ಪ್ರಾಚೀನ ಭಾರತೀಯ ಹಣದ ರಹಸ್ಯಗಳು

Author : ಟೀನಾ ಶಶಿಕಾಂತ್

Pages 50

₹ 50.00




Year of Publication: 2011
Published by: ಸಾವಣ್ಣ ಎಂಟರ್ ಪ್ರೈಸಸ್
Address: ನಂ.57, 1ನೇ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿ ಬೆಂಗಳೂರು- 560004
Phone: 9036312786

Synopsys

‘ಪ್ರಾಚೀನ ಭಾರತೀಯ ಹಣದ ರಹಸ್ಯಗಳು’ ಲೇಖಕ ಸುರೇಶ್ ಪದ್ಮನಾಭನ್ ಅವರ ಕೃತಿಯನ್ನು ಲೇಖಕಿ, ಪತ್ರಕರ್ತೆ ಟೀನಾ ಶಶಿಕಾಂತ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಪುಸ್ತಕವು ಹಣದ ಬಗೆಗಿನ ಪ್ರಾಚೀನ ಭಾರತೀಯ ರಹಸ್ಯಗಳನ್ನು ಸಂಶೋಧಿಸುತ್ತದೆ. ಹತ್ತು ಸಾವಿರವರ್ಷಗಳಿಗೂ ಹೆಚ್ಚು ಪುರಾತನ ನಾಗರಿಕತೆ ಇದು. ಜೊತೆಗೆ, ಹಣದ ಉಳಿತಾಯಕ್ಕೆ ವಿಶೇಷ ಮಾಹಿತಿಗಳನ್ನು ಈ ಕೃತಿಯಲ್ಲಿ ಕಾಣಬಹುದು.

About the Author

ಟೀನಾ ಶಶಿಕಾಂತ್
(24 October 1978)

ಟೀನಾ ಹುಟ್ಟಿದ್ದು ಬೆಳೆದಿದ್ದು ಮತ್ತು ಓದಿದ್ದೆಲ್ಲಾ ಮಲೆನಾಡಿನ‌ ಸುಂದರ ಪರಿಸರದಲ್ಲಿ. ನಂತರ ಅವರ ಬದುಕು ಬಯಲು ಸೀಮೆಯತ್ತ ನಡೆದು ತುಮಕೂರು, ಮೈಸೂರು ಸುತ್ತಿ ಇದೀಗ ಬೆಂಗಳೂರಿನಲ್ಲಿ ನೆಲೆ ನಿಂತಿದೆ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ. ಓದಿದ ಟೀನಾ ಅಚಾನಕ್ಕಾಗಿ ಪತ್ರಿಕೆಗಳಲ್ಲಿ ಫ್ರೀಲಾನ್ಸ್ ಆಗಿ ಬರೆಯತೊಡಗಿ ಈಗ ಇಂಗ್ಲೀಷ್ ದಿನಪತ್ರಿಕೆಯಲ್ಲಿ ಪೂರ್ಣಾವಧಿ ಪತ್ರಕರ್ತರಾಗಿಬಿಟ್ಟಿದ್ದಾರೆ. ಆಪಾರ ಓದು ಮತ್ತು ಆಸಕ್ತಿಗಳಿರುವ ಇವರು ಬರೆದಿದ್ದು ಕಡಿಮೆಯೇ, ಆದರೆ ಮಾತಿಗೆ ಕುಳಿತಾಗ ಮಾತ್ರ ಮೂಗಿನ ಮೇಲೆ ಬೆರಳಿಡುವಂತೆ ಬೆರಗುಗೊಳಿಸಬಲ್ಲರು...ಆಳದ ಓದು, ಪತ್ರಿಕೋದ್ಯಮದ ಜೊತೆ ಜೊತೆಗೆ ಕಾವ್ಯದ ಒಡನಾಟವಿರುವ ಟೀನಾ ಚಂದದ ಕವಿತೆಗಳನ್ನೂ ಬರೆಯುತ್ತಾರೆ.  ...

READ MORE

Related Books