ನಿಮ್ಮೊಳಗೊಬ್ಬ ಜೀನಿಯಸ್

Author : ಟಿ. ಆರ್. ಅನಂತರಾಮು

Pages 208

₹ 120.00




Year of Publication: 2011
Published by: ಅರ್ಕಾವತಿ ಪ್ರಕಾಶನ
Address: 2, 91/1, 2ನೇ ಮುಖ್ಯರಸ್ತೆ, ವಿ.ಆರ್. ಬ್ಲಾಕ್, ಜಿ. ಆರ್. ನಗರ, ಬೆಂಗಳೂರು-560 040
Phone: 08023114062

Synopsys

`ನಿಮ್ಮೊಳಗೊಬ್ಬ ಜೀನಿಯಸ್’ ಹದಿನೈದು ವಿಜ್ಞಾನ ಪ್ರಬಂಧಗಳ ಸಂಕಲನ. ಸಾಮಾನ್ಯ ವಿಜ್ಞಾನಕ್ಕೆ ಸಂಬಂಧಿಸಿದ ಇಲ್ಲಿನ ಪ್ರಬಂಧಗಳು ಜನಪ್ರಿಯ ದಾಟಿಯಲ್ಲಿ ಬರೆದವು. ಒಂದೊಂದು ಲೇಖನವೂ ಭಿನ್ನ ಸ್ವರೂಪದಿಂದ ಓದುಗರಿಗೆ, ಅದರದೇ ಆದ ರೀತಿಯಲ್ಲಿ ಮನಮುಟ್ಟುತ್ತದೆ.

ನಿಮಗೆ ಗೊತ್ತೆ? ಸೌರಮಂಡಲದಲ್ಲಿ ಪಿಕ್‍ನಿಕ್‍ ಸ್ಪಾಟ್‍ಗಳಿವೆ, ನಿಮ್ಮೊಳಗೇ ಒಬ್ಬ ಮಹಾನ್ ಪ್ರತಿಭಾವಂತ ಅಡಗಿದ್ದಾನೆ, ನಮ್ಮ ಪ್ರವಾಸಿ ತಾಣಗಳು ಹೇಗಿದ್ದರೆ ಪ್ರವಾಸಿಗಳನ್ನು ಇನ್ನೂ ಹೆಚ್ಚು ಆಕರ್ಷಿಸಬಹುದು? ನಮ್ಮ ನಿತ್ಯ ಬದುಕಿನಲ್ಲೆ ಖನಿಜಗಳ ದೊಡ್ಡ ಪಾತ್ರವಿದೆ. ಪ್ಲಾಸ್ಟಿಕನ್ನು ಮುಕ್ತ ಮುಕ್ತ ಎಂದು ಹೇಳುವುದು ಯಾವಾಗ? ವಿಶ್ವರೂಪವನ್ನು ದರ್ಶನ ಮಾಡಿಸುವ ಇತ್ತೀಚಿನ ದೂರದರ್ಶಕಗಳು, ಜೊತೆ ಜೊತೆಗೇ ನೀವು ವಿಜ್ಞಾನ ಸಾಹಿತ್ಯ ರಚಿಸಬೇಕೆಂದರೆ, ಅದಕ್ಕೆ ಬೇಕಾಗುವ ಮಾನಸಿಕ ಸಿದ್ಧತೆ ಹೇಗಿರಬೇಕು? ಇವೆಲ್ಲವನ್ನೂ ಒಟ್ಟಿಗೇ ಕಟ್ಟಿಕೊಡುತ್ತದೆ ಈ ಕೃತಿ. ಇಲ್ಲಿಯ ಅನೇಕ ಲೇಖನಗಳಿಗೆ ಹೊಸ ಮಾಹಿತಿ ಸೇರಿಸಿದೆ. ಈ ಕ್ಷೇತ್ರಗಳಲ್ಲಿ ಆಸಕ್ತಿ ಇರುವವರಿಗೆ ಒಂದಷ್ಟು ಹೊಸ ಬಗೆಯ ಯೋಚನೆಗಳನ್ನು ಈ ಕೃತಿ ಹುಟ್ಟುಹಾಕುತ್ತದೆ.

 

About the Author

ಟಿ. ಆರ್. ಅನಂತರಾಮು
(03 August 1949)

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ...

READ MORE

Related Books