ಕೊಳಲ ದನಿ

Author : ಬಾಗೂರು ಮಾರ್ಕಾಂಡೇಯ

Pages 64

₹ 30.00
Year of Publication: 1995
Published by: ಶ್ರೀ ರಾಘವೇಂದ್ರ ಪ್ರಕಾಶನ
Address: ನಂ 21, 2ನೇ ತಿರುವು, 10ನೇ ಮುಖ್ಯರಸ್ತೆ, ಗುರುರಾಜ ಬಡಾವಣೆ, ಬನಶಂಕರಿ ಮೂರನೇ ಹಂತ, ಬೆಂಗಳೂರು-85
Phone: 9845313583

Synopsys

ಕವಿ ಬಾಗೂರು ಮಾರ್ಕಾಂಡೇಯ ಅವರು ಬರೆದ ಕವನ ಸಂಕಲನ-ಕೊಳಲ ದನಿ . 55 ಕವಿತೆಗಳಿವೆ. ಸಾಹಿತಿ ಡಾ ದೊಡ್ಡರಂಗೇಗೌಡರು ಬರೆದ ಮುನ್ಬನುಡಿಯಲ್ಲಿ `ಯುವ ಕಲಾವಿದ ಬಾಗೂರು ಮಾರ್ಕಾಂಡೇಯ ಇದುವರೆವಿಗೆ ಕುಂಚದೊಡನಾಡಿದವರು ರಂಗನ್ನು ಮಾತನಾಡಿಸಿದವರು ಗೆರೆಗಳಂತರಂಗವನ್ನು ಬಗೆದವರು. ಈಗ ನುಡಿಗಡಳೊಡಲ ಮುಡಿ ನೋಡಿ ಆ ಮೋಡಿಯೂ ಹೇಗಿರುತ್ತದೋ ಎಂದು ಕುತೂಹಲದಿಂದ ಭಾವಲೋಕದಲ್ಲಿ ಕಂಡ ಅಸಂಖ್ಯ ಭಾವಗಳಿಗೆ `ನುಡಿ ಹಂದರ 'ನಿಮಿರ್ಸುವ ತವಕ ತೋರಿದ್ದಾರೆ' ಅಭಿಮಾನ ವ್ಯಕ್ತಪಡಿಸಿದ್ದಾರೆ. ಪ್ರೀತಿ ಪ್ರಕೃತಿಯ ಬಗೆಗಿನ ಅನೇಕ ಕವಿತೆಗಳು ಇದರಲ್ಲಿ ಅಡಕವಾಗಿವೆ.

About the Author

ಬಾಗೂರು ಮಾರ್ಕಾಂಡೇಯ
(28 June 1966)

ಕವಿ, ಕಲಾವಿದ, ಬಾಗೂರು ಮಾರ್ಕಾಂಡೇಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (ಜನನ: 28-06-1966) ಬಾಗೂರು ಗ್ರಾಮದವರು. ಪರಿಸರ, ಮಕ್ಕಳ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಸುಮಾರು 54ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ, ಬೇರುಗಳು ಚಿತ್ರ ಸರಣಿ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿದವರು, ‘ರೇಖೆಗಳಲ್ಲಿ ಭಾವಗೀತೆಗಳು’ ಮೂಲಕ ನೂತನ ಪ್ರಯೋಗಶೀಲತೆ ರೂಢಿಸಿಕೊಂಡವರು. ಕನ್ನಡದ ಸುಲಭ ಕಲಿಕೆಗೆ “ಕನ್ನಡ ಸೌರಭ” ತಂತ್ರಾಂಶ ತಯಾರಿಸಿದ್ದಾರೆ. “ಬಾಗೂರು ಕಲಾ ವೇದಿಕೆ ಟ್ರಸ್ಟ್” ರಚಿಸಿಕೊಂಡು ‘ಕಲಾ ಭೂಷಣ’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ ಕವನ ಸಂಕಲನಗಳು: ರೇಖಾಂತರಂಗದ ಭಾವಗುಸುಮ, ಭಾವಶಿಲ್ಪ, ಭಾವೋನ್ಮಾದಿನಿ, ಭಾವಸಮ್ಮಿಲನ, ಕೊಳಲದನಿ, ಕಾವ್ಯಕನ್ನಿಕೆ,  ಚೈತ್ರ ಚೆಲುವು, ಸುವರ್ಣಪುತ್ಥಳಿ,  ಸ್ವರಸಿರಿಯ ಸ್ನೇಹಲತೆ, ರಾಧಾ ಮಾಧವರ ಒಲುಮೆ ...

READ MORE

Related Books