ತೆಲುಗು ಸಿನಿಮಾ ನಿರ್ದೇಶಕ ರಾಜಗೋಪಾಲ್ ವರ್ಮ ಅವರು ಬರೆದ ತಮ್ಮ ಆತ್ಮಕತೆ ‘ನನ್ನಿಷ್ಟ-ಸಿನಿಮಾ ಯಾನ’” ಕೃತಿಯನ್ನು ಲೇಖಕ ಸೃಜನ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಚಿತ್ರದ ಕಥೆಗಿಂತಲೂ ಚತ್ರದ ‘ಮೇಕಿಂಗ್‘ಗೆ ಮಹತ್ವ ನೀಡುವ ಆರ್ ಜಿ ವಿಗೆ ಕೆಮರಾ ನಿಜವಾದ ನಾಯಕ ಹಾಗೂ ಸೂತ್ರಧಾರ. ಅತಿಯವಾದ ನಿರೂಪಣಾ ಹಾಗೂ ಪ್ರಾತ್ರಪೋಷಣಾ ಶೈಲಿಯಲ್ಲಿ ಸಿನಿಮಾ ತೆಗೆಯುವ ನಿರ್ದೇಶಕ ರಾಮ್ ಗೋಪಾಲ್ ವರ್ಮ, ಎಲ್ಲ ವೃತ್ತಿಗಳಂತೆ ಪಾತಕಲೋಕವನ್ನೂ ತುಂಬಾ ವೃತ್ತಿಪರವಾಗಿಯೇ ತೋರಿಸುವುದನ್ನು ಗಮನಿಸಿದರೆ. ಆಧುನಿಕನ ಯಾವೊಂದು ಸಂವೇದನಾರಹಿತ ಸ್ಥಿತಿಯನ್ನು ಹೇಳ ಬಯಸುತ್ತಿದ್ದಾರೆ. ಅಪಾರ ಆತ್ಮವಿಶ್ವಾಸವುಳ್ಳ ಹುಡುಗನೊಬ್ಬನ ಕಾಲೇಜಿನ ದಿನಗಳು, ನಟಿ ಶ್ರೀದೇವಿ ಬಗೆಗಿನ ಹುಚ್ಚು ಅಭಿಮಾನ, ಸತ್ಯೇಂದ್ರನಂತಹ ಗೆಳೆಯನೊಬ್ಬನ ಮಿತಿಮೀರಿದ ಬುದ್ಧಿಮತ್ತೆ, ನಿರ್ದೇಶಕನೊಬ್ಬ ತನ್ನನ್ನು ಸಮಾಜವನ್ನು ಗ್ರಹಿಸಿಕೊಂಡಿರುವ ರೀತಿ, ಇಂಗ್ಲಿಷ್ ಅಹಂಕಾರ ಹಾಗೂ ಅವನ ಓದು, ಮದುವೆ, ಕುಟುಂಬ, ಸಂಬಂಧಗಳ ಕುರಿತ ಉದಾರ ಧೋರಣೆ ಎಲ್ಲವನ್ನೂಈ ಕೃತಿಯಲ್ಲಿ ಕಾಣಬಹುದು.
©2023 Book Brahma Private Limited.