ಪದ್ಯದ ಮಾತು ಬೇರೆ

Author : ಕೆ.ವಿ. ಅಕ್ಷರ

Pages 80

₹ 30.00




Year of Publication: 2006
Published by: ದೇಶ ಕಾಲ ಪುಸ್ತಕ
Address: ವಿಕ್ಟೋರಿಯನ್‌ ವಿಲ್ಲಾ,ಅಲೆಕ್ಸಾಡ್ರ ಸ್ಟ್ರೀಟ್‌,ರಿಚ್‌ಮಂಡ್‌ ಟೌನ್‌ ಬೆಂಗಳೂರು- 560025
Phone: 9243196256

Synopsys

`ಪದ್ಯದ ಮಾತು ಬೇರೆ’ ಅಕ್ಷರ ಕೆ.ವಿ ಅವರ ಸಂಪಾದಕತ್ವದ ಕವನಸಂಕಲನವಾಗಿದೆ. ನಾನು ಕಾಗದಗಳಿಗೆ ಉತ್ತರ ಬರೆಯೋದಿಲ್ಲ. ಬರೆದರೂ ಪೋಸ್ಟ್ ಮಾಡುವುದಿಲ್ಲ. ಪೋಸ್ಟ್ ಮಾಡಿದರೂ ಎಷ್ಟೋ ಸಾರಿ ಅದು ಬರೆದವರಿಗೆ ಹೋಗಿ ಸೇರೋದಿಲ್ಲ. ಸೇರಿದರೂ ಅವರು ಅದನ್ನ ಪೂರ್ತಿ ಓದೋದಿಲ್ಲ, ಏನೇನೋ ಕೆಲಸ ಅವರಿಗೆ. ಹಾಗೆ ಓದಿದರೂ ನಾನು ಹೇಳಿದ್ದೊಂದು, ಅವರಿಗೆ ಅರ್ಥ ಆಗಿದ್ದೊಂದು. ಇದರಿಂದ ಮನಸ್ತಾಪ ಬೇರೆ. ನನಗೆ ಮಿಕ್ಕವರಿಂದ ಕಾಗದ ಬಂದಾಗಲೂ ಇದೇ ಗತಿ. ಅದಕ್ಕೇ ನಾನು ಕಾಗದಕ್ಕೆ ಉತ್ತರ ಬರೆಯೋದಿಲ್ಲ ಎನ್ನುತ್ತಾರೆ ಲೇಖಕ ಅಕ್ಷರ ಕೆ.ವಿ

About the Author

ಕೆ.ವಿ. ಅಕ್ಷರ

ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಿಂದ ರಂಗಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕೆ.ವಿ. ಅಕ್ಷರ ಅವರು ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಅಧ್ಯಾಪಕ. ಖ್ಯಾತ ರಂಗ ನಿರ್ದೇಶಕರಾಗಿರುವ ಅವರು ಸೃಜನಶೀಲ ಸಾಹಿತಿ, ನಾಟಕ, ಕವನ, ಪ್ರಬಂಧಗಳನ್ನು ರಚಿಸಿದ್ದಾರೆ.  ಸಹ್ಯಾದ್ರಿಕಾಂಡ, ಚೂರಿಕಟ್ಟೆ (ನಾಟಕಗಳು), ಹದಿಹರೆಯದ ಹಾಡುಗಳು (ಕವನ ಸಂಕಲನ), ರಂಗಪ್ರಪಂಚ, ರಂಗಪ್ರಯೋಗ, ರಂಗ ಅನ್ವೇಷಣೆ, ರಂಗಭೂಮಿ- ಪೂರ್ವ ಪಶ್ಚಿಮ (ರಂಗಕೃತಿ), ಮಾವಿನ ಮರದಲ್ಲಿ ಬಾಳೆಹಣ್ಣು (ವಿಮರ್ಶೆ). ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್ (2000) ಲಭಿಸಿದೆ. ...

READ MORE

Related Books