ರಸಋಷಿ ಕುವೆಂಪು ಸಂಪುಟ-5

Author : ಎಸ್.ವಿ. ಪರಮೇಶ್ವರಭಟ್ಟ

Pages 474

₹ 390.00




Year of Publication: 2001
Published by: ಪ್ರಸಾರಾಂಗ
Address: ಮೈಸೂರು ವಿಶ್ವವಿದ್ಯಾಲಯ

Synopsys

'ರಸಋಷಿ ಕುವೆಂಪು' - ಇದು ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಅವರ ಒಟ್ಟು ಐದು ಸಂಪುಟಗಳ ಕೃತಿಯಾಗಿದೆ. ಈ ಸಂಪುಟದ ಪ್ರಕಟಣೆಯಿಂದಾಗಿ ಕುವೆಂಪು ಸಾಹಿತ್ಯಾಸಕ್ತರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಶ್ರೀಸಾಮಾನ್ಯರಿಗೆ ರಾಷ್ಟ್ರಕವಿ ಕುವೆಂಪುರವರ ಕೃತಿಗಳ ಸಮಗ್ರ ಪರಿಚಯ, ಸಹೃದಯ ವಿಮರ್ಶೆ ಲಭಿಸಿದಂತಾಗುತ್ತದೆ. ಈ ಸಂಪುಟ ಅಚ್ಚಿನಮನೆಯಲ್ಲಿದ್ದಾಗಲೇ ಪ್ರೊ. ಪರಮೇಶ್ವರ ಭಟ್ಟರು ನಿಧನರಾದುದು ವಿಷಾದದ ಸಂಗತಿ, ಪ್ರೊ. ಪರಮೇಶ್ವರ ಭಟ್ಟ ಅವರು ಮೈಸೂರು. ವಿಶ್ವವಿದ್ಯಾನಿಲಯದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿ ಯುಜಿಸಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಶ್ರೀ ಕುವೆಂಪುರವರ ಸಮಗ್ರ ಸಾಹಿತ್ಯ ಕುರಿತು ಅಧ್ಯಯನ ಮಾಡಿದ್ದರು. ಈ ಮಾಲೆಯ ಐದು ಸಂಪುಟಗಳು ಅವರ ಆಳವಾದ ಚಿಂತನೆಯಿಂದ ಕೂಡಿದ ವಸ್ತುನಿಷ್ಟ ಅಧ್ಯಯನವನ್ನು ಹೇಳುತ್ತವೆ. ಇದನ್ನು ಶ್ರೀ ಕುವೆಂಪು ಅವರೂ ಪರಿಶೀಲಿಸಿ, ಅವರ ಸೂಚನೆಗಳಿಗೆ ಅನುಗುಣವಾಗಿ ಸಂಕ್ಷಿಪ್ತಗೊಳಿಸಲಾಗಿದೆ ಎಂಬುದೂ ಗಮನಾರ್ಹ ಅಂಶವಾಗಿದೆ. ಪ್ರೊ. ಭಟ್ಟ ಅವರು ಕುವೆಂಪುರವರ ಸಾಹಿತ್ಯದ ಸಕಲ ಪ್ರಕಾರಗಳನ್ನು ವ್ಯಾಪಕವಾಗಿ, ತಲಸ್ಪರ್ಶಿಯಾಗಿ ಅಧ್ಯಯನ ಮಾಡಿರುವರು; ಸಹಜ ಕವಿಹೃದಯದಿಂದ ಸಾಹಿತ್ಯದ ಎಲ್ಲ ಮಗ್ಗುಲುಗಳನ್ನು ಪರಿಶೀಲಿಸಿದ್ದಾರೆ; ವಿಮರ್ಶಿಸಿದ್ದಾರೆ. ಈ ಮಾಲೆ ಅವರ ಅನೇಕ ವರ್ಷಗಳ ದೀರ್ಘ ಮಂಥನದ, ವ್ಯಾಸಂಗದ 'ಗುರುಕಾಣಿಕೆ'ಯೆಂದೂ ಭಾವಿಸಬಹುದಾಗಿದೆ. ಮೊದಲನೆಯ ಸಂಪುಟದಲ್ಲಿ ಕುವೆಂಪು ಅವರ ಕಾವ್ಯದ ವಿವಿಧ ಮುಖಗಳನ್ನು ಪರಿಶೀಲಿಸಲಾಗಿದೆ. ಪ್ರಕೃತಿ ಗೀತೆಗಳು: ದೃಷ್ಟಿ ಮತ್ತು ವಿಕಾಸ: ಶ್ರೀ ಕುವೆಂಪು ಅವರ ಸೂದ್ಯೋದಯ ಗೀತೆಗಳು; ಪ್ರೇಮಗೀತೆಗಳು; ಕ್ರಾಂತಿ ಕವನಗಳು: ಅನುಭಾವ ಕವನಗಳು; ಸ್ವಾತಂತ್ರೋದಯ ಕವನಗಳು; ವಚನ ಕವನಗಳು; ಕುವೆಂಪು ಅವರ ಶಿಶುಗೀತಗಳು; ಅಮಲನ ಕಥೆ; ಪ್ರಾಯಶ್ಚಿತ-ಮಹಾದರ್ಶನ; ಬೊಮ್ಮನಹಳ್ಳಿಯ ಕಿಂದರಿಜೋಗಿ; ಕಥನಕವನಗಳು; ಮತ್ತು ಚಿತ್ರಾಂಗದಾ'' ಖಂಡಕಾವ್ಯ - ಈ ರೀತಿಯ ವಿಭಾಗಗಳಲ್ಲಿ ಕುವೆಂಪುರವರ ಕಾವ್ಯಾಧ್ಯಯನ ನಡೆದಿದೆ. ಅವರ ಪ್ರತಿಭೆಯು ಕವಿತೆ, ಕಥನಕಾವ್ಯ, ಖಂಡಕಾವ್ಯ ಇವೇ ಮೊದಲಾದುವುಗಳಲ್ಲಿ ಹೇಗೆ ಹರಿದಿದೆ ಎಂಬುದರ ಜೊತೆಗೆ ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ, ಅನಿಕೇತನಪ್ರಜ್ಞೆ ಪ್ರಕೃತಿಯ ಸೌಂದರ್ಯದರ್ಶನದಲ್ಲಿ ಅವರಿಗಿದ್ದ ಕುತೂಹಲ ಇವೇ ಮೊದಲಾದ ಅಂಶಗಳು ಪ್ರತಿಪಾದಿತವಾಗಿವೆ.

About the Author

ಎಸ್.ವಿ. ಪರಮೇಶ್ವರಭಟ್ಟ
(18 February 1914)

ಶೃಂಗೇರಿ ವಿದ್ಯಾರಣ್ಯಪುರ ಪರಮೇಶ್ವರ ಭಟ್ಟರು 18-02-1914 ರಂದು ತೀರ್ಥಹಳ್ಳಿಯಲ್ಲಿ ಜನಿಸಿದರು. ತಂದೆ ಸದಾಶಿವರಾಯರು ತೀರ್ಥಹಳ್ಳಿಯ ಸಮೀಪದ ಮಾಳೋರಿನಲ್ಲಿ ಶಾಲಾ ಉಪಾಧ್ಯಾಯರಾಗಿದ್ದರು. ಸದಾಶಿವರಾಯರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ರಾಯರಿಗೆ ತಂದೂರಿಗೆ ವರ್ಗವಾದಾಗ ಪರಮೇಶ್ವರರಿಗೆ ಖಾಸಗಿಯಾಗಿ ಪಾಠ ಹೇಳಿ, ಲೋವರ್ ಸೆಕೆಂಡರಿ ಪರೀಕ್ಷೆ ಕಟ್ಟಿಸಿದರು. ತಂದೆಯವರು ಪರಮೇಶ್ವರ ಭಟ್ಟರಿಗೆ ಹಲವಾರು ಪುಸ್ತಕಗಳನ್ನು ಓದಲು ತಂದುಕೊಡುತ್ತಿದ್ದರು. ತಂದೆಯವರಿಗೆ ಯಕ್ಷಗಾನ, ನಾಟಕಗಳಲ್ಲಿ ಆಸಕ್ತಿ, ಹವ್ಯಾಸಗಳಿದ್ದುದರಿಂದ ಮಗನನ್ನು ಬಯಲಾಟಗಳಿಗೆ ಕರೆದುಕೊಂಡು ಹೋಗುತ್ತಿದ್ದರಷ್ಟೇ ಅಲ್ಲದೇ, ಅವನಿಗೂ ಕಾಲಿಗೆ ಗೆಜ್ಜೆ ಕಟ್ಟಿ ಮುಖಕ್ಕೆ ಬಣ್ಣ ಹಚ್ಚಿ ರಂಗ ಪ್ರವೇಶ ಮಾಡಿಸಿ, ಕುಣಿಸಿ ನೋಡಿ ಆನಂದ ಪಡುತ್ತಿದ್ದರು. ಅವನ ...

READ MORE

Related Books