ಹಿರಿಯ ಸಾಹಿತಿ ದೇವುಡು ಅವರ ಸಮಗ್ರ ಲೇಖನಗಳ ಮಹಾಸಂಪುಟ-ದೇವುಡು ಲೋಕಕಥನ. ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಕೃತಿಯ ಸಂಪಾದಕರು. ದೇವುಡು ಎಂದೇ ಖ್ಯಾತಿಯ ದೇವುಡು ನರಸಿಂಹಶಾಸ್ತ್ರಿ ಅವರು ಐತಿಹಾಸಿಕ ಪೌರಾಣಿಕ ಹಾಗೂ ಸಾಮಾಜಿಕ ಕಾದಂಬರಿಗಳನ್ನು, ಕಥೆಗಳನ್ನು, ಮಕ್ಕಳ ಕೃತಿಗಳು, ನಾಟಕಗಳು, ಪ್ರಾಚೀನ ಕಾವ್ಯಗಳ ಸಂಗ್ರಹ, ಅನುವಾದ ಕೃತಿಗಳು ಹೀಗೆ ವೈವಿಧ್ಯಮಯ ವಲಯಗಳಲ್ಲಿ ಬರೆದಿದ್ದು, ಅವರ ಮಹಾಕ್ಷತ್ರೀಯ ಕಾದಂಬರಿಗೆ ಕೇಂದ್ರ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಇಂತಹ ಮಹನೀಯರ ಲೇಖನಗಳನ್ನು ಸಂಪಾದಿಸಿದ್ದ ಹೆಚ್ಚುಗಾರಿಕೆ ಈ ಕೃತಿಯದ್ದು.
©2025 Book Brahma Private Limited.