ಭಾರತದ ಸಂವಿಧಾನ ಶಿಲ್ಪಿ ಭಾರತರತ್ನ ಬಿ. ಆರ್. ಅಂಬೇಡ್ಕರ್ ಅವರ ಎಲ್ಲ ಬರೆಹಗಳು ಮತ್ತು ಭಾಷಣಗಳನ್ನು ಕನ್ನಡ ಭಾಷೆಗೆ ಅನುವಾದಿಸಿ ಪ್ರಕಟಿಸುವ ಯೋಜನೆಯ ಕೃತಿ ಇದಾಗಿದ್ದು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿದೆ. ಅಂಬೇಡ್ಕರ್ ಅವರ ಭಾಷಣ ಹಾಗೂ ಲೇಖನಗಳಿದ್ದು ಶ್ರೀಯುತ ರಸೆಲ್ ಮತ್ತು ಸಾಮಾಜಿಕ ಪುನಾರಚನೆ ಕುರಿತು ಕೆ.ಆರ್. ವಿದ್ಯಾಧರ, ಸೀತಾರಾಮ ಸತ್ಯಪ್ರಕಾಶ, ಕೇಶವ ಮಳಗಿ, ಕೆ. ಪುಟ್ಟಸ್ವಾಮಿ ಅನುವಾದಿಸಿದ್ದಾರೆ.
ಒಂದು ಸೋಜಿಗದ ಸಂಗತಿ, ಒಂದು ಹೇಯ ಪ್ರದರ್ಶನ, ಒಂದು ಕೀಳು ವ್ಯವಹಾರ, ಅಸ್ಪೃಶ್ಯರು ಏನು ಹೇಳುತ್ತಾರೆ?, ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು? ಕುರಿತಾದ ಅಧ್ಯಾಯಗಳಿವೆ. ಅಂಬೇಡ್ಕರ್ ಅವರ ಬರವಣಿಗೆ ಮತ್ತು ಭಾಷಣಗಳಲ್ಲಿ ಅಭಿವ್ಯಕ್ತಗೊಂಡಿರುವ ವಿಚಾರಗಳು ಭಾರತದ ಸಾಮಾಜಿಕ ವಿಚಾರದ ಇತಿಹಾಸ ಮತ್ತು ಬೆಳವಣಿಗೆಯನ್ನು ನಿರೂಪಿಸುವ ನಿಟ್ಟಿನಲ್ಲಿ ಈ ಕೃತಿ ಅತ್ಯಂತ ಮಹತ್ವದ್ದು.
©2023 Book Brahma Private Limited.