ಜಿ.ಎನ್.ಉಪಾಧ್ಯ ಅವರ ಮಿತ್ರಾವಳಿ ಕೃತಿಯು ಕಳೆದ ನಾಲ್ಕು ದಶಕಗಳಿಂದ ಕತೆ, ಕಾದಂಬರಿ ಕ್ಷೇತ್ರದಲ್ಲಿ ಗುರುತಿಸುತ್ತಾ ಬಂದಿರುವ ಮಿತ್ರಾ ವೆಂಕಟ್ರಾಜ್ ಅವರ ಸಮಗ್ರ ಸಾಹಿತ್ಯ ದರ್ಶನವಾಗಿದೆ. ವ್ಯಾಸರಾಯ ಬಲ್ಲಾಳ, ಯಶವಂತ ಚಿತ್ತಾಲ, ಪ್ರೊ.ಟಿ.ಪಿ.ಅಶೋಕ, ಪ್ರೊ.ಮಾಧವ ಕುಲಕರ್ಣಿ, ರಾಮಚಂದ್ರ ದೇವ, ಜಿ.ಎಸ್.ಅಮೂರ, ಗಿರಡ್ಡಿ ಗೋವಿಂದ ರಾಜ, ವ್ಯಾಸರಾವ್ ನಿಂಜೂರ್, ತುಳಸಿ ವೇಣುಗೋಪಾಲ್, ಮುರಳೀಧರ ಉಪಾಧ್ಯ ಹಿರಿಯಡ್ಕ, ನಾ.ಮೊಗಸಾಲೆ, ಸುನೀತಾ ಎಂ.ಶೆಟ್ಟಿ, ಮೊದಲಾದವರು ಮಿತ್ರಾ ಅವರ ಸಾಹಿತ್ಯವನ್ನು ಬೇರೆ ಬೇರೆ ನೆಲೆಗಳಲ್ಲಿ ವಿಶ್ಲೇಶಿಸಿದ್ದಾರೆ. ಅಂತಹ ಸುಮಾರು 50ಕ್ಕೂ ಹೆಚ್ಚು ಬರಹಗಳು ಈ ಕೃತಿಯಲ್ಲಿವೆ.
©2023 Book Brahma Private Limited.