ವೋಡ್ಕಾ ವಿತ್ ವರ್ಮ

Author : ಸೃಜನ್ (ಪಿ. ಶ್ರೀಕಾಂತ್)

Pages 236

₹ 225.00




Year of Publication: 2014
Published by: ಅಭಿರುಚಿ ಪ್ರಕಾಶನ
Address: ನಂ. 386, 14ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಸರಸ್ವತಿಪುರ, ಮೈಸೂರು-9

Synopsys

ತೆಲುಗು ಸಿನಿಮಾ ನಿರ್ದೇಶಕ ರಾಜಗೋಪಾಲ್ ವರ್ಮ ಅವರ ಕುರಿತು ಲೇಖಕ ಸಿರಾಶ್ರೀ ಅವರು ತೆಲುಗು ಭಾಷೆಯಲ್ಲಿ ಬದುಕು- ಸಾಧನೆ ಕುರಿತು ಬರೆದ ಕೃತಿಯನ್ನು ಲೇಖಕ ಸೃಜನ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಲೇಖಕ ಸಿರಾಶ್ರೀ ಪ್ರಕಾರ R-rum G-gin V-vodka ಜೊತೆಯಾದರೆ ಅದು ಆರ್‌ಜಿವಿ ಎಕ್ಸೋಟಿಕ! ರಾಜಗೋಪಾಲ್ ವರ್ಮ ಅವರು ಸಿರಾಶ್ರೀಯವರು ಪುಸ್ತಕದಲ್ಲಿ ಪ್ರಧಾನ ನಾಯಕರಾಗಿ ಕಾಣುತ್ತಾರೆ. ಸಿರಾಶ್ರೀಯವರ ಕಣ್ಣಳತೆಗೆ ದಕ್ಕಿದ ನಿಗೂಢ ವ್ಯಕ್ತಿ ವರ್ಮರ ಅಂತರಂಗ ಬಹಿರಂಗ ಈ ಪುಸ್ತಕದ ತಿರುಳು. ತೆಲುಗಿನಿಂದ ಕನ್ನಡಕ್ಕೆ ರೂಪಾಂತರಿಸಿರುವ ಸೃಜನ್ ಅಮೂರ್ತವಾದ ಅನುಭವಗಳನ್ನು ಬಣ್ಣಗಳಲ್ಲಿ ಕಟ್ಟಿಕೊಡುವ ಬಹುದೊಡ್ಡ ಪ್ರತಿಭೆ. ಈಗಾಗಲೇ ರಾಮ್‌ಗೋಪಾಲ್‌ವರ್ಮರನ್ನು ‘ನನ್ನಿಷ್ಟ‘ ಕೃತಿಯ ಮುಖಾಂತರ ಕನ್ನಡಕ್ಕೆ ಕರೆತಂದಿರುವ ಅವರು, ಈ ಬಾರಿ ಸಿರಾಶ್ರೀಯವರ ‘ವೋಡ್ಕಾ ವಿತ್ ವರ್ಮ‘ ನಶೆಯನ್ನು ಹರಡುತ್ತಿದ್ದಾರೆ, ಲೇಖಕ ಸೃಜನ್ , ಭಾಷಾಂತರಕ್ಕೆ ಯಾವುದೇ ಧಕ್ಕೆಯಾಗದಂತೆ ಅನುವಾದಿಸಿದ್ದಾರೆ.

About the Author

ಸೃಜನ್ (ಪಿ. ಶ್ರೀಕಾಂತ್)

ಸೃಜನ್ ಎಂದೇ ಹೆಸರಾದ ಪಿ. ಶ್ರೀಕಾಂತ್ ಹುಟ್ಟಿದ್ದು ಆಂಧ್ರಪ್ರದೇಶದ ಕಡಪ ಜಿಲ್ಲೆಯ ಕಮಲಾಪುರಂನಲ್ಲಿ. ಓದಿದ್ದು ಕೊಪ್ಪಳ, ಸಂಡೂರು ಮತ್ತು ಬಳ್ಳಾರಿಯಲ್ಲಿ. ಬಿಇ ಸಿವಿಲ್ ಪದವೀಧರರಾದ ಸೃಜನ್ ಸುಮಾರು 15 ವರ್ಷಗಳ ಕಾಲ ಎಂಜಿನಿಯರ್ ಆಗಿ ಜಿಂದಾಲ್ ಉಕ್ಕಿನ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಎಳೆತನದಿಂದಲೂ ಕಲೆ,ಸಿನಿಮಾ ಮತ್ತು ಸಾಹಿತ್ಯದ ಕುರಿತು ಒಲವು. 1988ರಿಂದಲೂ ವ್ಯಂಗ್ಯಚಿತ್ರ ರಚನೆಯಲ್ಲಿ ತೊಡಗಿಸಿಕೊಂಡ ಇವರು, ಕಾಸರಗೋಡು,ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ಇವರ ವ್ಯಂಗ್ಯಚಿತ್ರಗಳ ಪ್ರದರ್ಶನ ಕಂಡಿವೆ. ಮುಂಬೈನ ’ಜಿಂದಾಲ್ ಆರ್ಟ ಫೌಂಡೇಶನ್’ ನಡೆಸಿದ ಕಲಾಸ್ಪರ್ಧೆಯಲ್ಲಿ ’ ಅಪನಾ ಆರ್ಟಿಸ್ಟ್’ ಪುರಸ್ಕಾರಕ್ಕೆ ಭಾಜನರಾದ ಸೃಜನ್ ಅವರ 18 ಕಲಾಕೃತಿಗಳಿಗೆ ಶಾಶ್ವತ ಡಿಸ್‌ಪ್ಲೆ ...

READ MORE

Related Books