ನನ್ನ ಕೈಗಂಟಿದ ನೆತ್ತರು

Author : ಗಿರೀಶ್ ತಾಳಿಕಟ್ಟೆ (ಗಿರೀಶ್ ಎಂ.ಬಿ)

Pages 199

₹ 150.00




Year of Publication: 2017
Published by: ಲಂಕೇಶ್ ಪ್ರಕಾಶನ
Address: ಬಸವನಗುಡಿ, ಬೆಂಗಳೂರು

Synopsys

ಆಯೋಜಿತ ಎನ್‌ಕೌಂಟರ್‌ಗಳ ಪಾಪ ನಿವೇದನೆಯೇ ’ನನ್ನ ಕೈಗಂಟಿದ ನೆತ್ತರು’. ಸೈನ್ಯದ ಹಿರಿಯ ಅಧಿಕಾರಿಯೊಬ್ಬರು ಅನಾಮಧೇಯರಾಗಿ ಪತ್ರಕರ್ತರ ಮುಂದೆ ನಿವೇದಿಸಿಕೊಂಡ ತಪ್ಪೊಪ್ಪಿಗೆಯನ್ನು ಪತ್ರಕರ್ತ ಕಿಶಾಲಯ್ ಭಟ್ಟಾಚಾರ್ಜಿ ಅಕ್ಷರ ರೂಪಕ್ಕೆ ತಂದಿದ್ದರು. ಇದನ್ನು ಗಿರೀಶ್ ತಾಳಿಕಟ್ಟೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರಶಸ್ತಿಗಾಗಿ, ಭಡ್ತಿಗಾಗಿ ಸೈನಿಕರು ಮಾಡುವ ಕೊಲೆಗಳು, ಅಫೀಮು ಮಾರಾಟ ಮತ್ತು ಕಳ್ಳ ಸಾಗಣೆಯಿಂದ ಗಳಿಸುವ ಕೋಟಿ ಕೋಟಿ ಹಣ, ಅದನ್ನೆಲ್ಲ ಮುಚ್ಚಿ ಹಾಕುವ ಸಲುವಾಗಿ ವ್ಯವಸ್ಥೆಯ ದೌರ್ಬಲ್ಯಗಳನ್ನು ಬಳಸಿಕೊಳ್ಳುವ ಬಗೆ ಇವೆಲ್ಲವನ್ನು ಈ ಕೃತಿಯಲ್ಲಿ ಲೇಖಕರು ಬಿಚ್ಚಿಟ್ಟಿದ್ದಾರೆ. 

About the Author

ಗಿರೀಶ್ ತಾಳಿಕಟ್ಟೆ (ಗಿರೀಶ್ ಎಂ.ಬಿ)
(13 November 1984)

ಪತ್ರಕರ್ತ, ಬರಹಗಾರ ಗಿರೀಶ್ ತಾಳಿಕಟ್ಟೆ ಅವರು ಜನಿಸಿದ್ದು 1984 ನವೆಂಬರ್ 13ರಂದು. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ತಾಳಿಕಟ್ಟೆ ಕಾವಲು ಇವರ ಹುಟ್ಟೂರು. ಉದ್ಯೋಗ ಸ್ಫೂರ್ತಿ, ಜಾಬ್‌ನ್ಯೂಸ್, ಗೌರಿ ಲಂಕೇಶ್ ವಾರಪತ್ರಿಕೆ ಮೊದಲಾದ ಪತ್ರಿಕೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಇವರು ಪ್ರಸ್ತುತ, ಆರಕ್ಷಕ ಲಹರಿ ಮಾಸಪತ್ರಿಕೆಯ ಸಹ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗಾಗಿ ಹೊರತರುತ್ತಿದ್ದ ಗೈಡ್ ಮಾಸಿಕದ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಹವ್ಯಾಸ ಹಾಗೂ ಆಸಕ್ತಿಯಿಂದ ಇವರು ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಟರ್ನಿಂಗ್ ಪಾಯಿಂಟ್ (ವ್ಯಕ್ತಿ ವಿಕಸನ ಬರಹಗಳು), ಕಾಡುವ ಕತೆಗಳು, ನನ್ನ ಕೈಗಂಟಿದ ನೆತ್ತರು (ಅನುವಾದ), ಜೆನ್ ಕಥೆಗಳು, ...

READ MORE

Related Books