ಅಮ್ಮನೆನುವ ಭೂಮಿ

Author : ಬಾಗೂರು ಮಾರ್ಕಾಂಡೇಯ

Pages 162

₹ 95.00




Year of Publication: 2013
Published by: ಸಪ್ನ ಬುಕ್ ಹೌಸ್
Address: ಕರ್ನಾಟಕ ಬುಕ್ ಏಜೆನ್ಸಿ, ತುಂಗಾ ಕಾಂಪ್ಲೆಕ್ಸ್, ಗಾಂಧೀನಗರ, ಬೆಂಗಳೂರು-560 09
Phone: 08040114455

Synopsys

ಅಮ್ಮನೆನುವ ಭೂಮಿ-ಕವಿ ಬಾಗೂರು ಮಾರ್ಕಾಂಡೇಯ ಅವರು ಬರೆದ ಕವನಗಳ ಸಮಕಲನ. ಈ ಕೃತಿಗೆ ಡಾ ಸ ಜ ನಾಗಾಲೋಟಿಮಠ ಸಾಹಿತ್ಯ ರತ್ನ ಪ್ರಶಸ್ತಿ ಲಭಿಸಿದೆ. 137 ಕವಿತೆಗಳಿರುವ ಈ ಸಂಕಲನವು ರೇಖಾಚಿತ್ರಗಳನ್ನು ತನ್ನ ಒಡಲಲ್ಲಿರಿಸಿಕೊಂಡು ಅಂದವಾಗಿ ಕಾಣುತ್ತಿದೆ. ಇಲ್ಲಿ೮ ಬಹುತೇಕ ಕವಿತೆಗಳಿಗೆ ಖ್ಯಾತ ಸಂಗೀತ ನಿರ್ದೇಶಕರು, ಗಾಯಕರು ಸ್ವರಸಂಯೋಜಿಸಿದ್ದು, ಹಾಡುಗಳನ್ನು ಜನಪ್ರಿಯಗೊಳಿಸಿದ್ದಾರೆ. ಪ್ರೀತಿ ಪ್ರಕೃತಿ, ಹಾಗೂ ಮನದ ಅತ್ಯಂತ ಮಧುರ ಭಾವಗಳನ್ನು ಅನುರಣಿಸುವಂಥ ಕವಿತೆಗಳು ಇಲ್ಲಿ ಕಾಣಬಹುದು.

About the Author

ಬಾಗೂರು ಮಾರ್ಕಾಂಡೇಯ
(28 June 1966)

ಕವಿ, ಕಲಾವಿದ, ಬಾಗೂರು ಮಾರ್ಕಾಂಡೇಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (ಜನನ: 28-06-1966) ಬಾಗೂರು ಗ್ರಾಮದವರು. ಪರಿಸರ, ಮಕ್ಕಳ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಸುಮಾರು 54ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ, ಬೇರುಗಳು ಚಿತ್ರ ಸರಣಿ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿದವರು, ‘ರೇಖೆಗಳಲ್ಲಿ ಭಾವಗೀತೆಗಳು’ ಮೂಲಕ ನೂತನ ಪ್ರಯೋಗಶೀಲತೆ ರೂಢಿಸಿಕೊಂಡವರು. ಕನ್ನಡದ ಸುಲಭ ಕಲಿಕೆಗೆ “ಕನ್ನಡ ಸೌರಭ” ತಂತ್ರಾಂಶ ತಯಾರಿಸಿದ್ದಾರೆ. “ಬಾಗೂರು ಕಲಾ ವೇದಿಕೆ ಟ್ರಸ್ಟ್” ರಚಿಸಿಕೊಂಡು ‘ಕಲಾ ಭೂಷಣ’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ ಕವನ ಸಂಕಲನಗಳು: ರೇಖಾಂತರಂಗದ ಭಾವಗುಸುಮ, ಭಾವಶಿಲ್ಪ, ಭಾವೋನ್ಮಾದಿನಿ, ಭಾವಸಮ್ಮಿಲನ, ಕೊಳಲದನಿ, ಕಾವ್ಯಕನ್ನಿಕೆ,  ಚೈತ್ರ ಚೆಲುವು, ಸುವರ್ಣಪುತ್ಥಳಿ,  ಸ್ವರಸಿರಿಯ ಸ್ನೇಹಲತೆ, ರಾಧಾ ಮಾಧವರ ಒಲುಮೆ ...

READ MORE

Related Books