ಪಾತರಗಿತ್ತಿಯ ಬಣ್ಣದ ಅಂಗಿ

Author : ಬಾಗೂರು ಮಾರ್ಕಾಂಡೇಯ

Pages 16

₹ 18.00




Year of Publication: 2006
Published by: ಧೃತಿ ಪ್ರಕಾಶನ
Address: 191/22, ಜಿ-2, 2ನೇ ಕ್ರಾಸ್, ವಿದ್ಯಾನಗರ, ಕುರುಬರಹಳ್ಳಿ ಮುಖ್ಯರಸ್ತೆ, ಪಿ. ಅಂಡ್ ಟಿ. ಎಂಪ್ಲಾಯಿಸ್ ಕಾಲೋನಿ, ಬೆಂಗಳೂರು-86
Phone: 9845313583

Synopsys

ಪಾತರಗಿತ್ತಿಯ ಬಣ್ಣದ ಅಂಗಿ -ಕವಿ ಬಾಗೂರು ಮಾರ್ಕಾಂಡೇಯ ಅವರು ಪುಟಾಣಿ ಮಕ್ಕಳಿಗೋಸುಗವೆ ಬರೆದ ಕವಿತೆಗಳ ಸಂಕಲನವಿದು. ಅನೇಕ ಕವಿತೆಗಳು ಗೀತೆಗಳಾಗಿವೆ. ಮಕ್ಕಳು ಹಾಡಿ ನಲಿಯಬಹುದಾದ ಕವಿತೆಗಳು. ಸರಳವಾದ ಪ್ರಾಸಪದ್ಯಗಳು ಇರುವುದರಿಂದ ಚಿಣ್ಣರು ಸುಲಭವಾಗಿ ಕಲಿತು ಹಾಡಿಕೊಂಡು ಸಂಭ್ರಮಿಸಬಹುದು. ಮಕ್ಕಳಿಗೆ ಹಾಡು ಕಲಿಸುವ ಶಿಕ್ಷಕರಿಗೂ ಈ ಕೃತಿಯಲ್ಲಿಯ ಗೀತೆಗಳ ಆಯ್ಕೆಗೂ ಸುಗಮವಾಗಿದೆ.

About the Author

ಬಾಗೂರು ಮಾರ್ಕಾಂಡೇಯ
(28 June 1966)

ಕವಿ, ಕಲಾವಿದ, ಬಾಗೂರು ಮಾರ್ಕಾಂಡೇಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (ಜನನ: 28-06-1966) ಬಾಗೂರು ಗ್ರಾಮದವರು. ಪರಿಸರ, ಮಕ್ಕಳ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಸುಮಾರು 54ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ, ಬೇರುಗಳು ಚಿತ್ರ ಸರಣಿ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿದವರು, ‘ರೇಖೆಗಳಲ್ಲಿ ಭಾವಗೀತೆಗಳು’ ಮೂಲಕ ನೂತನ ಪ್ರಯೋಗಶೀಲತೆ ರೂಢಿಸಿಕೊಂಡವರು. ಕನ್ನಡದ ಸುಲಭ ಕಲಿಕೆಗೆ “ಕನ್ನಡ ಸೌರಭ” ತಂತ್ರಾಂಶ ತಯಾರಿಸಿದ್ದಾರೆ. “ಬಾಗೂರು ಕಲಾ ವೇದಿಕೆ ಟ್ರಸ್ಟ್” ರಚಿಸಿಕೊಂಡು ‘ಕಲಾ ಭೂಷಣ’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ ಕವನ ಸಂಕಲನಗಳು: ರೇಖಾಂತರಂಗದ ಭಾವಗುಸುಮ, ಭಾವಶಿಲ್ಪ, ಭಾವೋನ್ಮಾದಿನಿ, ಭಾವಸಮ್ಮಿಲನ, ಕೊಳಲದನಿ, ಕಾವ್ಯಕನ್ನಿಕೆ,  ಚೈತ್ರ ಚೆಲುವು, ಸುವರ್ಣಪುತ್ಥಳಿ,  ಸ್ವರಸಿರಿಯ ಸ್ನೇಹಲತೆ, ರಾಧಾ ಮಾಧವರ ಒಲುಮೆ ...

READ MORE

Related Books