ದಿ. ಕಲೆಕ್ಟೆಡ್ ಪೊಯಿಟ್ರಿ ಆಫ್ ಟಿ.ಆರ್. ರಾಜಶೇಖರಯ್ಯ

Author : ಬಸವರಾಜ ನಾಯ್ಕರ

Pages 250

₹ 395.00




Year of Publication: 2016
Published by: ಸಿವಿಜಿ ಬುಕ್ಸ್,
Address: ಕವಿಧಾಮನಗರ ಬೆಂಗಳೂರು-560058

Synopsys

ಪ್ರೊ. ಟಿ.ಆರ್. ರಾಜಶೇಖರಯ್ಯ ಅವರು ಸಮಗ್ರ ಆಂಗ್ಲ ಕವಿತೆಗಳ ಸಂಗ್ರಹ ಕೃತಿ ಇದು. ಇಂಗ್ಲಿಷ್  ಭಾಷೆಯಲ್ಲಿ ಕವಿತೆ ಬರೆಯುವ ಭಾರತೀಯರಾದ ಎ.ಕೆ. ರಾಮಾನುಜನ್, ಜಯಂತ್ ಮಹಾಪಾತ್ರ, ಶಿವ ಕೆ. ಕುಮಾರ ಹಾಗೂ ಇತರರಂತೆ ಟಿ.ಆರ್. ರಾಜಶೇಖರಯ್ಯ ಅವರು ಕವಿತೆಗಳು ಲಯ, ಕಾವ್ಯ ಸೂಕ್ಷ್ಮತೆ ಹಾಗೂ ಉತ್ತಮ ಗುಣಮಟ್ಟದ್ದಾಗಿವೆ. ಕನ್ನಡ ಸಾಹಿತ್ಯದ ಶ್ರೀಮಂತಿಕೆಯ ದ್ಯೋತಕವಾಗಿರುವ ಪುಣ್ಯಕೋಟಿ ಎಂಬ ಗೋವಿನ ಹಾಡು -ಕನ್ನಡದ ಈ ಸಾಹಿತ್ಯವನ್ನು ಟಿ.ಆರ್. ರಾಜಶೇಖರಯ್ಯ ಅವರು ಇಂಗ್ಲಿಷ್ ಗೆ ಅನುವಾದಿಸಿದ್ದು, ಈ ಸಂಕಲನ ಒಳಗೊಂಡಿದೆ. ಲೇಖಕ ಪ್ರೊ. ಬಸವರಾಜ ನಾಯ್ಕರ ಅವರು ಕವಿತೆಗಳನ್ನು ಸಂಪಾದಿಸಿದ್ದಾರೆ.  

About the Author

ಬಸವರಾಜ ನಾಯ್ಕರ
(01 August 1949)

ಡಾ. ಬಸವರಾಜ ನಾಯ್ಕರ್ ಅವರು ಮೂಲತಃ ಗದಗ (ಜನನ: 01-08-1949) ಜಿಲ್ಲೆಯ ನರಗುಂದದವರು. ತಂದೆ ಶಿವಶಂಕರಪ್ಪ ನಾಯ್ಕರ, ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ, ನರಗುಂದದಲ್ಲಿ ಪ್ರೌಢಶಿಕ್ಷಣ ಮತ್ತೇ ಧಾರವಾಡದಲ್ಲಿ ಪಿಯುಸಿಯಿಂದ ಕರ್ನಾಟಕ ವಿ.ವಿಯಲ್ಲಿ ಸ್ನಾತಕೋತ್ತರ ಪದವಿ (ಎಂ.ಎ-ಇಂಗ್ಲಿಷ್)  ಹಾಗೂ ಕ್ಯಾಲಿಫೋರ್ನಿಯಾದಿಂದ ಡಿ.ಲಿಟ್ ಪದವೀಧರರು.  ಗುಲಬರ್ಗಾ ವಿ.ವಿಯಲ್ಲಿ ಸಂಶೋಧನಾ ಸಹಾಯಕರಾಗಿ ವೃತ್ತಿ ಜೀವನ ಆರಂಭಿಸಿ ಅಲ್ಲಿಯೇ ಉಪನ್ಯಾಸಕರಾಗಿ ರೀಡರ್‍ ಆಗಿ ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರೀಡರ್, ಪ್ರೊಫೆಸರ್, ಪ್ರೊಫೆಸರ್ ಎಮಿರಿಟಿಸ್ ಆಗಿ (2011-12) ನಿವೃತ್ತಿಯಾದರು.  ಅನುವಾದಿತ ಕೃತಿಗಳು:   ಪಡುವಣ ನಾಡಿನ ಪ್ರೇಮವೀರ- 1975, ಜೋಗೀಭಾವಿ-1976, ಕೊಳ್ಳದ ನೆರಳು-1978, ಹುಚ್ಚುಹೊಳೆ-1980, ನಿಗೂಢ ಸೌಧ (11 ಫ್ರೆಂಚ್ ಕಥೆಗಳ ಅನುವಾದ)-1982, ಗೋವರ್ಧನರಾಮ-1984, ಭಾರತೀಯ ಇಂಗ್ಲೀಷ್ ಸಾಹಿತ್ಯ ಚರಿತ್ರೆ-2006, ಕೆಂಪು ...

READ MORE

Related Books