ಭಾವಸಮ್ಮಿಲನ ( ಭಾವಗೀತೆಗಳು)

Author : ಬಾಗೂರು ಮಾರ್ಕಾಂಡೇಯ

Pages 64

₹ 22.00




Year of Publication: 1997
Published by: ಸಪ್ನ ಬುಕ್ ಹೌಸ್
Address: ಕರ್ನಾಟಕ ಬುಕ್ ಏಜನ್ಸಿ, ತುಂಗಾ ಕಾಂಪ್ಲೆಕ್ಸ್, ಗಾಂಧೀನಗರ, ಬೆಂಗಳೂರು-560 09
Phone: 0802611871

Synopsys

ಕವಿ ಬಾಗೂರು ಮಾರ್ಕಾಂಡೇಯ ಅವರು ಬರೆದ ಭಾವಗೇತೆಗಳ ಸಂಕಲನ-ಭಾವಸಮ್ಮಿಲನ. ಹಾಡಬಹುದಾದ ಒಟ್ಟು 45 ಗೀತೆಗಳಿವೆ. ಕೃತಿಗೆ ಮುನ್ನುಡಿ ಬರೆದ ಖ್ಯಾತ ಗಾಯಕಿ ರತ್ನಮಾಲಾ ಪ್ರಕಾಶ್ ಕವಿಗಳ ಗೀತ ರಚನೆ ಉತ್ಸಾಹ ರಚನೆಯನ್ನು ಪ್ರಶಂಸಿಸಿದ್ದಾರೆ. ಇಲ್ಲಿಯ ಅನೇಕ ಕವಿತೆಗಳಿಗೆ ಸಂಗೀತ ನಿರ್ದೇಶಕರು ರಾಗ ಸಂಯೋಜಿಸಿದ್ದು, ಖ್ಯಾತ ಗಾಯಕಿಯರು ಕವನಗಳ ಅಕ್ಷರಗಳಿಗೆ ರಾಗ ಸ್ಪಂದನ ನೀಡಿದ್ದಾರೆ. 

About the Author

ಬಾಗೂರು ಮಾರ್ಕಾಂಡೇಯ
(28 June 1966)

ಕವಿ, ಕಲಾವಿದ, ಬಾಗೂರು ಮಾರ್ಕಾಂಡೇಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (ಜನನ: 28-06-1966) ಬಾಗೂರು ಗ್ರಾಮದವರು. ಪರಿಸರ, ಮಕ್ಕಳ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಸುಮಾರು 54ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ, ಬೇರುಗಳು ಚಿತ್ರ ಸರಣಿ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿದವರು, ‘ರೇಖೆಗಳಲ್ಲಿ ಭಾವಗೀತೆಗಳು’ ಮೂಲಕ ನೂತನ ಪ್ರಯೋಗಶೀಲತೆ ರೂಢಿಸಿಕೊಂಡವರು. ಕನ್ನಡದ ಸುಲಭ ಕಲಿಕೆಗೆ “ಕನ್ನಡ ಸೌರಭ” ತಂತ್ರಾಂಶ ತಯಾರಿಸಿದ್ದಾರೆ. “ಬಾಗೂರು ಕಲಾ ವೇದಿಕೆ ಟ್ರಸ್ಟ್” ರಚಿಸಿಕೊಂಡು ‘ಕಲಾ ಭೂಷಣ’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ ಕವನ ಸಂಕಲನಗಳು: ರೇಖಾಂತರಂಗದ ಭಾವಗುಸುಮ, ಭಾವಶಿಲ್ಪ, ಭಾವೋನ್ಮಾದಿನಿ, ಭಾವಸಮ್ಮಿಲನ, ಕೊಳಲದನಿ, ಕಾವ್ಯಕನ್ನಿಕೆ,  ಚೈತ್ರ ಚೆಲುವು, ಸುವರ್ಣಪುತ್ಥಳಿ,  ಸ್ವರಸಿರಿಯ ಸ್ನೇಹಲತೆ, ರಾಧಾ ಮಾಧವರ ಒಲುಮೆ ...

READ MORE

Related Books