ನವ್ಯ ಸಾಹಿತ್ಯ : ಕನ್ನಡ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು

Author : ಎಸ್. ಆರ್. ವಿಜಯಶಂಕರ್Year of Publication: 2022
Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: ರಿಜಿಸ್ಟಾರ್, ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರು-560059
Phone: 80284831333

Synopsys

ನವ್ಯ ಸಾಹಿತ್ಯದ ಪ್ರಮುಖ ಲಕ್ಷಣಗಳಲ್ಲಿ ಜೀವನ ಮೌಲ್ಯಗಳು ಯಾವ ಸ್ವರೂಪದಲ್ಲಿರುತ್ತವೆ ಎಂಬ ವಿಚಾರವೂ ಮುಖ್ಯವಾಗುತ್ತದೆ ಎಂಬುದನ್ನು ಲೇಖಕ ಎಸ್. ವಿಜಯಶಂಕರ್ ಅವರ ‘ನವ್ಯ ಸಾಹಿತ್ಯ’ ಕೃತಿಯು ತಿಳಿಸುತ್ತದೆ. ನವ್ಯದ ಮುಖ್ಯ ಧ್ವನಿಗಳ ಭಾಗದಲ್ಲಿ ವಿ.ಕೃ. ಗೋಕಾಕ, ಅಡಿಗ, ಅನಂತಮೂರ್ತಿ, ಕಂಬಾರ, ಕಾರ್ನಾಡ, ಲಂಕೇಶ್, ಚಿತ್ತಾಲ, ತೇಜಸ್ವಿ, ಶಾಂತಿನಾಥ ದೇಸಾಯಿ, ರಾಮಚಂದ್ರ ಶರ್ಮ, ಕೆಎಸ್‌ನ, ರಾಮಾನುಜನ್, ತಿರುಮಲೇಶ್, ಚಂಪಾ ಸೇರಿದಂತೆ 18 ಪ್ರಸಿದ್ಧ ಲೇಖಕರ ಕೃತಿಗಳಲ್ಲಿನ ಜೀವನ ಮೌಲ್ಯಗಳು ಯಾವ ರೀತಿ ಅಭಿವ್ಯಕ್ತಿ ಪಡೆದಿವೆ ಎಂಬುದನ್ನು ವಿವರಿಸಲಾಗಿದೆ. ರಾಜಲಕ್ಷ್ಮಿ ಎನ್. ರಾವ್, ವೀಣಾ ಶಾಂತೇಶ್ವರ, ವೈದೇಹಿ, ವಿಜಯಾ ದಬ್ಬೆ ಮುಂತಾದ ಲೇಖಕಿಯರ ಕೃತಿಗಳಲ್ಲಿ ವ್ಯಕ್ತವಾಗಿರುವ ಜೀವನ ಮೌಲ್ಯಗಳನ್ನು ಸಮೀಕ್ಷೆ ಮಾಡಿರುವುದನ್ನು ಕಾಣಬಹುದು. ಕನ್ನಡದ ಸಾಂಸ್ಕೃತಿಕ ಸಂದರ್ಭದ ಅಗತ್ಯತೆಗೆ ಅನುಗುಣವಾಗಿ ಹುಟ್ಟಿಕೊಂಡ ನವ್ಯ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಹೇಗೆ ವ್ಯಕ್ತವಾಗಿವೆ ಎಂಬುದನ್ನು ಪಾಶ್ಚಾತ್ಯ ಮತ್ತು ಭಾರತೀಯ ಚಿಂತಕರ ಚಿಂತನೆಗಳ ಹಿನ್ನೆಲೆಯಲ್ಲಿ ತೌಲನಿಕವಾಗಿ ವಿವರಿಸಲಾಗಿದೆ. ಸಾಹಿತ್ಯದಲ್ಲಿ ಶ್ರೇಷ್ಠತೆ ಎಂಬ ಪರಿಕಲ್ಪನೆಯ ಬಗ್ಗೆ ನಡೆದ ಚರ್ಚೆಯನ್ನು ಅದರ ಎಲ್ಲಾ ಆಯಾಮಗಳೊಂದಿಗೆ ವಿವರಣೆಗೆ ಒಳಪಡಿಸಿರುವುದು ಓದುಗರಿಗೆ ಉಪಯುಕ್ತ ಮಾಹಿತಿಯಾಗಿದೆ. ಮುಕ್ತಾಯ ಎಂಬ ಕೊನೆಯ ಭಾಗದಲ್ಲಿ ಮತ್ತೆ ಜೀವನ ಮೌಲ್ಯಗಳ ಬಗ್ಗೆ ನೈತಿಕತೆಯ ಬಗ್ಗೆ ಪಾಶ್ಚಾತ್ಯ ಮತ್ತು ಭಾರತೀಯ ವಿದ್ವಾಂಸರಾದ ಎಂ. ಹಿರಿಯಣ್ಣ, ಡಿವಿಜಿ, ರಿಚರ್ಡ್ಸ್, ಲಿವೀಸ್, ಟ್ರಿಲಿಂಗ್, ಏಲಿಯಟ್, ಪಣಿಕ್ಕರ್ ಮುಂತಾದವರ ವಿಚಾರಗಳನ್ನು ಸಂಗ್ರಹಿಸಿ ಕೊಡಲಾಗಿದೆ.

About the Author

ಎಸ್. ಆರ್. ವಿಜಯಶಂಕರ್

ಎಸ್. ಆರ್. ವಿಜಯಶಂಕರ್ ಒಬ್ಬ ವಿಮರ್ಶಕರು. ಬೆಂಗಳೂರಿನಲ್ಲಿ ವಾಸವಿರುವ ಅವರು, ಸಾಹಿತ್ಯ , ಸಂಸ್ಕೃತಿ,  ವಿಮರ್ಶಾ ಬರಹಗಳಿಂದ ಕನ್ನಡ ಓದುಗರಿಗೆ ಪರಿಚಿತರಾಗಿದ್ದಾರೆ.  ಇಂಟೆಲ್ ಟೆಕ್ನಾಲಜಿ ಯಲ್ಲಿ ದಕ್ಷಿಣ ಏಷ್ಯಾದ  ಸಂವಹನ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು, ಜನಪ್ರಿಯ ನಿಯತಕಾಲಿಕೆಗಳಲ್ಲಿ ಲೇಖನಗಳನ್ನೂ ಅಂಕಣಗಳನ್ನೂ ಬರೆಯುತ್ತಾ ಬಂದಿದ್ದಾರೆ. ಇತ್ತೀಚೆಗೆ ಅವರು ತಮ್ಮ ಹೆಚಿನ ಬರಹಗಳನ್ನು ಸಾಹಿತ್ಯಿಕ ಕಿರುಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದಾರೆ.  ಹಿಂದಿನ ಕೃತಿಗಳ ಮರು ಓದುಗರಿಗೆ ಗಮನ ಕೊಡುತ್ತಿರುವ ವಿಜಯ ಶಂಕರ್, ಕವಿ ಗೋಪಾಲಕೃಷ್ಣ ಅಡಿಗರ  ಮರು ಓದಿನ 'ಪ್ರತಿಮಾ ಲೋಕ', ಕೃತಿಯನ್ನು ಸಂಪಾದಿಸಿದ್ದಾರೆ. ...

READ MORE

Related Books