ಅಮ್ಮನ ಪ್ರೀತಿ-ಕವಿ ಬಾಗೂರು ಮಾರ್ಕಾಂಡೇಯ ಅವರು ಮಕ್ಕಳಿಗಾಗಿ ಬರೆದ ಕವನಗಳ ಸಂಕಲನವಿದು. ಕವಿಯ ಬಾಲ್ಯದ ನೆನಪನ್ನು ಹಚ್ಚ ಹಸಿರಾಗಿಸಿರುವ ಕವಿತೆಗಳಿವೆ. ‘.. ಮೋಡವೆ ಮೋಡವೆ ಓಡುವೆ ಏತಕೆ ಕಾಣಿಸದೇನೆ ನನ್ನೂರು ಒಲುಮೆಯಲೊಮ್ಮೆ ನಗೆ ಮಳೆ ಸುರಿಸು ಹಸಿರಾಗಲಿ ಹೊಸ ನನ್ನೂರು...’ ಎಂದು ಕರೆಯುವ ಮುಗ್ದತೆ ಕವಿತಗಳಲ್ಲಿವೆ. ಮತ್ತೊಂದೆಡೆ ‘...ಓಹೋ ಸೈನಿಕ ಇರುವೆ ಸಾಲು ಮುನ್ನಡೆದಂತಿದೆ ಚುಕುಬುಕು ರೈಲು..’ ಎಂದು ಮಕ್ಕಳ ಆಟಗಳನ್ನು ಕಂಡು ಆನಂದಿಸುವ ಕವಿತೆಯೂ ಇದೆ. ಹೀಗೆ ಮಕ್ಯುಕಳೀಗೆ ಮುದ ನೀಡುವ ಕವಿತೆಗಳ ಸಂಗ್ರಹವಿದು.
©2023 Book Brahma Private Limited.