ತ್ರಿವೇಣಿಗೆ ಮಿಡಿದ ಶಂಕರ್

Author : ಕಗ್ಗೆರೆ ಪ್ರಕಾಶ್

Pages 336

₹ 200.00
Year of Publication: 2007
Published by: ದಾಮಿನಿ ಸಾಹಿತ್ಯ

Synopsys

ಲೇಖಕ ಕಗ್ಗೆರೆ ಪ್ರಕಾಶ್ ಹೊರತಂದಿರುವ ಕೃತಿ ತ್ರಿವೇಣಿಗೆ ಮಿಡಿದ ಶಂಕರ್. ಈ ಸಂಕಲನದಲ್ಲಿ ತ್ರಿವೇಣಿಯವರ ಕೆಲವು ಕಾದಂಬರಿಗಳನ್ನು ನಾಟಕ ರೂಪಾಂತರ ಮಾಡಲಾಗಿದೆ. ತ್ರಿವೇಣಿಯವರು ತೀರಿಕೊಂಡಾಗ ಬಂದ ಅಭಿಮಾನಿಗಳ ಪತ್ರಗಳಲ್ಲಿ ಕೆಲವನ್ನು ಪ್ರಕಟಿಸಲಾಗಿದೆ.ಕೃತಿಯ ಪರಿವಿಡಿಯಲ್ಲಿ ಮೊದಲ ಹೆಜ್ಜೆ, ಸೋತು ಗೆದ್ದವಳು, ದೂರದ ಬೆಟ್ಟ, ಬಾನು ಬೆಳಗಿತು, ಜೊತೆಗೆ ತ್ರಿವೇಣಿಗೆ ಮಿಡಿದಹೃದಯಗಳು ಎಂಬ ಶೀರ್ಷಿಕೆಗಳಿವೆ.

About the Author

ಕಗ್ಗೆರೆ ಪ್ರಕಾಶ್
(01 June 1971)

ಕಗ್ಗೆರೆ ಪ್ರಕಾಶ್ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕಗ್ಗೆರೆ ಗ್ರಾಮದವರು. 1971 ಜೂನ್ 1 ರಂದು ಜನನ. ತಂದೆ ಕೆ.ಸಿ.ಚೆನ್ನಾಚಾರ್, ತಾಯಿ ಅಮ್ಮಯಮ್ಮ. ತಮ್ಮ ಹೆಸರಿನ ಮುಂದೆ ಹುಟ್ಟೂರನ್ನು ಸೇರಿಸಿಕೊಂಡು ಕನ್ನಡ ಸಾರಸ್ವತ ಲೋಕದಲ್ಲಿ ‘ಕಗ್ಗೆರೆ ಪ್ರಕಾಶ್’ ಎಂದೇ ಚಿರಪರಿಚಿತರು. ಬಂಡಾಯ ಸಾಹಿತ್ಯ ಸಂಘಟನೆ ಮೂಲಕ ಗುರುತಿಸಿಕೊಂಡವರು. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಡಿಪ್ಲೊಮಾ ಪದವೀಧರರು. 1994 ರಿಂದ ಹೊಸ ದಿಗಂತ, ಆಂದೋಲನ, ಪ್ರಜಾಮತ, ಕರ್ನಾಟಕ ನ್ಯೂಸ್ ನೆಟ್, ವಿಕ್ರಾಂತ ಕರ್ನಾಟಕ, ಹಾಯ್ ಬೆಂಗಳೂರು, ಚಿತ್ತಾರ, ಕರ್ನಾಟಕ ಟೀವಿ ಲೋಕ, ಕನ್ನಡಪ್ರಭ ಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ದುಡಿದವರು. ಇವರ ಕಾವ್ಯ-ಕಥೆ, ಚಿಂತನೆಗಳು ಆಕಾಶವಾಣಿ, ಕಿರುತೆರೆಗಳಲ್ಲೂ ಬಿತ್ತರಗೊಂಡಿವೆ. ಬೆಂಗಳೂರಿನಲ್ಲಿ ...

READ MORE

Related Books