸವಾಲು ಸತ್ಯವೆಂದು ಪ್ರತಿಪಾದಿಸುವ ಚಿರಂಜೀವಿ ರೋಡಕರ್ ಯಾವತ್ತೂ ಸತ್ಯ, ನ್ಯಾಯ, ಧರ್ಮ ಪರವಿದ್ದು, ಧರ್ಮ, ಜಾತಿ, ಲಿಂಗ, ಭಾಷೆ, ಬಟ್ಟೆ, ಊಟದ ಹೆಸರಲ್ಲಿ ನಡೆಯುವ ಎಲ್ಲಾ ಗುಪ್ತ ಅಜೆಂಡಾಗಳಿಗೆ ಉತ್ತರವಾಗುವ ದಿಕ್ಕಿನಲ್ಲಿ ಎತ್ತಿ ಬರೆಯುವ ಬರಹಗಾರನಾಗಿ ವೃತ್ತಿ - ಪೃವೃತ್ತಿಯಲ್ಲಿ ಸಮಾಜಮುಖಿಯಾಗಿ ಕವಿಯಾಗಿ ಹೊಡೆದೆಳುತ್ತಾನೆ. ಕರೋನ ಕಾಲದ ಸಂಕಟದಲ್ಲಿ ದುಡಿಯುವ ಬಡಜನರ ಭವಣೆಯನ್ನು ಕಣ್ಣಿಗೆ ಕಟ್ಟುವ ಹಾಗೆ ಚಿತ್ರಿಸಿದ್ದಾನೆ. ಈ ಯುವ ಕವಿಯ ಆಶಯಗಳಿಗೆ ಪೂರಕವಾಗಿ ಬದಲಾವಣೆ ಬಯಸುವ ಮನಸ್ಸುಗಳು ಸದಾ ಒಂದಾಗಿ ಇವರ ಬರಹಕ್ಕೆ ಇನ್ನಷ್ಟು ಇಂಬು ನೀಡಲೆಂದು ಆಶಿಸುತ್ತಾ “ಚಿರಕ್ರಾಂತಿ” ಕವಿತೆಗಳು ಸದಾ ಚಿರಾಯುವಾಗಲೆಂದು ಆಶಿಸುತ್ತೇನೆ ಎಂದು ದಾನಪ್ಪ ಸಿ. ನಿಲೋಗಲ್ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
ಚಿರಂಜೀವಿ ರೋಡಕರ್ ಅವರು ರಾಯಚೂರು ಜಿಲ್ಲೆಯ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ನಿರ್ದೇಶಕರು ಆಗಿದ್ದು ವೃತ್ತಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವನ ಸಂಕಲನ : ಚಿರ ಕ್ರಾಂತಿ ...
READ MORE