ವಿನಾಯಕ ಕೃಷ್ಣ ಗೋಕಾಕ

Author : ಮಾಧವ ಕುಲಕರ್ಣಿ

Pages 106

₹ 40.00
Year of Publication: 2009
Published by: ಸಾಹಿತ್ಯ ಅಕಾಡೆಮಿ
Address: ರವೀಂದ್ರ ಭವನ, 35, ಫಿರೋಜ್ ಶಹಾ ರಸ್ತೆ, ನವದೆಹಲಿ- 110001

Synopsys

‘ವಿನಾಯಕ ಕೃಷ್ಣ ಗೋಕಾಕ’ ಸುರೇಂದ್ರನಾಥ ಮಿಣಜಗಿ ಅವರ ಇಂಗ್ಲಿಷ್ ಕೃತಿಯನ್ನು ಲೇಖಕ ಮಾಧವ ಕುಲಕರ್ಣಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ವಿ.ಕೃ.ಗೋಕಾಕರ ಬದುಕು ಮತ್ತು ಬರಹಗಳ ಮೇಲೆ ಬೆಳಕು ಚೆಲ್ಲುವ ಕೃತಿ ಇದು. ಮೂಲ ಕೃತಿಯ ಲೇಖಕ ಸುರೇಂದ್ರನಾಥ ಮಿಣಜಗಿ ಅವರು ಗೋಕಾಕರ ಶಿಷ್ಯರೂ ಹೌದು. ಆಕ್ಸ್ ಫರ್ಡ್ ವಿದ್ವಾಂಸ: ಜೀವನ ಚರಿತ್ರೆಯ ರೂಪರೇಷೆ, ಕನಸುಗಾರ ಕವಿ: ಪ್ರಾರಂಭಿಕ ಕವನಗಳು, ಸಮನ್ವಯ ದೃಷ್ಟಿ, ಆಧುನಿಕತೆ ಅಥವ ನವ್ಯತೆಯ ಘಟ್ಟ: ನಂತರದ ಕವನಗಳು, ಮಹಾ ಸಾಧನೆ: ಭಾರತ ಸಿಂಧು ರಶ್ಮಿ ಮಹಾಕಾವ್ಯ, ಸಮರಸವೇ ಜೀವನ ಕಾದಂಬರಿ, ಮತ್ತು ಇತರ ಬರಹಗಳು ಹಾಗೂ ಗೋಕಾಕರ ಕೃತಿಗಳು ಎಂಬ 6 ಅಧ್ಯಾಯಗಳನ್ನು ಈ ಕೃತಿಯು ಒಳಗೊಂಡಿದೆ. 

About the Author

ಮಾಧವ ಕುಲಕರ್ಣಿ
(01 June 1946 - 26 March 2023)

ಲೇಖಕ, ವಿಮರ್ಶಕ ಮಾಧವ ಕುಲಕರ್ಣಿ ಅವರು ಈಗಿನ ಗದಗ ಜಿಲ್ಲೆ ಮತ್ತು ಆಗಿನ ಧಾರವಾಡ ಜಿಲ್ಲೆಯವರು. ಪ್ರಾಥಮಿಕ ಶಿಕ್ಷಣದಿಂದ ಎಸ್.ಎಸ್.ಎಲ್.ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಪೂರೈಸಿರುವ ಅವರು ಹೈಸ್ಕೂಲು ಶಿಕ್ಷಣವನ್ನು ವಿದ್ಯಾದಾನ ಸಮಿತಿ ಹೈಸ್ಕೂಲು ಗದಗದಲ್ಲಿ ಪೂರ್ಣಗೊಳಿಸಿದ್ದಾರೆ. ತಂದೆ ಎ.ವಿ. ಕುಲಕರ್ಣಿ ಗದುಗಿನ ಮುನ್ಸಿಪಲ್ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದರು. ಅಲ್ಲದೇ ಹೈಸ್ಕೂಲು ಶಿಕ್ಷಣದಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಕೆ.ಎಸ್.ಎಸ್. ಅಯ್ಯಂಗಾರ್ ಅವರ ಆಡಳಿತ ಕ್ರಮ ಮತ್ತು ಶಿಸ್ತು ನನ್ನ ಮೇಲೆ ಪ್ರಭಾವ ಬೀರಿದವು ಎನ್ನುತ್ತಾರೆ ಮಾಧವ ಕುಲಕರ್ಣಿ. ಗದುಗಿನ ಜೆ.ಟಿ. ಕಾಲೇಜಿನಿಂದ ಕಲಾ ವಿಭಾಗದಲ್ಲಿ ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ 1968ರಲ್ಲಿ ಸ್ನಾತಕೋತ್ತರ ...

READ MORE

Related Books