ಗಾಂಧಿ ಮಹಾತ್ಮರಾದುದು

Author : ಜಿ.ಎನ್. ರಂಗನಾಥರಾವ್

Pages 408

₹ 300.00
Year of Publication: 2015
Published by: ವಸಂತ ಪ್ರಕಾಶನ
Address: # 360, 10 ನೇ ’ಬಿ’ ಮುಖ್ಯರಸ್ತೆ, 3 ನೇ ಬ್ಲಾಕ್ ಜಯನಗರ, ಬೆಂಗಳೂರು-560011
Phone: 08022443996

Synopsys

ಹಿರಿಯ ಲೇಖಕ ರಾಮಚಂದ್ರ ಗುಹ ಅವರು ಮೂಲ ಇಂಗ್ಲಿಷಿನಲ್ಲಿ ಬರೆದ ಕೃತಿಯನ್ನು(ಸಂಪುಟ-2) ಹಿರಿಯ ಲೇಖಕ ಜಿ.ಎನ್ ರಂಗನಾಥ್ ರಾವ್ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ ’ಗಾಂಧಿ ಮಹಾತ್ಮರಾದುದು’.  ಮೋಹನ್ ದಾಸ್ ಕರಮ್ ಚಂದ್ ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ಪದಾರ್ಪಣ ಮಾಡಿದ್ದು 1893 ರಲ್ಲಿ. ಆನಂತರ ಅಲ್ಲಿ ಅವರು ಕಳೆದ ಎರಡು ದಶಕಗಳು ಗಾಂಧಿಯವರ ಬದುಕಿನ ಗುರಿಗಮ್ಯತೆಗಳನ್ನು ರೂಪಿಸಿದ ಪರ್ವ ಕಾಲವಾಗಿದೆ. 1915 ರಲ್ಲಿ ಭಾರತಕ್ಕೆ ಹಿಂದಿರುಗುವುದಕ್ಕೆ ಮೊದಲು ಗಾಂಧಿಯವರ ಆದರ್ಶ, ವಿಚಾರಧಾರೆಗಳೆಲ್ಲ ಮೂಲಭೂತವಾಗಿ ಹರಳುಗಟ್ಟಿದ್ದು ದಕ್ಷಿಣ ಆಫ್ರಿಕಾದಲ್ಲೇ. ಸಾಮ್ರಾಜ್ಯಶಾಹಿ ಮತ್ತು ಜನಾಂಗೀಯ ಭೇದಭಾವಗಳು ಅವರಿಗೆ ಮನವರಿಕೆಯಾದದ್ದು ಇಲ್ಲೇ. ಬ್ರಿಟಿಷ್ ಸಾಮ್ರಾಜ್ಯವನ್ನು ನಿಕೃಷ್ಣಗೊಳಿಸುವ ಹಾಗೂ ಆಖೈರಾಗಿ ಅದನ್ನು ನಿರ್ನಾಮಗೊಳಿಸುವ ಅವರ ತತ್ತ್ವ ಸಿದ್ದಾಂತಗಳು, ಕಾರ್ಯತಂತ್ರಗಳು ರೂಪುಗೊಂಡಿದ್ದು ಈ ಅವಧಿಯಲ್ಲೇ ಎಂದು ಸಂಶೋಧನಾತ್ಮಕವಾಗಿ ಸಾಕ್ಷಾತ್ಕರಿಸುವ ರಾಮಚಂದ್ರ ಗುಹ ಅವರ ಈ ಗ್ರಂಥ, ನಾಲ್ಕು ಖಂಡಗಳ ಪತ್ರಾಗಾರಗಳಲ್ಲಿನ ಅಮೂಲ್ಯ ಸಾಕ್ಷ್ಯಾಧಾರಗಳಿಂದ ಪುಟಪುಟದಲ್ಲೂ ಓದುಗರ ಆಸಕ್ತಿಯನ್ನು ಕೆರಳಿಸುತ್ತದೆ. ತುಂಬಿ ತುಳುಕುವ ಸಿರಿಪ್ರದ ವಿವರಗಳಿಂದ ವಿಸ್ಮಯಗೊಳಿಸುತ್ತದೆ.

ಟಾಲ್ ಸ್ಟಾಯ್ ಅವರ ಜೀವನ ದರ್ಶನ, ಯೆಹೂದಿ ತೀವ್ರಗಾಮಿಗಳೊಡನೆ ಒಡನಾಟ, ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರೊಡನೆ ಸ್ನೇಹ- ಸಂವಾದಗಳು, ವೈರಿಗಳ ಆಕ್ರಮಣ- ಮೇಲಾಟಗಳು, ಗಂಡನಾಗಿ-ತಂದೆಯಾಗಿ ಕಂಡ ಏಳುಬೀಳುಗಳು, ಈ ಎಲ್ಲ ಕ್ರಿಯೆಪ್ರಕ್ರಿಯೆಗಳ ಅಗ್ನಿದಿವ್ಯದಲ್ಲಿ ಗಟ್ಟಿಗೊಳ್ಳುತ್ತ ಮಿಂಚುವ ಗಾಂಧಿಯವರ ವ್ಯಕ್ತಿತ್ವವನ್ನು ರಾಮಚಂದ್ರ ಗುಹ ಇಲ್ಲಿ ಸ್ಫಟಿಕ ಸದೃಶ್ಯವಾಗಿ ಕಡೆದಿರಿಸಿದ್ದಾರೆ. 

About the Author

ಜಿ.ಎನ್. ರಂಗನಾಥರಾವ್

ಹಿರಿಯ ಲೇಖಕ, ಪತ್ರಕರ್ತ ಜಿ.ಎನ್.ರಂಗನಾಥ ರಾವ್ ಹುಟ್ಟಿದ್ದು 1942 ರಲ್ಲಿ, ಬೆಂಗಳೂರು ಜಿಲ್ಲೆಯ ಹಾರೋಹಳ್ಳಿಯಲ್ಲಿ. ಹೊಸಕೋಟೆ ಹಾಗೂ ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಅವರು ಪ್ರಜಾವಾಣಿ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಅಲ್ಲದೆ ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಕಾರ್ಯ ನಿರ್ವಹಿಸಿದ್ದಾರೆ. ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ’ನವರಂಗ’ ಕಾವ್ಯನಾಮದಿಂದ ಕೂಡ ಬರವಣಿಗೆ ಮಾಡಿದ್ದಾರೆ. ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧಗಳನ್ನು ರಚಿಸಿರುವ ಅವರದು ತೂಕಬದ್ಧ ಸಾಹಿತ್ಯ ವಿಮರ್ಶೆ. ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿರುವ ಅವರು ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡು ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ...

READ MORE

Related Books