ಭಾರತದ ಸಂವಿಧಾನ ಶಿಲ್ಪಿ ಭಾರತರತ್ನ ಬಿ. ಆರ್. ಅಂಬೇಡ್ಕರ್ ಅವರ ಎಲ್ಲ ಬರೆಹಗಳು ಮತ್ತು ಭಾಷಣಗಳನ್ನು ಕನ್ನಡ ಭಾಷೆಗೆ ಅನುವಾದಿಸಿ ಪ್ರಕಟಿಸುವ ಯೋಜನೆಯ ಕೃತಿ ಇದಾಗಿದ್ದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿದೆ. ಅಂಬೇಡ್ಕರ್ ಅವರ ಭಾಷಣ ಹಾಗೂ ಲೇಖನಗಳಿದ್ದು ಶ್ರೀಯುತ ರಸೆಲ್ ಮತ್ತು ಸಾಮಾಜಿಕ ಪುನಾರಚನೆ ಕುರಿತು ಕೆ.ಆರ್. ವಿದ್ಯಾಧರ, ಸೀತಾರಾಮ ಸತ್ಯಪ್ರಕಾಶ, ಕೇಶವ ಮಳಗಿ, ಕೆ. ಪುಟ್ಟಸ್ವಾಮಿ ಅನುವಾದಿಸಿದ್ದಾರೆ.
`ಸಿದ್ಧಾರ್ಥ ಗೌತಮ - ಬೋಧಿಸತ್ವನು ಹೇಗೆ ಬುದ್ಧನಾದನು?, ಬುದ್ಧ ಮತ್ತು ಅವನ ವಿಷಾದ ಯೋಗ, ಪರಿವ್ರಾಜಕರ ಪರಿವರ್ತನೆ, ಮೇಲ್ವರ್ಗದವರ ಹಾಗೂ ಪೂಜ್ಯರ ಪರಿವರ್ತನೆ, ಮನೆಯ ಕರೆ, ಪರಿವರ್ತನೆ ಪ್ರಚಾರ - ಪುನರಾರಂ¨, ಕೆಳವರ್ಗದವರ ಹಾಗೂ ದೀನರ ಪರಿವರ್ತನೆ, ಸ್ತ್ರೀಯರ ಪರಿವರ್ತನೆ, ಪತಿತರ ಮತ್ತು ಅಪರಾಧಿಗಳ ಪರಿವರ್ತನೆ, ಬುದ್ಧ ಬೋಧಿಸಿದ್ದು ಏನು?’ ಹೀಗೆ ಹಲವಾರು ವಿಷಯಗಳ ಕುರಿತು ಈ ಕೃತಿ ಚರ್ಚಿಸುತ್ತದೆ.
©2025 Book Brahma Private Limited.