ಪುಟ್ಟಿಯ ಗಿರಗಟ್ಟೆ (ಮಕ್ಕಳ ಪದ್ಯಗಳು)

Author : ಬಾಗೂರು ಮಾರ್ಕಾಂಡೇಯ

Pages 200

₹ 200.00




Year of Publication: 2017
Published by: ಎಸ್ ಎಲ್ ಎನ್ ಪಬ್ಲಿಕೇಷನ್ಸ್
Address: ನಂ. 3437. (ನೆಲಮಾಳಿಗೆ) 4ನೇ ಮುಖ್ಯರಸ್ತೆ. 9ನೇ ಅಡ್ಡರಸ್ತೆ, ಶಾಸ್ತ್ರೀನಗರ. ಬನಶಂಕರಿ 2ನೇ ಹಂತ, ಬೆಂಗಳೂರು-28,
Phone: 9972129376

Synopsys

ಪುಟ್ಟಿಯ ಗಿರಗಟ್ಟೆ ಮಕ್ಕಳ ಪದ್ಯಗಳು- ಕವಿ ಬಾಗೂರು ಮಾರ್ಕಾಂಡೇಯ ಅವರು ಮಕ್ಕಳಿಗಾಗಿಯೇ ರಚಿಸಿದ ಪದ್ಯ ಮತ್ತು ಹಾಡುಗಳ ಸಂಕಲನ. ಅನೇಕ ಪದ್ಯಗಳಿಗೆ ಸ್ವರಸಂಯೋಜನೆ ಮಾಡಿದ್ದಾರೆ. ಈ ಕೃತಿಗೆ ಪುಸ್ತಕ ಸೊಗಸು ಬಹುಮಾನ ಬಂದಿದೆ. ಚಿತ್ರವಿನ್ಯಾಸಕ್ಕಾಗಿ. ಶಿಶು ಸಾಹಿತ್ಯ ವಲಯದಲ್ಲಿ ಕೆಲಸ ಮಾಡುವವರ ಕೊರತೆ ನೀಗಿಸಿದ್ದಾರೆ.  ಶಾಲಾ ಮಕ್ಕಳಿಗೆ ಹೆಚ್ಚು ವಿಷಯ ಜ್ಞಾನಕ್ಕಾಗಿ ಈ ಕವಿತೆಗಳನ್ನು ಓದಿಕೊಳ್ಳಬಹುದು.

About the Author

ಬಾಗೂರು ಮಾರ್ಕಾಂಡೇಯ
(28 June 1966)

ಕವಿ, ಕಲಾವಿದ, ಬಾಗೂರು ಮಾರ್ಕಾಂಡೇಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (ಜನನ: 28-06-1966) ಬಾಗೂರು ಗ್ರಾಮದವರು. ಪರಿಸರ, ಮಕ್ಕಳ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಸುಮಾರು 54ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ, ಬೇರುಗಳು ಚಿತ್ರ ಸರಣಿ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿದವರು, ‘ರೇಖೆಗಳಲ್ಲಿ ಭಾವಗೀತೆಗಳು’ ಮೂಲಕ ನೂತನ ಪ್ರಯೋಗಶೀಲತೆ ರೂಢಿಸಿಕೊಂಡವರು. ಕನ್ನಡದ ಸುಲಭ ಕಲಿಕೆಗೆ “ಕನ್ನಡ ಸೌರಭ” ತಂತ್ರಾಂಶ ತಯಾರಿಸಿದ್ದಾರೆ. “ಬಾಗೂರು ಕಲಾ ವೇದಿಕೆ ಟ್ರಸ್ಟ್” ರಚಿಸಿಕೊಂಡು ‘ಕಲಾ ಭೂಷಣ’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ ಕವನ ಸಂಕಲನಗಳು: ರೇಖಾಂತರಂಗದ ಭಾವಗುಸುಮ, ಭಾವಶಿಲ್ಪ, ಭಾವೋನ್ಮಾದಿನಿ, ಭಾವಸಮ್ಮಿಲನ, ಕೊಳಲದನಿ, ಕಾವ್ಯಕನ್ನಿಕೆ,  ಚೈತ್ರ ಚೆಲುವು, ಸುವರ್ಣಪುತ್ಥಳಿ,  ಸ್ವರಸಿರಿಯ ಸ್ನೇಹಲತೆ, ರಾಧಾ ಮಾಧವರ ಒಲುಮೆ ...

READ MORE

Related Books