ಖ್ಯಾತ ಲೇಖಕ ಹಾಗೂ ಅನುವಾದಕ ಬಿ.ಎಸ್. ಜಯಪ್ರಕಾಶ ನಾರಾಯಣ ಅವರ ಅನುವಾದಿತ ಕೃತಿ-ಸೊಗಸುಗಾರನ ಏಳು ಬೀಳು ವಿಜಯ ಮಲ್ಯ ವೃತ್ತಾಂತ. ಕೆ. ಗಿರಿಪ್ರಕಾಶ ಅವರು ಇಂಗ್ಲಿಷ್ ನಲ್ಲಿ ಬರೆದ ಕೃತಿ ಇದು. ವಿಜಯ ಮಲ್ಯ ಸೊಗಸುಗಾರ ಎಂಬುದಕ್ಕೆ ಅವರ ಜೀವನದಲ್ಲಿ ಸಾಕಷ್ಟು ವೃತ್ತಾಂತಗಳು ಇರಬಹುದಾದರೂ ಒಬ್ಬ ಉದ್ಯಮಿಯಾಗಿ ಯಶಸ್ವಿಯಾದ ವ್ಯಕ್ತಿತ್ವವೂ ಹೌದು. ಮಲ್ಯ ಕುಟುಂಬವು ಮೊದಲಿನಿಂದಲೂ ಉದ್ಯಮ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದೆ. ತಮ್ಮ ತಂದೆ ವಿಠಲ ಮಲ್ಯ ಅವರಿಂದ ಬಳುವಳಿಯಾಗಿ ಬಂದಿದ್ದ ಸಂಪತ್ತನ್ನು ಇವರು ಇಮ್ಮಡಿಸಿದರು. ಉದ್ಯಮ ಕ್ಷೇತ್ರದಲ್ಲಿ ವೈವಿಧ್ಯತೆಯನ್ನು ತಂದರು. ಆದರೆ, ನಿರ್ವಹಣೆಯ ಕಾರ್ಯ ಭಾರಕ್ಕೆ ನಲುಗಿ ಹೋದದ್ದೂ ಇದೆ. ಭಾರತ ಸರ್ಕಾರಕ್ಕೆ ಸಾಲಗಾರರಾಗಿಯೂ ಇದ್ದಾರೆ. ಸಂಪತ್ತಿನ ತುತ್ತ ತುದಿಗೇರಿದ್ದ ಈ ವ್ಯಕ್ತಿ ಭಾರತೀಯರ ಮುಂದೆ ಸಾರ್ವಜನಿಕ ದುಡ್ಡನ್ನು ದುರುಪಯೋಗ ಪಡಿಸಿಕೊಂಡ ಕುಖ್ಯಾತಿಗೂ ಒಳಗಾದರು. ಇಂತಹ ವ್ಯಕ್ತಿತ್ವವನ್ನು ಈ ಕೃತಿಯಲ್ಲಿ ಕಟ್ಟಿಕೊಡಲಾಗಿದೆ.
©2023 Book Brahma Private Limited.