ಸಿರಿಭಾವ-ರೂಪಸಿ

Author : ಬಾಗೂರು ಮಾರ್ಕಾಂಡೇಯ

Pages 312

₹ 280.00
Year of Publication: 2015
Published by: ತೇಜು ಪಬ್ಲಿಕೇಷನ್
Address: 233, 7ನೇ ಅಡ್ಡರಸ್ತೆ, ಶಾಸ್ತ್ರೀನಗರ, ಬೆಂಗಳೂರು-28
Phone: 9448050463

Synopsys

ಕವಿ ಬಾಗೂರು ಮಾರ್ಕಾಂಡೇಯ ಅವರು ಬರೆದ ಭಾವಗೀತೆಗಳ ಸಂಕಲನ- ಸಿರಿಭಾವ-ರೂಪಸಿ. 296 ಭಾವಗೀತೆಗಳನ್ನು ಸಂಕಲಿಸಲಾಗಿದೆ. ಬಹುತೇಕ ಕವಿತೆಗಳು  ಸಂಗೀತ ನಿರ್ದೇಶಕರು ಹಾಗೂ ಗಾಯಕರಿಂದ ಸ್ವರ ಸಂಯೋಜನೆಯಾಗಿ ಹಾಡುಗಳಾಗಿವೆ. 

‘ಕನ್ನಡ ನಾಡು ನುಡಿಯ ಬಗ್ಗೆ ಎದೆ ಎದೆಯಲಿ ಹೊರ ಹೊಮ್ಮಲಿ ಕನ್ನಡದ ಹಾಡು ಕಣ್ಣವೆ ಅರಿವನಕವೂ ಬೆಳೆಯಲಿ ಕರುನಾಡು ಕನ್ನಡದ ಭೂಮಿಯಿದು ಸ್ವರ್ಗಕೆ ಸಮನವಹುದು ಕಾವೇರಿ ನದಿಯ ನೀರು ದೇವಗಂಗೆಯಹುದು.’ ಎಂಬಂಥ ಮಧುರ ಸಾಲುಗಳ ಕವಿತೆಗಳು ಈ ಸಂಕಲನದಲ್ಲಿವೆ. ಪ್ರಕೃತಿ, ಪ್ರೀತಿ, ನೀತಿ, ಮತ್ತು ನಮ್ಮ ಭವ್ಯ ಬದುಕಿನಲ್ಲಿರಬಹುದಾದ ಆದರ್ಶಗಳು ಮತ್ತು ಸಾಮಾಜಕ ಚಿಂತನೆಯನ್ನೊಳಗೊಂಡ ಕವಿತೆಗಳು ಇಲ್ಲಿವೆ.

About the Author

ಬಾಗೂರು ಮಾರ್ಕಾಂಡೇಯ
(28 June 1966)

ಕವಿ, ಕಲಾವಿದ, ಬಾಗೂರು ಮಾರ್ಕಾಂಡೇಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (ಜನನ: 28-06-1966) ಬಾಗೂರು ಗ್ರಾಮದವರು. ಪರಿಸರ, ಮಕ್ಕಳ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಸುಮಾರು 54ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ, ಬೇರುಗಳು ಚಿತ್ರ ಸರಣಿ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿದವರು, ‘ರೇಖೆಗಳಲ್ಲಿ ಭಾವಗೀತೆಗಳು’ ಮೂಲಕ ನೂತನ ಪ್ರಯೋಗಶೀಲತೆ ರೂಢಿಸಿಕೊಂಡವರು. ಕನ್ನಡದ ಸುಲಭ ಕಲಿಕೆಗೆ “ಕನ್ನಡ ಸೌರಭ” ತಂತ್ರಾಂಶ ತಯಾರಿಸಿದ್ದಾರೆ. “ಬಾಗೂರು ಕಲಾ ವೇದಿಕೆ ಟ್ರಸ್ಟ್” ರಚಿಸಿಕೊಂಡು ‘ಕಲಾ ಭೂಷಣ’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ ಕವನ ಸಂಕಲನಗಳು: ರೇಖಾಂತರಂಗದ ಭಾವಗುಸುಮ, ಭಾವಶಿಲ್ಪ, ಭಾವೋನ್ಮಾದಿನಿ, ಭಾವಸಮ್ಮಿಲನ, ಕೊಳಲದನಿ, ಕಾವ್ಯಕನ್ನಿಕೆ,  ಚೈತ್ರ ಚೆಲುವು, ಸುವರ್ಣಪುತ್ಥಳಿ,  ಸ್ವರಸಿರಿಯ ಸ್ನೇಹಲತೆ, ರಾಧಾ ಮಾಧವರ ಒಲುಮೆ ...

READ MORE

Related Books