ಮೇರಿ ಪ್ಯಾರಿ ಕಿತಾಬ್‌ನ ಶಾಯಿರಿ

Author : ಬಾಗೂರು ಮಾರ್ಕಾಂಡೇಯ

Pages 104

₹ 65.00
Year of Publication: 2019
Published by: ಸಪ್ನ ಬುಕ್ಸ್‌
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು
Phone: 0804011 4455

Synopsys

ಬಾಗೂರು ಮಾರ್ಕಾಂಡೇಯರ ’ಮೇರಿ ಪ್ಯಾರಿ ಕಿತಾಬ್‌ನ ಶಾಯಿರ” ಕವಿತೆಗಳ ಸಂಕಲನವಾಗಿದೆ. ಪ್ರೇಮಕವಿತೆಗಳ ಭಂಡಾರವಾಗಿ ಇಲ್ಲಿಯ ಕವಿತೆಗಳಿವೆ.  ಒಲವೆಂಬ ಸಾಗರದಿ ವಿಹರಿಸುವ ನಲ್ಲ ನಲ್ಲೆಯರ ಮನದಾಳದ ಮಾತುಗಳು, ಮನದ ಭಾವ, ಪರಸ್ಪರ ಆಪ್ತತೆ ಹೇಗಿರುತ್ತದೆ ಎಂಬುದನ್ನು ನವಿರಾಗಿ ಮನಮುಟ್ಟುವಂತೆ ವರ್ಣಿಸಿದ್ದಾರೆ

ಕವಿ ಪ್ರೇಮ ಕವಿತೆಗಳಲ್ಲಿ ಶೃಂಗಾರ ರಸದೌತಣ ನೀಡಿದರೆ,ಸಮಾಜದ ಆಗುಹೋಗುಗಳಲ್ಲಿ ಜೀವನವನ್ನು ಒಪ್ಪವಾಗಿಸಿಕೊಳ್ಳುವ ಬಗ್ಗೆಯೂ ತಿಳಿಸಿದ್ದಾರೆ. ಮಂದಿರ ಮಸೀದಿ ಚರ್ಚ್ಗಗಳಲ್ಲಿ ’ದೇವನೊಬ್ಬ ನಾಮ ಹಲವ” ಎಂಬುದನ್ನು ಜಾತಿ, ಭಾಷೆ, ಭೇದ-ಭಾವ ತೊರೆದು ಭಾವೈಕ್ಯತೆಯ ನೆಲೆಯಲಿ ಬದುಕುವ ಸಂದೇಶವನ್ನು ಸಾರಿದ್ದಾರೆ. ಕೇವಲ ಪ್ರೇಮ ಕವಿತೆಗಳಲ್ಲದೆ ’ಜನ್ಮವಿತ್ತ ದೇವನಿವನು’ ಹಡೆದ ಜನ್ಮದ ಜೀವನ ಸಾರ್ಥಕತೆಯ ಸಾರುವ ಕವಿತೆಯಲ್ಲಿ ಭೂಮಿಯ ಮೇಲೆ ನಮ್ಮ ಅಸ್ಥಿತ್ವಕ್ಕೆ ಕಾಣುವ ದೇವರಿಟ್ಟ ಭಿಕ್ಷೆ ಕಾರಣ. ಪಡೆದ ಜನ್ಮ ಬೆಳೆದು ತಳೆಯಲು ಅವರಾಶ್ರಯವೇ ಗತಿಯೆಂಬ ವರ್ಣನೆ ಕವಿತೆಯಲ್ಲಿದೆ.

About the Author

ಬಾಗೂರು ಮಾರ್ಕಾಂಡೇಯ
(28 June 1966)

ಕವಿ, ಕಲಾವಿದ, ಬಾಗೂರು ಮಾರ್ಕಾಂಡೇಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (ಜನನ: 28-06-1966) ಬಾಗೂರು ಗ್ರಾಮದವರು. ಪರಿಸರ, ಮಕ್ಕಳ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಸುಮಾರು 54ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ, ಬೇರುಗಳು ಚಿತ್ರ ಸರಣಿ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿದವರು, ‘ರೇಖೆಗಳಲ್ಲಿ ಭಾವಗೀತೆಗಳು’ ಮೂಲಕ ನೂತನ ಪ್ರಯೋಗಶೀಲತೆ ರೂಢಿಸಿಕೊಂಡವರು. ಕನ್ನಡದ ಸುಲಭ ಕಲಿಕೆಗೆ “ಕನ್ನಡ ಸೌರಭ” ತಂತ್ರಾಂಶ ತಯಾರಿಸಿದ್ದಾರೆ. “ಬಾಗೂರು ಕಲಾ ವೇದಿಕೆ ಟ್ರಸ್ಟ್” ರಚಿಸಿಕೊಂಡು ‘ಕಲಾ ಭೂಷಣ’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ ಕವನ ಸಂಕಲನಗಳು: ರೇಖಾಂತರಂಗದ ಭಾವಗುಸುಮ, ಭಾವಶಿಲ್ಪ, ಭಾವೋನ್ಮಾದಿನಿ, ಭಾವಸಮ್ಮಿಲನ, ಕೊಳಲದನಿ, ಕಾವ್ಯಕನ್ನಿಕೆ,  ಚೈತ್ರ ಚೆಲುವು, ಸುವರ್ಣಪುತ್ಥಳಿ,  ಸ್ವರಸಿರಿಯ ಸ್ನೇಹಲತೆ, ರಾಧಾ ಮಾಧವರ ಒಲುಮೆ ...

READ MORE

Related Books