About the Author

ಕವಿ, ಕಲಾವಿದ, ಬಾಗೂರು ಮಾರ್ಕಾಂಡೇಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (ಜನನ: 28-06-1966) ಬಾಗೂರು ಗ್ರಾಮದವರು. ಪರಿಸರ, ಮಕ್ಕಳ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಸುಮಾರು 54ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ, ಬೇರುಗಳು ಚಿತ್ರ ಸರಣಿ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿದವರು, ‘ರೇಖೆಗಳಲ್ಲಿ ಭಾವಗೀತೆಗಳು’ ಮೂಲಕ ನೂತನ ಪ್ರಯೋಗಶೀಲತೆ ರೂಢಿಸಿಕೊಂಡವರು. ಕನ್ನಡದ ಸುಲಭ ಕಲಿಕೆಗೆ “ಕನ್ನಡ ಸೌರಭ” ತಂತ್ರಾಂಶ ತಯಾರಿಸಿದ್ದಾರೆ. “ಬಾಗೂರು ಕಲಾ ವೇದಿಕೆ ಟ್ರಸ್ಟ್” ರಚಿಸಿಕೊಂಡು ‘ಕಲಾ ಭೂಷಣ’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ

ಕವನ ಸಂಕಲನಗಳು: ರೇಖಾಂತರಂಗದ ಭಾವಗುಸುಮ, ಭಾವಶಿಲ್ಪ, ಭಾವೋನ್ಮಾದಿನಿ, ಭಾವಸಮ್ಮಿಲನ, ಕೊಳಲದನಿ, ಕಾವ್ಯಕನ್ನಿಕೆ,  ಚೈತ್ರ ಚೆಲುವು, ಸುವರ್ಣಪುತ್ಥಳಿ,  ಸ್ವರಸಿರಿಯ ಸ್ನೇಹಲತೆ, ರಾಧಾ ಮಾಧವರ ಒಲುಮೆ ಚಿತ್ತಾರ,  ಚಳಿಗದಿರ, ಚಿತ್ತಾರದ ಅಡ್ಡಿಕೆ, ಅವಳು ಎಲ್ಲಿಹಳು, ಬಾಗೂರು ಮಾರ್ಕಾಂಡೇಯರ ಕವಿತೆ ಸುಮಧುರ ಭಾವಗೀತೆ, ಭಾಗ-1, ಬಾಗೂರು ಮಾರ್ಕಾಂಡೇಯರ ಕವಿತೆ, ಸುಮಧುರ ಭಾವಗೀತೆ, ಭಾಗ-2, ಸೇರಿದಂತೆ ಒಟ್ಟು 25 ಸಂಕಲನಗಳು.

ಶಿಶುಸಾಹಿತ್ಯ: ಚುಕುಬುಕು ರೈಲು, ಮೋಡಣ್ಣ ನಾ ಯಾರು ಹೇಳಣ್ಣ, ಬಣ್ಣದ ಅಂಗಿ, ಚಿಣ್ಣರ ಚಿಲಿಪಿಲಿ, ಚಂದದ ಚೆಲುವಿನ ಗಾಳಿಪಟ, ಎಳೆಯರಿಗಾಗಿ ಕಾಮನ ಬಿಲ್ಲು, ಕಾಡದಿಬ್ಬದಲಿ ಪಾಠ ಕಲಿತ ಕಳ್ಳರು, ಅಮ್ಮನ ಪ್ರೀತಿ, ಚಿಲಿಪಿಲಿ ಹಾಡು, . ಪುಟಾಣಿ ಚಿಲಿಪಿಲಿ,  ಬಾರೋ ಬಾರೋ ಗಿಳಿಯೆ, ಹಾರುವ ಹಕ್ಕಿಯೇ ಬಾರೆ, ಬಣ್ಣದ ಹಕ್ಕಿಯ ಚಿಲಿಪಿಲಿ,  ಕವಿತಾ ಕಿನ್ನರಿ ಸೇರಿದಂತೆ ಒಟ್ಟು 26 ಕೃತಿಗಳು.

ಚಿತ್ರಕಲೆಯ ಪುಸ್ತಕಗಳು: ನೀವು ಕಲಾವಿದರಾಗಬೇಕೆ?, ಸಿರಿಗನ್ನಡ ಬರಹದ ಅಕ್ಷರಲೋಕ, ವಿನ್ಯಾಸ ಜಗತ್ತು, ಮಗು ಮತ್ತು ಚಲಿಸುವ ರೇಖೆ, ಚುಕ್ಕೆಚಿತ್ರ ನೀವೂ ರಚಿಸಬೇಕೆ?,  ರೇಖೆಗಳು, ಚಿತ್ರಗಳು ಮಾತನಾಡುತ್ತವೆ,

ಸಿ ಡಿ - ಧ್ವನಿ ಸುರುಳಿಗಳು: . ಕನ್ನಡ ಸೌರಭ (ಕನ್ನಡ ಕಲಿಕೆಗಾಗಿ), ರಾಧೆ ಒಲುಮೆಯ ಕೊಳಲು (ಭಾವಗೀತೆಗಳು), ಸ್ವರಸಿರಿಯ ಸ್ನೇಹಲತೆ (ಭಾವಗೀತೆಗಳು),  ಚುಕುಬುಕು ರೈಲು (ಮಕ್ಕಳಿಗೆ ಗೀತೆಗಳು), ವರವಾಗುವ ಮರ (ಪರಿಸರ ಗೀತೆಗಳು) ಹೀಗೆ ಒಟ್ಟು 17 ಸಂಕಲನಗಳು. 

ಬಾಗೂರು ಮಾರ್ಕಾಂಡೇಯ

(28 Jun 1966)

Books by Author