ಭಗತ್ ಸಿಂಗ್

Author : ಎ. ಜ್ಯೋತಿ

Pages 120

₹ 110.00
Year of Publication: 2021
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರ ಪಾರ್ಕ್ (ಪೂರ್ವ), ಬೆಂಗಳೂರು-560001,
Phone: 08022161900,

Synopsys

ಸ್ವಾತಂತ್ಯ್ರ ಹೋರಾಟಗಾರ ಭಗತ್ ಸಿಂಗ್ ಅವರು ಮಾಡಿದ ಆಯ್ದ ಭಾಷಣಗಳು ಹಾಗೂ ಬರಹಗಳನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿದ್ದ ಕೃತಿ-ಭಗತ್ ಸಿಂಗ್ : ಇಂಕ್ವಿಲಾಬ್ ಜಿಂದಾಬಾದ್. ಕೇವಲ 24 ವರ್ಷಕ್ಕೆ ಗಲ್ಲಿಗೇರಿದ ಭಗತ್ ಸಿಂಗ್, ತಮ್ಮ ಜೀವಿತದ ಕೊನೆಯ ಗಳಿಗೆಯಲ್ಲೂ ಮನೋಸ್ಥೈರ್ಯವನ್ನು ಬಿಡಲಿಲ್ಲ. ದೇಶದ ಸ್ವಾತಂತ್ಯ್ರ ಸಿಗಲೇಬೇಕು ಎಂದು ಸಂಕಲ್ಪ ತೋರಿದ್ದರು. ಮಾತ್ರವಲ್ಲ; ಈ ದೇಶದ ಜಾತಿ-ಮತ-ಭೇದಗಳನ್ನು ಕಟುಮಾಗಿ ಖಂಡಿಸಿದ ಅವರ ವಿಚಾರಗಳು, ಬರಹಗಳು, ದೇಶಾಭಿಮಾನವನ್ನೂ, ವೈಚಾರಿಕತೆಯನ್ನೂ ಹಾಗೂ ವೈಜ್ಞಾನಿಕತೆಯನ್ನೂ ಒಳಗೊಂಡಿವೆ. ಅವರ ಆಯ್ದ ಬರಹಗಳು ಹಾಗೂ ಭಾಷಣಗಳನ್ನುಮಾತ್ರ ಅನುವಾದಿಸಿ ನೀಡಿದ್ದು, ದೇಶದ ಸ್ವಾತಂತ್ಯ್ರಕ್ಕಾಗಿ ಹೋರಾಡುವ ಒಂದು ಮನಸ್ಥಿತಿ ಬೇರೆ. ಆದರೆ, ಬದುಕಿನಲ್ಲಿ, ಜಾತ್ಯತೀತವಾಗಿದ್ದು, ವೈಜ್ಞಾನಿಕ ಮನೋಭಾವ ಹೊಂದುವುದು ಬೇರೆ. ಆದ್ದರಿಂದ, ಮೊದಲು ವ್ಯಕ್ತಿಗತವಾಗಿ ವೈಜ್ಞಾನಿಕತೆಯನ್ನು ಹೊಂದಿರಬೇಕು ಎಂಬುದು ಅವರ ವಾದವಾಗಿತ್ತು. ಇಂತಹ ವಿಚಾರಗಳನ್ನು ಒಳಗೊಂಡ ಕೃತಿ ಇದು. 

About the Author

ಎ. ಜ್ಯೋತಿ

ಸಾಮಾಜಿಕ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ  ಸ್ತ್ರೀವಾದಿ ಚಿಂತಕಿ, ಲೇಖಕಿ ಜ್ಯೋತಿ ಅನಂತಸುಬ್ಬರಾವ್ ಅವರು ಭಾರತ ಮಹಿಳಾ ಒಕ್ಕೂಟದ ರಾಜ್ಯಾಧ್ಯಕ್ಷೆಯಾಗಿದ್ದಾರೆ. ಕೃತಿಗಳು: ಭಗತ್ ಸಿಂಗ್ (ಇಂಕ್ವಿಲಾಬ್ ಜಿಂದಾಬಾದ್: ಅವರ ಆಯ್ದ ಬರಹ ಹಾಗೂ ಭಾಷಣಗಳ ಕನ್ನಡಾನುವಾದಿತ ಕೃತಿ), ಭಾರತದ ಮಹಿಳಾ ಚಳವಳಿಯ ಸಂಕ್ಷಿಪ್ತ ಚರಿತ್ರೆ.    ...

READ MORE

Related Books