ವಿಜ್ಞಾನ

Author : ಎಚ್.ಆರ್. ರಾಮಕೃಷ್ಣರಾವ್

Pages 448

₹ 250.00




Year of Publication: 2012
Published by: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು
Address: ವಿಜ್ಞಾನ ಭವನ, ನಂ.24/2 , 21ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು-560070

Synopsys

1918-19ರಲ್ಲಿಯೇ ಕನ್ನಡದಲ್ಲಿ ವಿಜ್ಞಾನ ವಿದ್ಯಮಾನಗಳನ್ನು ಕುರಿತು ಪ್ರಕಟವಾಗುತ್ತಿದ್ದ ಪತ್ರಿಕೆ ’ವಿಜ್ಞಾನ’. ಅದರ ಸಂಪಾದಕರು ಬಿ.ವೆಂಕಟನಾರಾಣಪ್ಪ ಮತ್ತು ನಂಗಪುರಂ ವೆಂಕಟೇಶಯ್ಯಂಗಾರ್‍ಯರು . ವೈಜ್ಞಾನಿಕ ಪರಿಭಾಷೆಗಳು ಕನ್ನಡದಲ್ಲಿ ಬೆಳೆಯದ ಹೊತ್ತಿನಲ್ಲಿ ವಿಜ್ಞಾನಕ್ಕೇ ವಿಶೇಷವಾದ ಪತ್ರಿಕೆಯೊಂದನ್ನು ಅವರು ಹೊರತರುತ್ತಿದ್ದುದು ಸಾಹಸವೇ ಸರಿ. 

ಅಂತಹ ಸಾಹಸವನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ವಿಜ್ಞಾನ ಲೇಖಕರಾದ ಪ್ರೊ. ಎಚ್‌.ಆರ್‌. ರಾಮಕೃಷ್ಣರಾವ್‌ ಮತ್ತು ಟಿ.ಆರ್. ಅನಂತರಾಮು ಪತ್ರಿಕೆಗಳಲ್ಲಿ ಪ್ರಕಟವಾದ ಪ್ರಮುಖ ಲೇಖನಗಳನ್ನು ಈ ಕೃತಿಯಲ್ಲಿ ಸಂಗ್ರಹಿಸಿಕೊಟ್ಟಿದ್ದಾರೆ.

About the Author

ಎಚ್.ಆರ್. ರಾಮಕೃಷ್ಣರಾವ್
(30 May 1935)

ಪ್ರೊ. ಎಚ್.ಆರ್. ರಾಮಕೃಷ್ಣರಾವ್ ಅವರು ಕ್ರೈಸ್ಟ್ ಕಾಲೇಜಿನ ನಿವೃತ್ತ ಭೌತವಿಜ್ಞಾನ ಪ್ರಾಧ್ಯಾಪಕರು. ಉದಯಭಾನು ಉನ್ನತ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ಮತ್ತು ಬೆಂಗಳೂರು ವಿಜ್ಞಾನ ವೇದಿಕೆಯ ಖಜಾಂಚಿಯಾಗಿ ಕೆಲಸ ಮಾಡುತ್ತಿದ್ದಾರೆ. ಖಭೌತ ವಿಜ್ಞಾನ ಇವರ ಆಸಕ್ತ ವಿಷಯವಾಗಿದ್ದು  ತಮ್ಮಲ್ಲಿದ್ದ ದೂರದರ್ಶಕವನ್ನು ಕರ್ನಾಟಕದ ಹಳ್ಳಿ-ಹಳ್ಳಿಗಳಿಗೆ ಹೋಗಿ ಜನರಿಗೆ ಆಕಾಶ ವೀಕ್ಷಣೆ ಮಾಡಿಸಿ, ವೈಜ್ಞಾನಿಕ ಅರಿವನ್ನು ಮೂಡಿಸಿದ್ದಾರೆ.  ಸಂಕ್ಷಿಪ್ತ ಖಗೋಳ ವಿಜ್ಞಾನ ಚರಿತ್ರೆ, ಕಲಾಂ ಮೇಷ್ಟ್ರು, 20ನೇ ಶತಮಾನದ ಭೌತವಿಜ್ಞಾನ, ಒಲವಿನ ಶಿಲೆ ಅಯಸ್ಕಾಂತ, ಅಂತರಿಕ್ಷ, ಶುಕ್ರಸಂಕ್ರಮ, ಬಿಗ್ ಬ್ಯಾಂಗ್, ಪ್ರಳಯ 2012, ಮುಂತಾದವುಗಳು ಇವರ ಪ್ರಮುಖ ಕೃತಿಗಳು.  ...

READ MORE

Related Books