ಸಾವರ್ಕರ್: ಹಿಂದುತ್ವದ ಜನಕನ ನಿಜಕತೆ

Author : ಬಿ.ಎಸ್. ಜಯಪ್ರಕಾಶ ನಾರಾಯಣ

Pages 480

₹ 380.00




Year of Publication: 2020
Published by: ವಸಂತ ಪ್ರಕಾಶನ
Address: ನಂ.360, 10ನೇ ಬಿ ಮುಖ್ಯರಸ್ತೆ, 3ನೇ ಬ್ಲಾಕ್, ಜಯನಗರ, ಬೆಂಗಳೂರು- 560011

Synopsys

‘ಸಾವರ್ಕರ್’ ಹಿಂದುತ್ವದ ಜನಕನ ನಿಜಕತೆ- ವೈಭವ್ ಪುರಂದರೆ ಅವರ ಇಂಗ್ಲಿಷ್ ಕೃತಿಯನ್ನು ಲೇಖಕ ಬಿ.ಎಸ್. ಜಯಪ್ರಕಾಶ ನಾರಾಯಣ ಅವರು ಕನ್ನಡೀಕರಿಸಿದ್ದಾರೆ. ಭಾರತದ ಇತಿಹಾಸದಲ್ಲಿ ಇರುವ ಸಾವಿರಾರು ಚಿತ್ತಾಕರ್ಷಕ ವ್ಯಕ್ತಿಗಳಲ್ಲಿ ನಾಯಕ ದಾಮೋದರ ಸಾವರ್ಕರ್ ಕೂಡ ಒಬ್ಬರು. ತಮ್ಮ ಬದುಕಿನ ಪೂರ್ವಾರ್ಧದಲ್ಲಿ ಹಿಂದೂ-ಮುಸ್ಲಿಂ ಐಕ್ಯತೆಯ ಪ್ರಬಲ ಪ್ರತಿಪಾದಕರಾಗಿದ್ದು, ಬಳಿಕ ಹಿಂದುತ್ವದ ಅಧ್ವರ್ಯುವಾದರು. ಸಾವರ್ಕರ್ ತಮ್ಮ ಮಾತೃಭಾಷೆಯಾದ ಮರಾಠಿಯಲ್ಲಿ ಎಂಟು ಸಂಪುಟಗಳನ್ನು ಅಗಾಧ ಸಾಹಿತ್ಯವನ್ನು ಸೃಷ್ಟಿಸಿದ್ದಾರೆ. ಆದರೆ ಸಾವರ್ಕರ್ ಅವರಿಗೆ ಸಂಬಂಧಿಸಿದಂತೆ ಬಂದಿರುವ ಈವರೆಗಿನ ಯಾವೊಂದು ಕೃತಿಯೂ ಈ ಸಾಹಿತ್ಯ ರಾಶಿಯನ್ನು ಗಮನಿಸಲಿಲ್ಲ. ಹೀಗೆ ಅಜ್ಞಾತವಾಗಿದ್ದ ಮರಾಠಿ ಪತ್ರಿಕೆಗಳು, ಸಾವರ್ಕರ್ ಅವರ ಅನೇಕ ಸಮಕಾಲೀನ ಬರಹಗಳು, ನ್ಯಾಯಾಲಯ ಮತ್ತು ಸರಕಾರಿ ದಾಖಲಾತಿಗಳು, ಧ್ವನಿಮುದ್ರಣಗಳು ಇತ್ಯಾದಿ ಕೂಲಂಕುಷವಾಗಿ ಅಧ್ಯಯನ ಮಾಡಿದ ವೈಭವ್ ಪುರಂದರೆ, ಸಾವರ್ಕರ್ ಜೀವನಚರಿತ್ರೆಯನ್ನು ರಚಿಸಿದ್ದಾರೆ. ಸಾವರ್ಕರ್ ಅವರಿಗೆ ಸಂಬಂಧಿಸಿದಂತೆ ಹೊಸ ಹೊಸ ಸಂಗತಿಗಳನ್ನು ಬೆಳಕಿಗೆ ತಂದಿರುವುದು ಈ ಕೃತಿಯ ಹೆಗ್ಗಳಿಕೆ. 

About the Author

ಬಿ.ಎಸ್. ಜಯಪ್ರಕಾಶ ನಾರಾಯಣ

ಪತ್ರಕರ್ತ ಬಿ.ಎಸ್. ಜಯಪ್ರಕಾಶ್‌ ನಾರಾಯಣ ಅವರು ಉತ್ತಮ ಅನುವಾದಕ ಕೂಡ. ಪ್ರಜಾವಾಣಿ, ವಿಜಯ ಕರ್ನಾಟಕ ಪತ್ರಿಕೆಗಳಲ್ಲಿ ಉಪಸಂಪಾದಕ/ ವರದಿಗಾರರಾಗಿ ಕಾರ್ಯ ನಿರ್ವಹಿಸಿರುವ ಅವರು ಸದ್ಯ ಅನುವಾದದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಟಿ.ಜೆ.ಎಸ್‌. ಜಾರ್ಜ್‌ ಅವರ ಎಂ.ಎಸ್., ಯು.ಆರ್‌. ಅನಂತಮೂರ್ತಿ ಅವರ ’ನನ್ನ ಸಾಹಿತ್ಯದ ಐದು ದಶಕಗಳು’, ’ನಾನು ಮಲಾಲ’ ಕೃತಿಗಳನ್ನು ಅನುವಾದಿಸಿದ್ದಾರೆ. ಛಾಯಾಗ್ರಾಹಕ ಕೆ.ಜಿ. ಸೋಮಶೇಖರ ಅವರ ಆತ್ಮಕತೆ ’ನನ್ನ ಬದುಕು ನನ್ನ ಫೋಟೊಗ್ರಫಿ’ ಕೃತಿಯನ್ನು ನಿರೂಪಿಸಿದ್ದಾರೆ. ...

READ MORE

Related Books