ಹಸಿ ಕ್ಯಾನ್ವಾಸ್

Author : ಬಾಗೂರು ಮಾರ್ಕಾಂಡೇಯ

Pages 130

₹ 75.00




Year of Publication: 2012
Published by: ಶ್ರೀನಿವಾಸ ಪುಸ್ತಕ ಪ್ರಕಾಶನ
Address: ನಂ. 164/ಎ, ಮೊದಲನೇ ಮಹಡಿ, ಎಂ.ಆರ್.ಎನ್. ಬಿಲ್ಡಿಂಗ್, ಕನಕಪುರ ಮುಕ್ಯರಸ್ತೆ, ಬಸವನಗುಡಿ, ಬೆಂಗಳೂರು-04
Phone: 9844048406

Synopsys

ಕವಿ ಬಾಗೂರು ಮಾರ್ಕಾಂಡೇಯ ಅವರ ಕವನ ಸಂಕಲನ-ಹಸಿ ಕ್ಯಾಸ್ವಾಸ್. 106 ಕವಿತೆಗಳಿದ್ದು, ‘...ನೆನ್ನೆಗಿಂತ ಚೆನ್ನವೆನಿಸಿ ನನ್ನ ಕಾಡುವಾಸೆಯೇ ನಿನ್ನ ಸುತ್ತುತ್ತಿದೆ ಮನಸು ಅದಕೆ ಹೆಸರು ಪ್ರೀತಿಯೇ...’ ಎನ್ನುವ ಮಧುರ ಸಾಲುಗಳಿಗೆ ಪಂ ಅಂಬಯ್ಯ ನುಲಿ ಅವರು ಸ್ವರಸಂಯೋಜಿಸಿದ್ದು ಜನಮನ ಸೆಳೆದಿದೆ. ಈ ರೀತಿ ಹಾಡಾಗಿ ಪರಿವರ್ತನೆಯಾಗಬಲ್ಲ ಹಲವಾರು ಕವಿತೆಗಳು ಈ ಕವನ ಸಂಕಲನದ ಗಟ್ಟಿತನ. 

About the Author

ಬಾಗೂರು ಮಾರ್ಕಾಂಡೇಯ
(28 June 1966)

ಕವಿ, ಕಲಾವಿದ, ಬಾಗೂರು ಮಾರ್ಕಾಂಡೇಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (ಜನನ: 28-06-1966) ಬಾಗೂರು ಗ್ರಾಮದವರು. ಪರಿಸರ, ಮಕ್ಕಳ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಸುಮಾರು 54ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ, ಬೇರುಗಳು ಚಿತ್ರ ಸರಣಿ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿದವರು, ‘ರೇಖೆಗಳಲ್ಲಿ ಭಾವಗೀತೆಗಳು’ ಮೂಲಕ ನೂತನ ಪ್ರಯೋಗಶೀಲತೆ ರೂಢಿಸಿಕೊಂಡವರು. ಕನ್ನಡದ ಸುಲಭ ಕಲಿಕೆಗೆ “ಕನ್ನಡ ಸೌರಭ” ತಂತ್ರಾಂಶ ತಯಾರಿಸಿದ್ದಾರೆ. “ಬಾಗೂರು ಕಲಾ ವೇದಿಕೆ ಟ್ರಸ್ಟ್” ರಚಿಸಿಕೊಂಡು ‘ಕಲಾ ಭೂಷಣ’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ ಕವನ ಸಂಕಲನಗಳು: ರೇಖಾಂತರಂಗದ ಭಾವಗುಸುಮ, ಭಾವಶಿಲ್ಪ, ಭಾವೋನ್ಮಾದಿನಿ, ಭಾವಸಮ್ಮಿಲನ, ಕೊಳಲದನಿ, ಕಾವ್ಯಕನ್ನಿಕೆ,  ಚೈತ್ರ ಚೆಲುವು, ಸುವರ್ಣಪುತ್ಥಳಿ,  ಸ್ವರಸಿರಿಯ ಸ್ನೇಹಲತೆ, ರಾಧಾ ಮಾಧವರ ಒಲುಮೆ ...

READ MORE

Related Books