ಹೆರೊಡೊಟಸನ ಸಮರ ಕತೆಗಳು

Author : ವಿವಿಧ ಲೇಖಕರು

Pages 252

₹ 275.00




Published by: ಸೃಷ್ಟಿ ಪಬ್ಲಿಕೇಷನ್ಸ್‌
Address: ಸೃಷ್ಟಿ ಪಬ್ಲಿಕೇಷನ್ಸ್‌ ವಿಜಯನಗರ ಬೆಂಗಳೂರು 560 040
Phone: 9845096668

Synopsys

ಹೆರೊಡೊಟಸನ ಸಮರ ಕತೆಗಳು ಎಚ್‌.ವಿ.ರಂಗಾಚಾರ್‌ ಅವರ ಅನುವಾದಿತ ಕೃತಿಯಾಗಿದೆ. ಯುದ್ಧಗಳೆಂದರೆ ಕೊಳ್ಳೆ, ಸಾಮ್ರಾಜ್ಯ ವಿಸ್ತರಣೆ, ಪ್ರತಿಷ್ಠೆಯ ಶಿಲಾ ಶಾಸನ; ಆದರೆ ಇದೆಲ್ಲ ನೀರ ಮೇಲಿನ ಬೊಬ್ಬುಳಿ ಗುಳ್ಳೆ ಎಲ್ಲ ಆಶಾಶ್ವತ, 'ಕೊಡುವುದೇನು? ಕೊಂಬುದೇನು? ಒಲವು, ಸ್ನೇಹ, ಪ್ರೇಮ' ಎಂಬ ವರ ಕವಿ ಬೇಂದ್ರೆಯ ಮಾತಿನ ಹಿನ್ನೆಲೆಯಲ್ಲಿ ನಾವು ಹೆರೊಡೊಟಸನ ಸಮರ ಕತೆಗಳಿಂದ ಮೊದಲುಗೊಂಡು ಮಹರ್ಷಿ ಟಾಲ್ ಸ್ಟಾಯ್ ಅವರ 'ವಾರ್ ಅಂಡ್ ಪೀಸ್' ಹಾಗೂ ಇಂದಿನ ಸಮರೋದ್ಯೋಗದ ವಿದ್ಯಮಾನಗಳವರೆಗೆ ಮನುಷ್ಯ ಸಮಾಜದಲ್ಲಿ ಒಲವು, ಸ್ನೇಹ, ಪ್ರೇಮ, ಶೂನ್ಯಸ್ಥಿತಿಗೆ ಇಳಿಯುತ್ತಲೇ ಹೋಗುತ್ತಿದೆ. ಪ್ರಪಂಚದ ಅತಿ ಪ್ರಾಚೀನವಾದ ಈ ಸಮರ ಕತೆಗಳಲ್ಲೇ ಆ ಇಳಿಕೆಯ ಲಕ್ಷಣಗಳು ತೋರಿ ಬರುತ್ತಿವೆ. ಎಂದರೆ ಸೂಕ್ಷ್ಮ ಸಂವೇದನಾಶೀಲ ಮನಸ್ಸುಗಳಿಗೆ ದಿಗ್ನಮೆಯಿಡಿಯುತ್ತದೆಯಲ್ಲವೆ? ಇದಿಷ್ಟು ಹಿನ್ನೆಲೆಯಲ್ಲಿ ಹರೊಡೊಟಸನ ಸಮರಕತೆಗಳಲ್ಲಿ ಕಾಣಬಹುದು. 'ಹೆಣ್ಣು-ಹೊನ್ನು- ಮಣ್ಣಿ'ಗಾಗಿ ನಡೆದ ಮಹಾ ಯುದ್ಧ ಕಥೆಗಳನ್ನು ಹಲವಾರು ಯುದ್ಧವೀರರ ಬಾಯಿಂದ ನೇರವಾಗಿ ಕೇಳಿದವನು, ಹಲವಾರು ಯುದ್ಧಗಳಲ್ಲಿ ತಾನೂ ಭಾಗವಹಿಸಿದ ತಾಜಾ ಅನುಭವಗಳ ಕಣಜ ಅವನ ಸಮರ ಕಥೆಗಳು, ಗೀಸ್, ಪರ್ಸಿಯನ್ ಹಾಗೂ ಭೂಮಧ್ಯ ಸಾಗರ ದ್ವೀಪಾಂತರಗಳಲ್ಲಿ ಅಲೆದಾಡಿ ಅಲ್ಲಿ ತಾನು ಕಂಡು ಕೇಳಿದ ಜನರ ನಡೆ-ನುಡಿ, ಬಣ್ಣ-ಬೆಡಗು, ಶ್ರದ್ಧೆ, ಸಾಂಪ್ರದಾಯಗಳು ದೈವಾರಾಧನೆಗಳು ಇತ್ಯಾದಿ ಇಲ್ಲಿ ಕಣ್ಣಿಗೆ ಕಟ್ಟುತ್ತವೆ.

About the Author

ವಿವಿಧ ಲೇಖಕರು

. ...

READ MORE

Related Books