ಭಾವಲೋಕದ ಚಿಣ್ಣರ ಚಿಲಿಪಿಲಿ

Author : ಬಾಗೂರು ಮಾರ್ಕಾಂಡೇಯ

Pages 16

₹ 18.00




Year of Publication: 2006
Published by: ಧೃತಿ ಪ್ರಕಾಶನ
Address: 191/22, ಜಿ-2, 2ನೇ ಕ್ರಾಸ್, ವಿದ್ಯಾನಗರ, ಕುರುಬರಹಳ್ಳಿ ಮುಖ್ಯರಸ್ತೆ, ಪಿ. ಅಂಡ್ ಟಿ. ಎಂಪ್ಲಾಯಿಸ್ ಕಾಲೋನಿ, ಬೆಂಗಳೂರು-86
Phone: 9845313583

Synopsys

ಭಾವಲೋಕದ ಚಿಣ್ಣರ ಚಿಲಿಪಿಲಿ-ಕವಿ ಬಾಗೂರು ಮಾರ್ಕಾಂಡೇಯ ಅವರು ಮಕ್ಕಳಿಗಾಗಿ ಬರೆದ ಕವನಗಳ ಸಂಕಲನವಿದು. ಮಕ್ಕಳಿಗೆ ಇಷ್ಟವೆನಿಸುವಂಥ ಭಾವಗಳ ಪುಟ್ಟ ಪುಟ್ಟ ಪದ್ಯಗಳನ್ನು ಕವಿಯು ಕಟ್ಟಿಕೊಟ್ಟಿದ್ದಾರೆ. ಪ್ರತಿ ಕವಿತೆಯೂ ಚಿತ್ರವಿನ್ಯಾಸವನ್ನು ಹೊಂದಿದೆ. ಅನೇಕ ಕವಿತೆಗಳು ಗೀತೆಗಳಾಗಿವೆ. ಇವುಗಳಿಗೆ ಸಂಗೀತ ನಿರ್ದೇಶಕರು ಹಾಗೂ ಗಾಯಕರು ಸ್ವರ ಸಂಯೋಜಿಸಿದ್ದು,  ಈ ಕವಿತೆಗಳು ಈಗಾಗಲೇ ಮಕ್ಕಳನ್ನು ತಲುಪಿದ್ದು, ಅವರು ಹಾಡುವ ಮೂಲಕ ಸಂಭ್ರ,ಮಿಸುತ್ತಿದ್ದಾರೆ. 

About the Author

ಬಾಗೂರು ಮಾರ್ಕಾಂಡೇಯ
(28 June 1966)

ಕವಿ, ಕಲಾವಿದ, ಬಾಗೂರು ಮಾರ್ಕಾಂಡೇಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (ಜನನ: 28-06-1966) ಬಾಗೂರು ಗ್ರಾಮದವರು. ಪರಿಸರ, ಮಕ್ಕಳ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಸುಮಾರು 54ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ, ಬೇರುಗಳು ಚಿತ್ರ ಸರಣಿ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿದವರು, ‘ರೇಖೆಗಳಲ್ಲಿ ಭಾವಗೀತೆಗಳು’ ಮೂಲಕ ನೂತನ ಪ್ರಯೋಗಶೀಲತೆ ರೂಢಿಸಿಕೊಂಡವರು. ಕನ್ನಡದ ಸುಲಭ ಕಲಿಕೆಗೆ “ಕನ್ನಡ ಸೌರಭ” ತಂತ್ರಾಂಶ ತಯಾರಿಸಿದ್ದಾರೆ. “ಬಾಗೂರು ಕಲಾ ವೇದಿಕೆ ಟ್ರಸ್ಟ್” ರಚಿಸಿಕೊಂಡು ‘ಕಲಾ ಭೂಷಣ’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ ಕವನ ಸಂಕಲನಗಳು: ರೇಖಾಂತರಂಗದ ಭಾವಗುಸುಮ, ಭಾವಶಿಲ್ಪ, ಭಾವೋನ್ಮಾದಿನಿ, ಭಾವಸಮ್ಮಿಲನ, ಕೊಳಲದನಿ, ಕಾವ್ಯಕನ್ನಿಕೆ,  ಚೈತ್ರ ಚೆಲುವು, ಸುವರ್ಣಪುತ್ಥಳಿ,  ಸ್ವರಸಿರಿಯ ಸ್ನೇಹಲತೆ, ರಾಧಾ ಮಾಧವರ ಒಲುಮೆ ...

READ MORE

Related Books