ಸೃಷ್ಟಿವಾದಿಗಳ ಮುಷ್ಟಿಯಲ್ಲಿ ಡಾರ್ವಿನ್

Author : ಟಿ. ಆರ್. ಅನಂತರಾಮು

Pages 114

₹ 75.00




Year of Publication: 2002
Published by: ಸಿ.ವಿ.ಜಿ. ಪಬ್ಲಿಕೇಸನ್ಸ್
Address: ನಂ. 70, 2ನೇ ಮುಖ್ಯರಸ್ತೆ, ಜಬ್ಬಾರ್ ಬ್ಲಾಕ್, ವೈಯಾಲಿಕಾವಲ್, ಬೆಂಗಳೂರು – 560 003
Phone: 08023313400

Synopsys

`ಸೃಷ್ಟಿವಾದಿಗಳ ಮುಷ್ಟಿಯಲ್ಲಿ ಡಾರ್ವಿನ್’ ಹನ್ನೊಂದು ವಿಜ್ಞಾನ ಲೇಖನಗಳ ಸಂಗ್ರಹ. ಇದರಲ್ಲಿ ಸಾಲಿಗ್ರಾಮದ ಕಥೆ ಇದೆ, ಭೂಮಿ ಜೀವಿಯನ್ನು ಕೊಡುವ ಮುನ್ನ ಇದ್ದ ಸ್ಥಿತಿಯ ಬಗ್ಗೆ ಅಪರೂಪದ ಒಳನೋಟವಿದೆ, ಸರಸ್ವತೀ ನದಿ ಕುರಿತು ಗುಪ್ತಗಾಮಿನಿಯೇ ಎಂಬ ಪ್ರಶ್ನೆಗೆ ಸೂಕ್ತ ಉತ್ತರವಿದೆ. ಕೋಳಿಫಾರಂನಲ್ಲಿ ಡೈನೋಸಾರ್, ಭೂಕಂಪನ, ಅಂತರಿಕ್ಷ ನಿಲ್ದಾಣ ಮುಂತಾದ ಲೇಖನಗಳು ಆಯಾ ಕ್ಷೇತ್ರದ ಬೆಳವಣಿಗೆಯನ್ನು ನಿಚ್ಚಳವಾಗಿ ಸೆರೆಹಿಡಿದಿವೆ.

ಕೃತಿಯ ಶೀರ್ಷಿಕೆಯ ಲೇಖನದಲ್ಲಿ ಡಾರ್ವಿನ್‍ನ ಜೀವಿವಿಕಾಸ ಕುರಿತ ಚಿಂತನೆಗಳಿವೆ. ಇತ್ತೀಚೆಗೆ, ವಿಶೇಷವಾಗಿ ಅಮೆರಿಕದಲ್ಲಿ ಹೇಗೆ ಆ ಸಿದ್ಧಾಂತ ವಿರೂಪಗೊಂಡು ಅಂತಿಮವಾಗಿ ಬೈಬಲ್‍ನಲ್ಲಿ ಹೇಳಿರುವ ಸೃಷ್ಟಿ ಕುರಿತ ವಿಚಾರಗಳೇ ಇಂದಿಗೂ ಪ್ರಸ್ತುತ ಎಂಬ ಒಂದು ವರ್ಗದ ಜನರ ನಂಬಿಕೆಗಳು ಹೇಗೆ ವಿಜ್ಞಾನವನ್ನು ತುಳಿಯುತ್ತಿದೆ ಎಂಬುದರ ಎಲ್ಲ ಮಗ್ಗುಲನ್ನೂ ಸೆರೆ ಹಿಡಿಯಲಾಗಿದೆ. ಆ ಮೂಲಕ ಡಾರ್ವಿನ್ ನ  ದೀರ್ಘ ಅಧ್ಯಯನಕ್ಕೆ ಎಂದೂ ವೈಜ್ಞಾನಿಕ ಮೌಲ್ಯವಿದೆ ಎಂದು ತೋರಿಸಲಾಗಿದೆ.

ಹಿಂದೂಗಳು ಸಾಲಿಗ್ರಾಮವನ್ನು ದೇವರ ಸ್ಥಾನದಲ್ಲಿಟ್ಟು ಪೂಜೆ ಮಾಡುತ್ತಾರೆ. ಇವು ಅಮೋನೈಟ್ ಎಂಬ ಜೀವಿಗಳ ಪಳೆಯುಳಿಕೆಗಳು ಎಂದು ವಿಜ್ಞಾನ ಸಾರುತ್ತದೆ. ನೇಪಾಳದ ಗಂಡಕಿ ನದಿ ಅಮೋನೈಟ್ ಇರುವ ಶಿಲೆಗಳ ಮೇಲೆ ಹರಿದು ಅವುಗಳನ್ನು ಬಿಡುಗಡೆ ಮಾಡಿ ಒಯ್ಯುತ್ತದೆ. ಸಾಲಿಗ್ರಾಮಗಳ ಎಲ್ಲ ವಿವರಗಳೂ ಓದುಗರಲ್ಲಿ ವಿಸ್ಮಯ ಉಂಟುಮಾಡುತ್ತದೆ.

About the Author

ಟಿ. ಆರ್. ಅನಂತರಾಮು
(03 August 1949)

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ...

READ MORE

Related Books